Advertisement

Aranthodu: ಮಿತ್ತಡ್ಕದ ಮಹಿಳೆ ನಾಪತ್ತೆ; ಬಾವಿಯಲ್ಲಿ ಹುಡುಕಾಟ

11:28 PM Sep 27, 2024 | Team Udayavani |

ಅರಂತೋಡು: ಮರ್ಕಂಜದ ಮಿತ್ತಡ್ಕ ಮೋಹನ ಅವರ ಪತ್ನಿ ಶೋಭಾಲತಾ ಅವರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಅವರ ಮನೆಯ ಬಳಿ ಇರುವ ಬಾವಿಯಲ್ಲಿ ಹುಡುಕಾಟ ಶುಕ್ರವಾರ ಆರಂಭಗೊಂಡಿದೆ.

Advertisement

ಅವರು ಬಾವಿಗೆ ಹಾರಿರಬಹುದು ಎನ್ನುವ ಶಂಕೆಯಲ್ಲಿ ಬಾವಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗುರುವಾರ ಅಗ್ನಿಶಾಮಕ ದಳದ ಉಪಸ್ಥಿತಿಯಲ್ಲಿ ಬಾವಿಯ ನೀರು ಖಾಲಿ ಮಾಡಿ ಹುಡುಕುವ ಪ್ರಯತ್ನ ನಡೆಸಲಾಯಿತು. ಆದರೆ ಒಳಭಾಗದಲ್ಲಿ ಬಾವಿ ಜರಿಯುತ್ತಿದ್ದ ಕಾರಣ ಕಾರ್ಯಾಚರಣೆ ನಿಲ್ಲಿಸಲಾಯಿತು.

ಸಂಜೆಯ ವೇಳೆಗೆ ಸ್ಥಳಕ್ಕೆ ಬಂದ ಸುಳ್ಯ ತಹಶೀಲ್ದಾರ್‌ ಅವರು ಹಿಟಾಚಿ ಯಂತ್ರದ ಮೂಲಕ ಮಣ್ಣು ಅಗೆಯಲು ಸೂಚನೆ ನೀಡಿದರು. ಅದರಂತೆ ಹಿಟಾಚಿ ಯಂತ್ರ ಬಂದು ಮಣ್ಣು ತೆಗೆಯುವ ಕಾರ್ಯಾಚರಣೆ ಆರಂಭವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next