Advertisement

Video: ಮನೆಗೆ ನುಗ್ಗಲು ಯತ್ನಿಸಿದ ಮೂವರು ಕಳ್ಳರನ್ನು ಬಾಗಿಲಲ್ಲೇ ತಡೆದು ನಿಲ್ಲಿಸಿದ ಮಹಿಳೆ!

12:21 PM Oct 02, 2024 | Team Udayavani |

ಚಂಡೀಗಢ: ಕಳ್ಳತನ (Theft) ಮಾಡಲು ಮನೆಯೊಳಗೆ ನುಗ್ಗಲು ಯತ್ನಿಸಿದ ಮೂವರನ್ನು ಮಹಿಳೆಯೊಬ್ಬರು ತನ್ನ ದಿಟ್ಟತನ ಹಾಗೂ ಚಾಣಾಕ್ಷತನ ತಡೆ ಹಿಡಿದಿರುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಪಂಜಾಬ್‌ನ  ಅಮೃತಸರದ (Amritsar) ವರ್ಕಾ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಹಾಡಹಗಲೇ ಮೂವರು ಮುಸುಕುಧಾರಿ ಕಳ್ಳರು ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಟೆರೇಸ್‌ ಮೇಲೆ ಬಟ್ಟೆ ಒಣಗಿಸುತ್ತಿದ್ದರು.

ಮಹಿಳೆ ಟೆರೇಸ್ ಮೇಲೆ ಬಟ್ಟೆ ಒಣಗಿಸುತ್ತಿದ್ದಾಗ ತನ್ನ ಮನೆಯ ಹೊರಗೆ ಮೂವರು ಮುಸುಕುಧಾರಿ ಬರುವುದನ್ನು ಮಹಿಳೆ ಗಮನಿಸಿದ್ದಾರೆ. ಮೂವರಲ್ಲಿ ಒಬ್ಬಾತ ಗೇಟ್‌ ತೆರೆದು ಸೀದಾ ಬಂದಿದ್ದಾನೆ. ಇದನ್ನು ನೋಡಿದ ಕೂಡಲೇ ಮಹಿಳೆ ಟೆರೇಸ್‌ ನಿಂದ ಕೆಳಗೆ ಬಂದು ಮೊದಲು ಬಾಗಿಲು ಬಂದ್‌ ಮಾಡಿದ್ದಾರೆ.

ಆದರೆ ಮೂವರು ಮುಸುಕುಧಾರಿಗಳು ಬಾಗಿಲು ಬಡಿಯಲು ಶುರು ಮಾಡಿದ್ದಾರೆ. ಇನ್ನೇನು ಬಾಗಿಲು ಒಡೆದು ಒಳಗೆ ನುಗ್ಗಬೇಕೆನ್ನುವಷ್ಟರಲ್ಲೇ ಮಹಿಳೆ ತನ್ನ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಶಕ್ತಿಯನ್ನು ಬಳಸಿ ಬಾಗಿಲನ್ನು ದೂಡಿಕೊಂಡು ನಿಂತಿದ್ದಾರೆ. ಕೆಲ ಸಮಯದ ಬಳಿಕ ಪಕ್ಕದಲ್ಲಿದ್ದ ಸೋಫಾವನ್ನು ಬಾಗಿಲು ಒರಗಿಸಿಟ್ಟಿದ್ದಾರೆ. ಮಹಿಳೆ ಕಿರುಚಾಡುತ್ತಾ ತನ್ನ ಮನೆಯವರಿಗೆ ಅಲರಾಂ ಮೂಲಕ ಅಪಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

ಕಳ್ಳರು ಕೆಲ ಸಮಯದ ಬಳಿಕ ಬಾಗಿಲು ಬಡಿದು ಅಲ್ಲಿಂದ ಪರಾರಿ ಆಗಿದ್ದಾರೆ. ಮಹಿಳೆಯ ಈ ದಿಟ್ಟತನದ ವಿಡಿಯೋ ಮನೆಯೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯ ದಿಟ್ಟತನವನ್ನು ಅನೇಕರು ಶ್ಲಾಘಿಸಿದ್ದಾರೆ.

ಸದ್ಯ ದರೋಡೆ ಯತ್ನದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next