ಮಧ್ಯಪ್ರದೇಶ: ಪ್ರವಾಹ ಪರಿಸ್ಥಿತಿಯಿಂದ ಇಲ್ಲಿನ ಹಲವು ಪ್ರದೇಶಗಳು ಮುಳುಗಡೆಯಾಗಿದ್ದು, ಭಾರತೀಯ ವಾಯು ಪಡೆ(IAF) ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರನ್ನು ಏರ್ ಲಿಫ್ಟ್ ಮಾಡಿ ರಕ್ಷಿಸಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಇಂದು IAF ಪಡೆ, ಹೆಲಿಕಾಫ್ಟರ್ ಮೂಲಕ ಓರ್ವ ವೃದ್ಧ ಸೇರಿದಂತೆ ಮೂವರನ್ನು ಏರ್ ಲಿಫ್ಟ್ ಮಾಡಿದೆ. ಬಾಲಘಾಟ್‌ನ ಮೊವಾಡ್ ಗ್ರಾಮದಲ್ಲಿ ವೈಂಗಂಗಾ ನದಿಯು ಉಕ್ಕಿ ಹರಿಯುತ್ತಿದ್ದು, ದಡದಲ್ಲಿ ವಾಸಿಸುತ್ತಿದ್ದ ಹಲವರ ಮನೆಗೆಳು ಮುಳುಗಡೆಯಾಗಿದೆ. ಹಲವರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದ್ದು ಅದಾಗ್ಯೂ ಕೆಲವರು ಸಿಲುಕಿಕೊಂಡಿದ್ದರು. ಹೀಗಾಗಿ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಕ್ಕೆ ಮುಂದಾಗಿತ್ತು.
ವೈರಲ್ ವಿಡಿಯೋದಲ್ಲಿ IAF ಸಿಬ್ಬಂದಿ, ಹಗ್ಗದ ಸಹಾಯದಿಂದ ವೃದ್ದ, ಸೇರಿದಂತೆ ಮೂವರನ್ನು ರಕ್ಷಿಸಿದ್ದಾರೆ. ನದಿಗಳು ಉಕ್ಕಿಹರಿಯುತ್ತಿರುವುದರಿಂದ ಮಧ್ಯಪ್ರದೇಶದ ಹೆಚ್ಚಿನ ಭಾಗಗಳು ಮುಳುಗಡೆಯಾಗುತ್ತಿದೆ. ಭಾರತೀಯ ವಾಯುಪಡೆ (ಐಎಎಫ್) ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಗ್ರಾಮಸ್ಥರನ್ನು ರಕ್ಷಣೆ ಮಾಡುತ್ತಿದೆ.
ಹೀಗಾಗಲೇ ಪ್ರವಾಹದ ಕಾರಣದಿಂದ 8 ಜನರು ಮೃತಪಟ್ಟಿದ್ದು 9,000ಕ್ಕಿಂತ ಹೆಚ್ಚು ಜನರನ್ನೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮಧ್ಯಪ್ರದೇಶದ 12 ಜಿಲ್ಲೆಯ ನೂರಾರು ಹಳ್ಳಿಗಳು ಪ್ರವಾಹದ ಕಾರಣಕ್ಕೆ ನಲುಗಿಹೋಗಿವೆ.