Advertisement

ಪಾಳು ಬಿದ್ದ ವಸತಿ ಗೃಹಗಳು

01:06 PM Aug 04, 2018 | Team Udayavani |

ಲಿಂಗಸುಗೂರು: ತಾಲೂಕಿನ ರೋಡಲಬಂಡಾ (ಯುಕೆಪಿ) ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸೇರಿದ ವಿವಿಧ ಕಟ್ಟಡಗಳು ಅನಾಥವಾಗಿ ಪಾಳು ಬಿದ್ದಿವೆ. ನಾರಾಯಣಪುರ ಬಸವಸಾಗರ ಜಲಾಶಯ ನಿರ್ಮಾಣದ ವೇಳೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಾಗಿ ತಾಲೂಕಿನ ರೋಡಲಬಂಡಾ ಕ್ಯಾಂಪ್‌ನಲ್ಲಿ ನಿರ್ಮಿಸಿದ ಮನೆ, ಗ್ಯಾರೇಜ್‌, ಕಚೇರಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದಿವೆ. ಕೆಲವು ಕಟ್ಟಡಗಳನ್ನು ಎನ್‌ಆರ್‌ಬಿಸಿ, ಎನ್‌ಎಲ್‌ಬಿಸಿ, ರಾಂಪುರ ಯೋಜನೆಗಳ ನಾಲೆಗಳ ವಿಭಾಗದ ಕಚೇರಿಗಳನ್ನಾಗಿ ಮಾಡಲಾಗಿದೆ. ಕೆಲ ಸಿಬ್ಬಂದಿಗಳಿಗೆ ವಸತಿ ಗೃಹ ನೀಡಲಾಗಿದೆ.

Advertisement

ಇವಲ್ಲದೇ ಮತ್ತಷ್ಟು ಕಟ್ಟಡಗಳು ಬಳಕೆ ಇಲ್ಲದೆ ಪಾಳು ಬಿದ್ದಿವೆ. ಕೆಲವು ಕಟ್ಟಡ, ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ
ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕಟ್ಟಡಗಳು ಶಿಥಿಲ: ಕೆಬಿಜೆಎನ್‌ಎಲ್‌ಗೆ ಸೇರಿದ ಕಟ್ಟಡಗಳ ಗೋಡೆಗಳು, ಮೇಲ್ಛಾವಣಿ ಬಿದ್ದಿವೆ. ಮತ್ತಷ್ಟು ಕಟ್ಟಡಗಳು ಕಿಡಗೇಡಿಗಳ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿವೆ.
 
ಈ ಕಟ್ಟಡಗಳ ಸುತ್ತಮುತ್ತ ಸಾಕಷ್ಟು ಜಾಗವಿದೆ. ಈಗಾಗಲೇ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕಥೆ ಇಲ್ಲಷ್ಟೇ ಅಲ್ಲ ತಾಲೂಕಿನ ದೇವರಭೂಪುರ ಗ್ರಾಮದಲ್ಲೂ ನೀರಾವರಿ ಇಲಾಖೆಗೆ ಸೇರಿದ ಕಟ್ಟಡಗಳು ಸಂಪೂರ್ಣ ಪಾಳುಬಿದ್ದಿವೆ. ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿವೆ. ಕಟ್ಟಡಗಳಷ್ಟೇ ಅಲ್ಲಾ ನಿಗಮಕ್ಕೆ ಸೇರಿದ ಜಾಗವೂ ಇಲ್ಲಿ ಒತ್ತುವರಿಯಾಗಿದೆ
ಎನ್ನಲಾಗಿದೆ. 
 
ಡಲಬಂಡಾ, ದೇವರಭೂಪುರ ಸೇರಿ ಇನ್ನಿತರ ಕಡೆಗಳಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸೇರಿದ ಕಟ್ಟಡಗಳು ಪಾಳು
ಬಿದ್ದಿವೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಲು ಇಲಾಖೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಅಧಿಕಾರಿಗಳು ಇಲ್ಲಿ ವಾಸ ಮಾಡದೇ ಪಟ್ಟಣ ಪ್ರದೇಶದಲ್ಲಿ ವಾಸ ಮಾಡುತ್ತಿರುವುದರಿಂದ ಕಟ್ಟಡಗಳು ಪಾಳು ಬಿದ್ದಿವೆ. ಅಧಿಕಾರಿಗಳಿಗೆ ಇಲಾಖೆಗೆ ಸೇರಿದ ಕಟ್ಟಡಗಳಲ್ಲೇ ವಾಸ ಮಾಡುವಂತೆ ಕಟ್ಟುನಿಟ್ಟಿನ ಆದೇಶ ನೀಡದರೆ ಸರ್ಕಾರಿ ಕಟ್ಟಡಗಳು ಉಪಯೋಗಕ್ಕೆ ಬರುತ್ತವೆ ಎನ್ನುತ್ತಾರೆ ಸಾರ್ವಜನಿಕರು.

ನಮ್ಮ ಇಲಾಖೆಗೆ ಸೇರಿದ ಕಟ್ಟಡಗಳು ಪಾಳು ಬಿದ್ದಿರುವ ಬಗ್ಗೆ ಗಮನಕ್ಕಿಲ್ಲ, ಗಮನಕ್ಕೆ ತಂದಿದ್ದು ಒಳ್ಳೆಯದಾಯಿತು. ಈ ಬಗ್ಗೆ ಗಮನಹರಿಸಿ ದುರಸ್ತಿ ಮಾಡಿಸಲು ಯೋಗ್ಯವಿರುವ ಕಟ್ಟಡಗಳನ್ನು ದುರಸ್ತಿ ಮಾಡಿಸುತ್ತೇವೆ. ಇಲ್ಲವೇ ತೆರವುಗೊಳಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
 ಕೃಷ್ಣೇಗೌಡ, ಮುಖ್ಯ ಅಭಿಯಂತರು, ಕೆಬಿಜೆಎನ್‌ಎಲ್‌, ನಾರಾಯಣಪುರ ವೃತ

Advertisement

Udayavani is now on Telegram. Click here to join our channel and stay updated with the latest news.

Next