Advertisement

Jalandhar ರಸ್ತೆಯಲ್ಲೇ ಮಲಗಿ ಪೊಲೀಸ್‌ ಪ್ರತಿಭಟನೆ

12:01 AM Jul 24, 2023 | Shreeram Nayak |

ಜಲಂಧರ್‌: ಭ್ರಷ್ಟಾಚಾರ ಮತ್ತು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳದ ಸಹೋದ್ಯೋಗಿ ಪೊಲೀಸರ ವಿರುದ್ಧ ಹೋಮ್‌ ಗಾರ್ಡ್‌ ಪೊಲೀಸ್‌ ಒಬ್ಬರು ಪ್ರತಿಭಟಿಸಿದ್ದಾರೆ. ಹೇಗೆ ಗೊತ್ತಾ? ಪಂಜಾಬ್‌ನ ಜಲಂಧರ್‌ ಹೆದ್ದಾರಿಯಲ್ಲಿ ಉದ್ದುದ್ದ ಮಲಗಿ ಗಲಾಟೆ ಎಬ್ಬಿಸಿದ್ದಾರೆ.

Advertisement

ಶನಿವಾರ ಈ ಘಟನೆ ನಡೆದಿದ್ದು, ಇದರಿಂದ ಜಲಂಧರ್‌-ಪಠಾಣ್‌ಕೋಟ್‌ ಹೆದ್ದಾರಿ ಯಲ್ಲಿ ಕೆಲವು ಕಾಲ ಸಂಚಾರ ವ್ಯತ್ಯಯವಾಯಿತು. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೀಡಿಯೋದಲ್ಲಿ, “ನಾನು ಕಳ್ಳನನ್ನು ಹಿಡಿದು ಒಪ್ಪಿಸಿದೆ. ಆದರೆ ನನ್ನ ಠಾಣೆಯ ಪೊಲೀಸರು ಲಂಚ ತೆಗೆದುಕೊಂಡು, ಕಳ್ಳನನ್ನು ಬಿಟ್ಟಿದ್ದಾರೆ’ ಎಂದು ಘೋಷಣೆ ಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರು ಆತನನ್ನು ಸ್ಥಳದಿಂದ ಬಲವಂತವಾಗಿ ಕರೆದುಕೊಂಡು ಹೋಗಿ, ಸಂಚಾರ ಸುಗುಮಗೊಳಿಸಿದರು. “ಆರೋಪಿ ಕೋರ್ಟ್‌ನಿಂದ ಜಾಮೀನು ತೆಗೆದುಕೊಂಡ ಕಾರಣ, ಆತನನ್ನು ಬಿಡಲಾಗಿದೆ’ ಎಂದು ಬೋಗ್ಪುರ್‌ ಪೊಲೀಸ್‌ ಠಾಣೆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next