Advertisement

ಎ.ಐ. ಸೂಪರ್‌ ಮಾರ್ಕೆಟ್‌

06:00 AM Sep 06, 2018 | Team Udayavani |

ಕೊಚ್ಚಿ: ಈಗಂತೂ ಸೂಪರ್‌ ಮಾರ್ಕೆಟ್‌ಗಳು ತಾಲೂಕು, ಹೋಬಳಿ ಮಟ್ಟದಲ್ಲಿ ಬಂದಿವೆ. ಕೇರಳದ ಕೊಚ್ಚಿಯಲ್ಲಿ ಶುರುವಾಗಿರುವ ಸೂಪರ್‌ ಮಾರ್ಕೆಟ್‌ ಮಾತ್ರ ದೇಶದಲ್ಲಿಯೇ ವಿಶೇಷ, ಪ್ರಥಮ. ಕೃತಕ ಬುದ್ಧಿಮತ್ತೆ ಯನ್ನುಪಯೋಗಿಸಿಕೊಂಡು ಅದನ್ನು ಆರಂಭಿಸಲಾಗಿದೆ ಎಂದು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. “ವಾಟಸೇಲ್‌’ (Watasale) ಎಂಬ ಸ್ಟಾರ್ಟಪ್‌ ಅದನ್ನು ಆರಂಭಿಸಿದೆ. ಶೀಘ್ರದಲ್ಲಿಯೇ ಬೆಂಗಳೂರು, ನವದೆಹಲಿಯಲ್ಲಿಯೂ ಅದರ ಶಾಖೆಗಳು ಆರಂಭವಾಗಲಿವೆ. 24 ಗಂಟೆಗಳ ಕಾಲ ಈ ಸೂಪರ್‌ ಮಾರ್ಕೆಟ್‌ನಲ್ಲಿ ಬೇಕಾದ ವಸ್ತುಗಳನ್ನು ಖರೀದಿಸಲು ಅವಕಾಶ ಉಂಟು. ಉಳಿದ ಸೂಪರ್‌ ಮಾರ್ಕೆಟ್‌ಗಳಂತೆ ವಸ್ತುಗಳ ಖರೀದಿ ಬಳಿಕ ಬಿಲ್ಲಿಂಗ್‌ಗಾಗಿ ಸರದಿಯಲ್ಲಿ ಕಾದು ನಿಲ್ಲಬೇಕಾಗಿಲ್ಲ. ಸದ್ಯಕ್ಕೆ ಎಲ್ಲವೂ ಫ‌ಟಾಫ‌ಟ್‌ ಆಗಿ, ನಡೆಯುತ್ತದೆ.

Advertisement

ಕೃತಕ ಬುದ್ಧಿಮತ್ತೆ (ಎಐ), ಕ್ಯಾಮರಾ ಟೆಕ್ನಾಲಜಿ ಮತ್ತು ಇತರ ಸೆನ್ಸರ್‌ಗಳನ್ನು ಅಲ್ಲಿ ಬಳಕೆ ಮಾಡಲಾಗಿದೆ. ಖರೀದಿಸಿದ ವಸ್ತುವಿನ ಮೌಲ್ಯ ಪಾವತಿ ಮಾಡಲು ಖರೀದಿದಾರ ಸೂಪರ್‌ ಮಾರ್ಕೆಟ್‌ನ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಮಳಿಗೆಗೆ ಬಂದ ಕೂಡಲೇ ಕ್ಯೂಆರ್‌ ಕೋಡ್‌ ಸ್ವಯಂಚಾಲಿತವಾಗಿ ಸ್ಕ್ಯಾನ್‌ ಆಗುತ್ತದೆ. ಗ್ರಾಹಕ ತನಗೆ ಬೇಕಾದ ವಸ್ತುಗಳನ್ನು ಕಾರ್ಟ್‌ಗೆ ಸೇರಿಸಬಹುದು ಅಥವಾ ತೆಗೆಯಬಹುದು. ಯಾವ ವಸ್ತುಗಳು ಮಳಿಗೆಯಲ್ಲಿ ಇಲ್ಲ ಎಂಬ ಮಾಹಿತಿಯೂ ತಕ್ಷಣವೇ ಅಪ್‌ಡೇಟ್‌ ಆಗುತ್ತದೆ. ಗ್ರಾಹಕ ತನಗೆ ಬೇಕಾದ ವಸ್ತುಗಳನ್ನು ಖರೀದಿಸಿ ಅಲ್ಲಿಂದ ಹೊರಟ ಕೂಡಲೇ ಒಟ್ಟು ಮೊತ್ತವನ್ನು ಕಾರ್ಡ್‌ನಿಂದ ಪಡೆಯುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next