Advertisement

SRH vs CSK: ಚೆನ್ನೈಗೆ ಹೈದರಾಬಾದ್‌ ಸವಾಲು

11:03 PM Apr 04, 2024 | Team Udayavani |

ಹೈದರಾಬಾದ್‌: ಉತ್ತಮ ಫಾರ್ಮ್ ನಲ್ಲಿರುವ ಮುಸ್ತಾಫಿಜುರ್‌ ರೆಹಮಾನ್‌ ಅವರ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಶುಕ್ರವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

Advertisement

ಸ್ಥಿರ ನಿರ್ವಹಣೆ ನೀಡುತ್ತ ಬಂದಿರುವ ಚೆನ್ನೈ ತಂಡವು ಕಳೆದ ಪಂದ್ಯದ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬ್ಯಾಟಿಂಗ್‌ ಒತ್ತಡಕ್ಕೆ ಸಿಲುಕಿ ಸೋಲನ್ನು ಕಂಡಿತ್ತು. ಈ ಸೋಲನ್ನು ಮರೆತು ಆಡಲಿರುವ ಚೆನ್ನೈ ತಂಡವು ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ರಯತ್ನಿಸಲಿದೆ.

ಇದೊಂದು ದೀರ್ಘ‌ ಸಮಯದ ಕೂಟವಾಗಿದ್ದರಿಂದ ಕಳೆದ ಪಂದ್ಯದಲ್ಲಾದ ಸೋಲಿನಿಂದ ತಂಡಕ್ಕೆ ಗಂಭೀರ ಹೊಡೆತ ಬೀಳುವ ಸಾಧ್ಯತೆಯಿಲ್ಲ. ಆದರೆ ಎಚ್ಚರಿಕೆ, ಜವಾಬ್ದಾರಿಯಿಂದ ಆಡಲು ನಾವು ಪ್ರಯತ್ನಿಸಲಿದ್ದೇವೆ ಎಂದು ಚೆನ್ನೈ ನಾಯಕ ರುತುರಾಜ್‌ ಗಾಯ ಕ್ವಾಡ್‌ ಹೇಳಿದ್ದಾರೆ. ಡೆಲ್ಲಿ ವಿರುದ್ಧ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ್ದ ರುತುರಾಜ್‌ ಮತ್ತು ರಚಿನ್‌ ರವೀಂದ್ರ ಹೈದರಾಬಾದ್‌ ವಿರುದ್ಧ ಉತ್ತಮವಾಗಿ ಆಡುವ ವಿಶ್ವಾಸದಲ್ಲಿದ್ದಾರೆ.

ಎಂ. ಎಸ್‌. ಧೋನಿ ಕಳೆದ ಪಂದ್ಯದಲ್ಲಿ ಕೆಳಗಿನ ಕ್ರಮಾಂಕದಲ್ಲಿ ಆಡಲು ಬಂದು 16 ಎಸೆತಗಳಿಂದ 37 ರನ್‌ ಮಾಡಿದ್ದರು. ಅವರು ಕ್ರೀಸ್‌ನಲ್ಲಿ ಇದ್ದರೂ ತಂಡಕ್ಕೆ ಗೆಲುವು ದೊರಕಿಸಿಕೊಡಲು ಅವರಿಂದ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕಾಗಿ ಹೆಚ್ಚಿನ ಅಭಿಮಾನಿಗಳು ಧೋನಿ ಮೇಲಿನ ಕ್ರಮಾಂಕದಲ್ಲಿ ಆಡವುದು ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ಚೆನ್ನೈಯ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ. ಆದರೆ ಮುಸ್ತಾಫಿಜುರ್‌ ರೆಹಮಾನ್‌ ತವರಿಗೆ ಮರಳಿದ ಕಾರಣ ಉಳಿದ ಬೌಲರ್‌ಗಳ ಮೇಲೆ ಒತ್ತಡ ಬೀಳುವ ಸಾಧ್ಯತೆಯಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ಅಮೆರಿಕಕ್ಕೆ ತೆರಳುವ ಉದ್ದೇಶದಿಂದ ವೀಸಾ ಪ್ರಕ್ರಿಯೆಗಳಿಗಾಗಿ ಅವರು ಬಾಂಗ್ಲಾಕ್ಕೆ ತೆರಳಿದ್ದಾರೆ. ಮುಸ್ತಾಫಿಜುರ್‌ ಜತೆ ವಿದೇಶಿ ಬೌಲರ್‌ ಆಗಿ ಮತೀಶ ಪತಿರಣ ಉತ್ತಮ ದಾಳಿ ಸಂಘಟಿಸುತ್ತಿದ್ದಾರೆ.

Advertisement

ಮತ್ತೆ ಮಿಂಚುವ ಪ್ರಯತ್ನ:

ಸನ್‌ರೈಸರ್ ಹೈದರಾಬಾದ್‌ ತಂಡವು ತವರಿನ ಅಂಗಳದಲ್ಲಿ ಮತ್ತೆ ದಾಖಲೆಯ ಮೊತ್ತ ಪೇರಿಸುವ ಉತ್ಸಾಹದಲ್ಲಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ3 ವಿಕೆಟಿಗೆ 277 ರನ್ನುಗಳ ಬೃಹತ್‌ ಮೊತ್ತ ದಾಖಲಿಸಿದ್ದ ಹೈದರಾಬಾದ್‌ ತಂಡವು ಚೆನ್ನೈ ವಿರುದ್ಧವೂ ಭರ್ಜರಿ ಆಟದ ಪ್ರದರ್ಶನ ನೀಡುವ ನಿರೀಕ್ಷೆ ಇಟ್ಟುಕೊಂಡಿದೆ. ಜೈದೇವ್‌ ಉನಾದ್ಕತ್‌, ಮಾಯಾಂಕ್‌ ಮಾರ್ಕಂಡೆ, ಮಾಯಾಂಕ್‌ ಅಗರ್ವಾಲ್‌, ರಾಹುಲ್‌ ತ್ರಿಪಾಠಿ, ಐಡೆನ್‌ ಮಾರ್ಕ್‌ರಮ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುವ ವಿಶ್ವಾಸದಲ್ಲಿದ್ದಾರೆ.

ಪಿಚ್‌ ವರದಿ :

ಇಲ್ಲಿನ ರಾಜೀವ್‌ ಗಾಂಧಿ ಕ್ರಿಕೆಟ್‌ ಕ್ರೀಡಾಂಗಣದ ಪಿಚ್‌ ಬೌಲರ್‌ಗಳಿಗೆ ನೆರವಾಗುವ ಸಾಧ್ಯತೆಯಿಲ್ಲ. ಈ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಯೋಗ್ಯವಾಗಿದೆ. ಹೀಗಾಗಿ ಭಾರೀ ರನ್‌ ಹರಿದು ಬರುವ ಸಾಧ್ಯತೆಯಿದೆ. ಮುಂಬೈ ವಿರುದ್ಧ ಹೈದರಾಬಾದ್‌ ಸಿಡಿಸಿದಂತೆ ಈ ಪಂದ್ಯದಲ್ಲೂ 450  ಪ್ಲಸ್‌ ರನ್‌ ದಾಖಲಾಗುವು ಸಾಧ್ಯತೆಯಿದೆ. ಹವಾಮಾನ ಮು®ೂÕಚನೆಯಂತೆ ಇಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಸಂಜೆಯ ವೇಳೆ ಸ್ವಲ್ಪಮಟ್ಟಿಗೆ ಮೋಡ ಕವಿದ ವಾತಾವರಣ ಇರಲಿದೆ. 32ರಿಂದ 37 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next