ಬೆಂಗಳೂರು: ನಭೋಮಂಡಲದಲ್ಲಿ ಅಪರೂಪಕ್ಕೆ ಘಟಿಸುವ ಪೂರ್ಣ ಚಂದ್ರಗ್ರಹಣ ಬುಧವಾರ ಸಂಜೆ 4.22ರಿಂದ ಆರಂಭವಾಗಿದೆ. ಅತಿ ಅಪರೂಪದ ಖಗೋಳ(ಇದನ್ನೂ ಓದಿ:ಬಾನ ದಾರಿಯಲ್ಲಿ ಚಂದ್ರನ ಹೈಡ್ರಾಮಾ) ಕೌತುಕದ ವಿಸ್ಮಯವನ್ನು ನೀವೂ ಲೈವ್ ಆಗಿ ವೀಕ್ಷಿಸಿ… 6.21ಕ್ಕೆ ಪೂರ್ಣಗ್ರಹಣಸ್ತನಾಗಿ ಕೆಂಬಣ್ಣದಿಂದ ಕಾಣಿಸಿಕೊಳ್ಳಲಿದ್ದಾನೆ. ರಾತ್ರಿ 9.39ಕ್ಕೆ ಗ್ರಹಣ ಬಿಡುಗಡೆಯಾಗಲಿದೆ.
ಸೂಪರ್ ಬ್ಲೂ ಬ್ಲಡ್ ಮೂನ್ ಭಾರತದ ಹಲವು ನಗರಗಳಲ್ಲಿ ಇಂದು ರಾತ್ರಿ ಗೋಚರಿಸಲಿದೆ. ನವದೆಹಲಿ, ಮುಂಬೈ, ಉಡುಪಿ, ಅಹ್ಮದಾಬಾದ್, ಸಂಬಾಲ್ ಪುರ್, ಉಜ್ಜೈನ್ ಸೇರಿದಂತೆ ಹಲವೆಡೆ ಚಂದಿರನ ರಂಗುರಂಗಿನಾಟದ ಪ್ರಕ್ರಿಯೆ ವೀಕ್ಷಿಸಬಹುದಾಗಿದೆ.
ಗ್ರಹಣ ಸಮಯದಲ್ಲಿ ಬರಿಗಣ್ಣಿನಿಂದ ನೋಡಲು ಯಾವುದೇ ಅಭ್ಯಂತರವಿಲ್ಲ. ಮಕ್ಕಳು, ಮಹಿಳೆಯರು ಅಪೂರ್ವ ವಿಸ್ಮಯದ ಚಂದ್ರಗ್ರಹಣವನ್ನು ನೋಡಬಹುದಾಗಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
courtesy:@NASA