Advertisement
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಸುಮಾರು 1.50 ಲಕ್ಷ ಪದವೀಧರ ಮತದಾರರಿದ್ದು,ಪದವಿಧರರಿಗೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಗೌರವವಿದೆ. ಪದವೀಧರರು ಈ ದೇಶದ ಬುನಾದಿ ಯಾಗಿದ್ದಾರೆ. ಪದವೀಧರರು ಯಾವುದೇ ಕಾರಣಕ್ಕೂ ಕಲುಷಿತ ವಾಗಬಾರದು.ಅವರು ತಮ್ಮ ಮತಕ್ಕೆ ಚ್ಯುತಿ ತಂದುಕೊಳ್ಳಬಾರದು. ಪದವೀಧರರ ಮತಗಳಿಗೆ ಗೌರವವಿದೆ. ಅದನ್ನು ಜಾತಿ, ಧರ್ಮ,ಪಕ್ಷ, ಹಣಕ್ಕಾಗಿ ಮಾರಿಕೊಳ್ಳಬಾರದು.
Related Articles
Advertisement
ಪೊಲೀಸರಿಗೆ ಪ್ಯಾಂಟ್: ಪೋಲೀಸರಿಗೆ ಪ್ಯಾಂಟ್ ಕೊಡಿಸಿದ್ದೆ ನಾನು ಅವರ ಪರವಾಗಿ ಹಲವಾರು ಹೋರಾಟಗಳನ್ನು ಮಾಡಿದ್ದೇನೆ ಏಕೆಂದರೆ ಅವರು ಪ್ರತಿಭಟನೆ ಮಾಡುವ ಹಾಗಿಲ್ಲ ಅವರ ಪರವಾಗಿ ನಾನಿದ್ದೇನೆ.ವಿಧಾನಪರಿಷತ್ ನಂತಹ ಹಿರಿಯರ ಸದನದಲ್ಲಿ ಹೋರಾಟಗಾರರಿರಬೇಕು. ತಾವು ಸೋತರೆ ಅದು ಪದವೀಧರರಿಗೆ ನಷ್ಟವೇ ಹೊರತು ನನಗಲ್ಲ. ಸದನದಲ್ಲಿ ಪ್ರಾಮಾಣಿಕ, ತತ್ವ ಸಿದ್ಧಾಂತಕ್ಕೆ ಬದ್ಧರಾದವರು ಇರಬೇಕು. ನಾನು ಪಕ್ಷಾಂತರಿ ಅಲ್ಲ, ಒಂದೇ ತತ್ವ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ನಾನು ತತ್ವ ಸಿದ್ಧಾಂತಕ್ಕೆ ಬದ್ಧವಾಗಿರದೆ ಪಕ್ಷಾಂತರಿ ಆಗಿದ್ದರೆ ಎರಡು ಬಾರಿ ಮುಖ್ಯಮಂತ್ರಿಯಾಗಿರುತ್ತಿದ್ದೆ ಆದ್ದರಿಂದ ದಯಮಾಡಿ ಎಲ್ಲಾ ಪದವೀಧರರು ನನ್ನ ಕ್ರಮಸಂಖ್ಯೆ 5ರ ಮುಂದೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ವಾಟಾಳ್ ಪಕ್ಷದ ಮುಖಂಡರಾದ ಅಜಯ್, ಪಾರ್ಥಸಾರಥಿ, ಕುಮಾರ್ ಉಪಸ್ಥಿತರಿದ್ದರು.