Advertisement
ಕೊಳಚೆ ನೀರು ಶುದ್ಧೀಕರಣ ಮಾಡದೆ ನೇರವಾಗಿ ಗುರುವಾರ ಬೆಳಗ್ಗೆ 3.30ರಿಂದ 8ರವರೆಗೆ ಇಂದ್ರಾಣಿ ನದಿಗೆ ಬಿಡಲಾಗಿದೆ. ಇದರಿಂದಾಗಿ ಕೊಳಚೆ ನೀರು ಕಂಬಳಕಟ್ಟ ಮಾರ್ಗವಾಗಿ ಕೊಡವೂರು ಶ್ರೀಶಂಕರ ನಾರಾಯಣ ದೇವಸ್ಥಾನದ ಹಿಂಭಾಗದಿಂದ ಹರಿದು ಕಲ್ಮಾಡಿ ಬಳಿ ಸಮುದ್ರದ ಹಿನ್ನೀರನ್ನು ಸೇರಿದೆ. ಪ್ರಸ್ತುತ ನದಿ ನೀರು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ.
ಇಂದ್ರಾಣಿ ನದಿ ಬೀಡಿನಗುಡ್ಡೆ, ಕಲ್ಸಂಕ, ಮಠದಬೆಟ್ಟು, ನಿಟ್ಟೂರು, ಕಂಬಳಕಟ್ಟ ಮಾರ್ಗವಾಗಿ ಕೊಡವೂರು ಶ್ರೀಶಂಕರನಾ ರಾಯಣ ದೇವಸ್ಥಾನದ ಹಿಂಭಾಗದಿಂದ ಹರಿದು ಕಲ್ಮಾಡಿ ಬಳಿ ಸಮುದ್ರದ ಹಿನ್ನೀರನ್ನು ಸೇರುತ್ತಿತ್ತು. ಈ ನೀರನ್ನು ಕುಟುಂಬಗಳು ಕುಡಿಯುವ ನೀರಿಗೆ ಬಳಸಿಕೊಳ್ಳುತ್ತಿದ್ದವು. ಆದರೆ ಕಳೆದ 15 ವರ್ಷಗಳಿಂದೀಚೆ ಇಂದ್ರಾಣಿ ಹೊಳೆ ಮಾಲಿನ್ಯಪೂರಿತವಾಗಿದೆ. ಅದು ಸೂಸುವ ದುರ್ಗಂಧ ಪರಿಸರದಲ್ಲಿ ಬದುಕನ್ನು ಅಸಹ್ಯಗೊಳಿಸಿದೆ. ಪರಿಸರವಿಡೀ ದುರ್ನಾತ
ತ್ಯಾಜ್ಯ ನೀರನ್ನು ನಗರಸಭೆ ಶುದ್ಧೀಕರಣಗೊಳಿಸಲು ವಿಫಲವಾದ ಹಿನ್ನೆಲೆಯಲ್ಲಿ ನೇರವಾಗಿ ನದಿ ಬಿಡಲಾಗುತ್ತಿದೆ. ಇದರಿಂದಾಗಿ ಮಠದ ಬೆಟ್ಟುವಿನಿಂದ ಕಲ್ಮಾಡಿ ವರೆಗಿನ ಜನರು ದಿನ ವಿಡೀ ಮೂಗುಮುಚ್ಚಿಕೊಂಡೇ ಸಂಚರಿ ಸುವಂತಾಗಿದೆ. ನಗರಸಭೆಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಬೇಕಾದವವರು ಎಲ್ಲಾ ತ್ಯಾಜ್ಯ ನೀರು ನೇರವಾಗಿ ಇಂದ್ರಾಣಿ ಹೊಳೆ ಬಿಡಲಾಗುತ್ತಿದೆ. ಕಳೆದ ಹತ್ತಾರು ವರ್ಷಗಳಿಂದ ಮಾಡಿಕೊಂಡು ಬಂದ ಈ ಪರಿಪಾಠದಿಂದ ಇಂದು ಇಂದ್ರಾಣಿ ಮಾಲಿನ್ಯದ ಕೊಚ್ಚೆಯಾಗಿದೆ. ಅದನ್ನು ಸರಿಪಡಿಸಲು ಅಗತ್ಯವಿರುವ ಯಾವುದೇ ಪರ್ಯಾಯ ವ್ಯವಸ್ಥೆ ನಗರಸಭೆ ಅಧಿಕಾರಿಗಳ ಕೈಯಲ್ಲಿ ಇಲ್ಲ. ಜನರ ಸಮಸ್ಯೆಗಳು ಇನ್ನೂ ಅಧಿಕಾರಿಗಳಿಗೆ ಮನವರಿಕೆಯಾಗಿಲ್ಲ.
Related Articles
ಗುರುವಾರ ಮುಂಜಾನೆ 3.30 ರಿಂದ 8 ಗಂಟೆಯ ವರೆಗೆ ನಗರದ ತ್ಯಾಜ್ಯ ನೀರು ಶುದ್ಧೀಕರಿಸದೆ ನದಿ ಬಿಡಲಾಗಿದೆ. ಪ್ರಸ್ತುತ ನದಿಯ ನೀರು ಡಾಂಬರಿನ ಬಣ್ಣಕ್ಕೆ ತಿರುಗಿದೆ. ವಾಸನೆಯಿಂದ ಈ ಮಾರ್ಗದಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ.
-ಬಾಲಕೃಷ್ಣ ಕಲ್ಮಾಡಿ, ಸಾರ್ವಜನಿಕರು
Advertisement
ಯೋಜನೆ ಅಗತ್ಯಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗೆ ಮುಕ್ತಿ ದೊಡ್ಡ ಯೋಚನೆಯ ಜತೆಗೆ ಯೋಜನೆಯ ಅಗತ್ಯವಿದೆ. ನೀರು ಕಲುಷಿತಗೊಂಡಿರುವ ಕುರಿತು ಅಧಿಕಾರಿಗಳ ಗಮನಕ್ಕೆ ಈ ಹಿಂದೆ ತರಲಾಗಿದೆ.
-ಶ್ರೀಶಾ ಕೊಡವೂರು, ಮೂಡುಬೆಟ್ಟು ವಾರ್ಡ್ ಸದಸ್ಯ ಎಚ್ಚರ
ವಿದ್ಯುತ್ ಲೈನ್ ದುರಸ್ತಿ ಹಿನ್ನೆಲೆ ದಿನಪೂರ್ತಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ತ್ಯಾಜ್ಯ ನೀರು ಪಂಪ್ ಮಾಡಲು ಸಾಧ್ಯವಾಗದ ಹಿನ್ನೆಲೆ ಸಿಬಂದಿ ನೀರು ಹೊರಬಿಟ್ಟಿರುವ ಸಾಧ್ಯತೆ ಇದೆ. ಈ ಬಗ್ಗೆ ಗಮನ ಹರಿಸಲಾ ಗುತ್ತದೆ. ಮುಂದೆ ಇಂತಹ ಘಟನೆ ಗಳು ಸಂಭವಿಸದಂತೆ ಎಚ್ಚರ ವಹಿಸಲಾಗುತ್ತದೆ.
-ಸ್ನೇಹಾ, ಪರಿಸರ ಎಂಜಿನಿಯರ್. ನಗರಸಭೆ.