Advertisement

ಚುನಾವಣೆಯಲ್ಲಿ ಸೋತ ಬಳಿಕ ಟಿಕ್ ಸ್ಟಾರ್ ಸೋನಾಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ ?

09:53 AM Oct 26, 2019 | Mithun PG |

ನವದೆಹಲಿ:  ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಟಿಕ್ ಟಾಕ್ ಸ್ಟಾರ್, ಬಿಜೆಪಿ ಅಭ್ಯರ್ಥಿ ಸೋನಾಲಿ ಫೋಗಟ್, ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತ ಬಳಿಕೆ ಟಿಕ್ ಟಾಕ್ ಒಂದನ್ನು ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Advertisement

ಸೋನಾಲಿ ಫೋಗಟ್  29 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಎದುರು ಪರಾಜಯಗೊಂಡಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ಸೋನಾಲಿ ಪೋಗಟ್ ಕೂಡಲೇ ಟಿಕ್ ಟಾಕ್ ವಿಡಿಯೋ ಮಾಡಿದ್ದಾರೆ. ಕುಶಿ ಕೆ ಪಲ್ ಕಹಾನ್ ದೂಂಡು ಎಂಬ ಹಿಂದಿ ಹಾಡಿಗೆ ಬಹಳ ಗಂಭೀರ ಮತ್ತು ಭಾವನಾತ್ಮಕವಾಗಿ  ಅಭಿನಯಯಿಸಿದ್ದು ಲಕ್ಷಾಂತರ ಹಿಟ್ಸ್ ಪಡೆದಿವೆ.

ಸೋನಾಲಿ ಫೋಗಟ್ ಅವರು ಟಿಕ್ ಟಾಕ್ ನಲ್ಲಿ ಬರೋಬ್ಬರಿ 19 ಲಕ್ಷ ಮಂದಿ ಫಾಲೋವರ್ಸ್ ಅನ್ನು ಹೊಂದಿದ್ದರು. ಈ ಹಿನ್ನಲೆಯಲ್ಲಿ ಹರ್ಯಾಣದಲ್ಲಿ ಬಹಳ ಪ್ರಸಿದ್ದರಾಗಿದ್ದರಿಂದ ಬಿಜೆಪಿ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಹರಿಯಾಣದ ಅದಂಪುರ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕುಲ್ ದೀಪ್ ಬಿಷ್ಣೋಯ್ ವಿರುದ್ಧ ಸೋನಾಲಿ ಸೋಲನ್ನನುಭವಿಸಿದ್ದಾರೆ.

ಕುಲ್ ದೀಪ್ ಬಿಷ್ಣೋಯ್ 63,693 ಮತ ಗಳಿಸಿದ್ದರೆ, ಫೋಗಟ್ 34, 222 ಮತ ಪಡೆದು ಸೋಲನ್ನಪ್ಪಿದ್ದರು. ಕೂಡಲೇ ಸೋನಾಲಿ  ಟಿಕ್ ಟಾಕ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ  ಹರಿಯಬಿಟ್ಟು  ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next