ನವದೆಹಲಿ : ತಾಯಿಯ ಪ್ರೀತಿ ಅಂದ್ರೆ ಹಾಗೆ. ಆ ಪ್ರೀತಿಯ ಮುಂದೆ ಯಾವ ಪ್ರೀತಿಯೂ ಕೂಡ ಕಡಿಮೆ. ಅದರಲ್ಲೂ ಕರಡಿ ತನ್ನ ಮಕ್ಕಳ ಮೇಲೆ ಇಟ್ಟಿರುವ ಪ್ರೀತಿ ಬೆಟ್ಟದಷ್ಟು. ತನ್ನ ಮರಿಗಳಿಗೆ ಒಂದಿಷ್ಟು ನೋವಾದರೂ ಕೂಡ ಸಹಿಸುವುದಿಲ್ಲ. ಇನ್ನು ತನ್ನ ಮುದ್ದಾದ ಮರಿಗಳನ್ನು ಕರಡಿ ಯಾವಾಗಲೂ ಜೋಪಾನ ಮಾಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೆ ಈ ವಿಡಿಯೋ.
ಇತ್ತೀಚೆಗೆ ನಡೆದಿರುವ ಘಟನೆ ಇದು. ಇಂಗ್ಲೆಂಡ್ ದೇಶದ ವಿಂಚೆಸ್ಟರ್ ಎಂಬಲ್ಲಿ ನಡೆದಿದೆ. ತಾಯಿ ಕರಡಿ ತನ್ನ ಮರಿಗಳನ್ನು ಒಂದು ರಸ್ತೆ ಬದಿಯಿಂದ ಮತ್ತೊಂದು ಬದಿಗೆ ಸಾಗಿಸಲು ಪಡುವ ಪರದಾಟವನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ತನ್ನ ನಾಲ್ಕು ಮರಿಗಳನ್ನು ರಸ್ತೆ ದಾಟಿಸಲು ತಾಯಿ ಕರಡಿಯು ಹರಸಾಹಸ ಪಟ್ಟಿದೆ. ಒಂದು ಮರಿಯನ್ನು ರಸ್ತೆಯಿಂದ ಹೊರಗಡೆ ಕರೆದುಕೊಂಡು ಹೋಗುವ ವೇಳೆ ಮತ್ತೊಂದು ಮರಿ ಮತ್ತೆ ಹಿಂದಕ್ಕೆ ಓಡುತ್ತಿರುತ್ತದೆ.
ಇದನ್ನು ನೋಡಿದ ವಿಂಚೆಸ್ಟರ್ ಸ್ಥಳೀಯ ಪೊಲೀಸರು ಹೆದ್ದಾರಿಯಲ್ಲಿ ಓಡಾಡುವ ವಾಹನಗಳನ್ನು ಕೆಲವು ಸಮಯ ನಿಲ್ಲಿಸಿದ್ದು. ಕರಡಿ ತನ್ನ ಮರಿಗಳನ್ನು ರಸ್ತೆ ದಾಟಿಸುವ ವಿಡಿಯೋವನ್ನು ನೋಡಿದ ನೆಟ್ಟಿಗರು ಟ್ವೀಟ್ ನಲ್ಲಿ ಭಾವನಾತ್ಮಕವಾಗಿ ಬರೆಯುತ್ತಿದ್ದಾರೆ.
ಎಲ್ಲಾ ತಾಯಿಯರೂ ತನ್ನ ಮಕ್ಕಳನ್ನು ಇದೇ ರೀತಿ ನೋಡಿಕೊಳ್ಳುತ್ತಾರೆ ಎಂದು ಒಬ್ಬರು ಬರೆದರೆ, ಕರಡಿ ಮರಿಗಳು ತುಂಬಾ ಮುದ್ದಾಗಿವೆ ಎಂದಿದ್ದಾರೆ.