Advertisement

ಪಾಳು ಬಾವಿಗೆ ಬಿದ್ದು 3 ದಿನವಾದ್ರೂ ಬದುಕಿದ!

06:25 AM Jan 15, 2018 | Team Udayavani |

ಕೊರಟಗೆರೆ: ನೀರಿಲ್ಲದ ಬಾವಿಗೆ ಬಿದ್ದು ಮೂರು ದಿನಗಳ ನಂತರ ಪತ್ತೆಯಾದ ವ್ಯಕ್ತಿ ಬದುಕುಳಿದಿರುವ ಪ್ರಕರಣ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ಬೆಳಕಿಗೆ ಬಂದಿದೆ.

Advertisement

ತೋವಿನಕೆರೆ ಗ್ರಾಮದ ಹನುಮಂತರಾಜು ಗುರುವಾರ ಬೆಳಗ್ಗೆ ಮನೆಯಿಂದ ಹೋದವರು ಶನಿವಾರ ಮಧ್ಯಾಹ್ನ ನೀರಿಲ್ಲದ ಮೂವತ್ತು ಅಡಿಗೂ ಹೆಚ್ಚು ಆಳವಿರುವ ಸಮೀಪದ ಸೂರೇನಹಳ್ಳಿಯ ಪಾಳು ಬಾವಿಯಲ್ಲಿ ಪತ್ತೆಯಾಗಿದ್ದಾರೆ. ಶನಿವಾರ ಹಾಳು ಬಾವಿಯಿಂದ ಬಾಯಿ ಬಡಿದು ಕೊಳ್ಳುವ ಶಬ್ದ ಕೇಳಿದ ವ್ಯಕ್ತಿಯೊಬ್ಬರು ಬಾವಿಯಲ್ಲಿ ಬಗ್ಗಿ ನೋಡಿದಾಗ ವ್ಯಕ್ತಿಯನ್ನು ಗುರುತಿಸಿ ಸಾರ್ವಜನಿಕರ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ನಂತರ ಕುಟುಂಬದವರಿಗೂ ತಿಳಿಸಿದ್ದು, ತೋವಿನಕೆರೆ ಆಸ್ಪತ್ರೆಯಲ್ಲಿ ಹನುಮಂತರಾಜುವಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next