Advertisement

ಕಪಾಳ ಮೋಕ್ಷ ವಿನಿಮಯಿಸಿಕೊಂಡ ಕೈ ಶಾಸಕಿ, ಕಾನ್‌ಸ್ಟೆಬಲ್‌, Watch

03:29 PM Dec 29, 2017 | udayavani editorial |

ಶಿಮ್ಲಾ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ, ಹಿಮಾಚಲ ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ನಿರ್ವಹಣೆ ಕುರಿತ ಪರಾಮರ್ಶನ ಸಭೆಯನ್ನು ಪ್ರವೇಶಿಸಲು ತನಗೆ ಬಿಡದ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಕಾಂಗ್ರೆಸ್‌ ಶಾಸಕಿ ಕಪಾಳ ಮೋಕ್ಷ ಮಾಡಿರುವುದು ಮತ್ತು ಅದಕ್ಕೆ ಪ್ರತಿಯಾಗಿ ಆ ಕಾನ್‌ಸ್ಟೆಬಲ್‌ ಆಶಾ ಕುಮಾರಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಚಿತ್ರಿಕೆ ಈಗ ವೈರಲ್‌ ಆಗಿದೆ.

Advertisement

ಶಾಸಕಿ ಆಶಾ ಕುಮಾರಿ ಅವರು ಎಐಸಿಸಿ ಯ ಪಂಜಾಬ್‌ ಪ್ರಭಾರೆ ಮತ್ತು ಈಚಿನ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಹುಟ್ಟೂರ ಡಾಲ್‌ಹೌಸಿ ಕ್ಷೇತ್ರದಿಂದ ಜಯ ಗಳಿಸಿದವರು. 

ವಿಚಿತ್ರವೆಂದರೆ ಕಾನ್‌ಸ್ಟೆಬಲ್‌ ಜತೆಗಿನ ಕಪಾಳಮೋಕ್ಷ ವಿನಿಮಯದ ಘಟನೆಯ ಫ‌ಲಶ್ರುತಿ ಏನೆಂಬುದು ಮಾತ್ರ ಈ ತನಕ ಗೊತ್ತಾಗಿಲ್ಲ. ಉಭಯತರ ನಡುವೆ ಏನಾದರೂ ರಾಜಿ ನಡೆಯಿತೇ, ದೂರು ದಾಖಲಾದವೇ – ಗೊತ್ತಿಲ್ಲ.

#WATCH Shimla: Congress MLA Asha Kumari assaults woman constable, gets slapped back. She was being allegedly denied entry by Police in Rahul Gandhi's review meeting (amateur video) pic.twitter.com/puvMRnHKss

— ANI (@ANI) December 29, 2017

Advertisement

ಹಿಮಾಲಚ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷ ತೋರಿದ ನಿರ್ವಹಣೆಯನ್ನು ವಿಮರ್ಶಿಸುವ ಸಲುವಾಗಿ ರಾಹುಲ್‌ ಅವರು ಇಂದು ಶುಕ್ರವಾರ ಶಿಮ್ಲಾಕ್ಕೆ ಬಂದು ಸಭೆ ನಡೆಸಿದ್ದರು. ರಾಹುಲ್‌ ಪಕ್ಷದ ಶಾಸಕರು, ಅಭ್ಯರ್ಥಿಗಳು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರುಗಳನ್ನು ಭೇಟಿಯಾಗಿ ಚುನಾವಣೆಯಲ್ಲಿ ಪಕ್ಷದಿಂದ ಏನು ಪ್ರಮಾದವಾಯಿತು; ಎಲ್ಲಿ ಲೋಪವಾಯಿತು ಎಂಬುದನ್ನು ಚರ್ಚಿಸಿದರು. 

68 ಸದಸ್ಯ ಬಲದ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆಯಾದರೆ ಕಾಂಗ್ರೆಸ್‌ ಕೇವಲ 21 ಸ್ಥಾನಗಳನ್ನು ಮಾತ್ರವೇ ಗೆಲ್ಲುವಲ್ಲಿ ಶಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next