Advertisement

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

10:07 PM Sep 28, 2024 | Team Udayavani |

ಪಡುಬಿದ್ರಿ: ಸುಮಾರು 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಈಗ ಪತ್ತೆಯಾಗಿದ್ದಾರೆ.

Advertisement

ಪಲಿಮಾರಿನಲ್ಲಿ ವಾಸವಾಗಿದ್ದ ಶ್ರುತಿ ಶೆಟ್ಟಿ ಅವರು ತನ್ನ ಅಜ್ಜಿ ಮನೆಗೆಂದು ಹೋದವರು ನಾಪತ್ತೆಯಾಗಿದ್ದ ಬಗ್ಗೆ 2014ರಲ್ಲಿ  ಅವರ ಪತಿ ಶಂಕರ ಶೆಟ್ಟಿ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2016ರಲ್ಲಿ ನಿಶ್ಚಲ ಕಡತ ಸೇರಿದ್ದ ಪ್ರಕರಣವನ್ನು ಪಡುಬಿದ್ರಿ ಠಾಣೆ ಎಎಸ್‌ಐ ರಾಜೇಶ್‌ ಹಾಗೂ ಹೆಡ್‌ಕಾನ್‌ಸ್ಟೆಬಲ್‌ ದೇವರಾಜ್‌ ಬೇಧಿಸಿದ್ದಾರೆ.

ಮಹಿಳೆ ಬೆಂಗಳೂರಿನಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಲ್ಲಿನ ವರ್ತೂರು ಪೊಲೀಸ್‌ ಠಾಣೆಯ  ಸಿಬಂದಿಯ ಸಹಕಾರದೊಂದಿಗೆ ಶ್ರುತಿ ಶೆಟ್ಟಿಯನ್ನು ಪಡುಬಿದ್ರಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನಿಂದ ಮರಳಿದ ಪೊಲೀಸರು ಪತಿ ಶಂಕರ್‌ ಶೆಟ್ಟಿ ಅವರನ್ನು ಕರೆಸಿ  ಶ್ರುತಿ ಶೆಟ್ಟಿಯ ಭಾವಚಿತ್ರವನ್ನು ತೋರಿಸಿದ್ದು, ಈಕೆ ತನ್ನ ಪತ್ನಿ ಎಂಬುದನ್ನು  ಶಂಕರ ಶೆಟ್ಟಿ ಗುರುತಿಸಿದರು. ಮಹಿಳೆಯು ಬೆಂಗಳೂರಿನಲ್ಲೇ ಇರುವುದಾಗಿ ಹೇಳಿದ್ದು, ಇದಕ್ಕೆ ಶಂಕರ ಶೆಟ್ಟಿಯೂ ಒಪ್ಪಿಕೊಂಡ ಕಾರಣ, ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next