Advertisement
ಕೊಡವೂರು: ಇಂದ್ರಾಣಿ ನದಿಯನ್ನು ನಗರದ ಕೆಲವು ವಸತಿ ಪ್ರದೇಶಗಳು ಮತ್ತು ನಗರಸಭೆಯ ವೆಟ್‌ವೆಲ್‌ಗಳಿಂದ ಬಿಡಲಾಗುವ ತ್ಯಾಜ್ಯ ನೀರು ಬರೀ ಬಾವಿಗಳ ಬದುಕನ್ನಷ್ಟನ್ನೇ ನುಂಗಿಲ್ಲ.
Related Articles
ಪ್ರತಿ ಕೆರೆಯ ಬಳಿಯ ಹೋಗಿ ಮಾತನಾಡಿಸಿದರೂ ಕೇಳಿಬರುವುದು ಒಂದೇ ಮಾತು. “ಹಿಂದೆಲ್ಲಾ ಈ ಕೆರೆಗಳಿಂದಲೇ ನಾವು ಕೃಷಿ ಮಾಡುತ್ತಿದ್ದೆವು. ಜತೆಗೆ ಇವುಗಳಲ್ಲಿ ಚೆನ್ನಾಗಿ ನೀರಿದ್ದ ಕಾರಣ ನಮ್ಮ ಮನೆಗಳ ಬಾವಿಗಳಲ್ಲೂ ಚೆನ್ನಾಗಿ ನೀರಿರುತ್ತಿತ್ತು. ಈಗ ಎಲ್ಲವೂ ಹಾಳಾಗಿವೆ’ ಎನ್ನುತ್ತಾರೆ ಸ್ಥಳೀಯರಾದ ರಾಘವೇಂದ್ರರಾವ್.
Advertisement
ಈ ಮಾತು ಇವರೊಬ್ಬರದ್ದೇ ಅಲ್ಲ. ಸೇನರ ಜಿಡ್ಡ ಬಳಿ ಹೋದಾಗಲೂ ಅಲ್ಲೇ ಇದ್ದ ಎರಡು ಕೆರೆಗಳ ಬಗ್ಗೆಯೂ ಸ್ಥಳೀಯರೊಬ್ಬರು ಹೇಳಿದ್ದು ಇದನ್ನೇ. “ಈ ಕೆರೆಗಳಿಂದ ಸಾಕಷ್ಟು ಅನುಕೂಲವಾಗುತ್ತಿತ್ತು. ಜನರೂ ನೀರು ಬಳಸುತ್ತಿದ್ದರು. ಈಗ ಹಾಳಾದ ಕಾರಣ ಯಾರೂ ಹತ್ತಿರಕ್ಕೆ ಬರುತ್ತಿಲ್ಲ’.
ಮುಕ್ತಿಧಾಮದ ಕೆರೆಕೊಡವೂರು ಸೇತುವೆ ಬಳಿ ಇಂದ್ರಾಣಿ ತೀರ್ಥ ಹರಿದು ಹೋಗುತ್ತದೆ. ಇಲ್ಲಿ ಅಪರ ಕ್ರಿಯೆಗಳಿಗೆ ಸೂಕ್ತವಾಗುವಂತೆ ಮುಕ್ತಿ ಧಾಮ ಎಂಬುದನ್ನು ನಿರ್ಮಿಸಲಾಗಿದೆ. ಅದರ ಕೆರೆಯೂ ಈ ಇಂದ್ರಾಣಿ ತೀರ್ಥದ ತ್ಯಾಜ್ಯ ನೀರಿನಿಂದ ಹಾಳಾಗಿದೆ. ಸುತ್ತಲಿನ ಬಾವಿಯ ನೀರೂ ಹಾಳಾಗಿರುವುದರಿಂದ ಮುಕ್ತಿಧಾಮದ ಉದ್ದೇಶಕ್ಕೆ ಸಂಕಷ್ಟ ಎದುರಾಗಿದೆ. ಇಲ್ಲಿ ನೀರಿನ ಸಮಸ್ಯೆ ಒಂದಾದರೆ ಇಂದ್ರಾಣಿ ತೀರ್ಥಕ್ಕೆ ಸೇರುವ ತ್ಯಾಜ್ಯ ನೀರಿನ ದುರ್ನಾತದಿಂದ ಸುತ್ತಲಿನ ವಾತಾವರಣವೂ ಹಾಳಾಗಿದೆ. ಆಡಳಿತದ ಅವಜ್ಞೆಯಿಂದ ಈ ಸ್ಥಳದ ಪವಿತ್ರಮಯ ವಾತಾವರಣಕ್ಕೆ ಧಕ್ಕೆಯಾಗಿದೆ. ಶಂಕರನಾರಾಯಣ ತೀರ್ಥ ಕೆರೆ
ಶಂಕರನಾರಾಯಣ ತೀರ್ಥ ಕೆರೆಯೂ ಹಾಳಾಗಿದೆ. ಅದನ್ನೂ ತ್ಯಾಜ್ಯ ನೀರು ಬಿಟ್ಟಿಲ್ಲ. ಹಾಗೆಂದು ಸ್ಥಳೀಯ ನಾಗರಿಕರು ಸುಮ್ಮನೆ ಕುಳಿತಿಲ್ಲ. ವಿವಿಧ ಸಂಘಟನೆಗಳು ಸೇರಿ ಕಳೆದ ವರ್ಷ ಸುಮಾರು ಕೆಲವು ಕೆರೆಗಳ ಹೂಳೆತ್ತಿ ಸ್ವತ್ಛಗೊಳಿಸಿದ್ದಾರೆ. ಆದರೆ, ಮತ್ತೆ ಅದು ಪಾಚಿಕಟ್ಟಿಕೊಂಡು ಹಾಳಾಗಿದೆ. ಹತ್ತಿರ ಹೋದರೆ ದುರ್ನಾತ ಬರುತ್ತದೆ. ಕೆಲವು ಕೆರೆಯ ನೀರಿನಲ್ಲಿ ಎಣ್ಣೆ ಅಂಶವೂ ತೆಳ್ಳಗೆ ಕಂಡು ಬರುತ್ತಿದೆ. ಕಾನಂಗಿ ಪರಿಸರದ ಬಹುತೇಕ ಕೆರೆಗಳ ಸ್ಥಿತಿ ಹೆಚ್ಚಾ ಕಡಿಮೆ ಇದೇ. ಜಲಸಂಪನ್ಮೂಲವನ್ನು ಉಳಿಸಬೇಕಿದ್ದ ನಗರಸಭೆಯೇ ಇಂಥದೊಂದು ಅಪರಾಧ ಎಸಗುತ್ತಿದೆ ಎಂಬುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಅಭಿಪ್ರಾಯ. ನಗರ ಸಭೆಯು ತನ್ನ ವ್ಯವಸ್ಥೆಯನ್ನು ಸರಿಪಡಿಸಿ ದ್ದರೆ, ಹದಿನೈದು ವರ್ಷಗಳಲ್ಲಿ ಈ ಜಲ ಮೂಲಗಳನ್ನೆಲ್ಲ ಉಳಿಸಬಹುದಿತ್ತೆಂಬುದು ಸ್ಥಳೀಯರ ಅಭಿಪ್ರಾಯ. ಬಾವಿ ನೀರು ಏಕೆ ಹದಗೆಡುತ್ತದೆ?
ಜಲಪರಿಣತರು ಹೇಳುವಂತೆ, ಒಳಚರಂಡಿ ಸಮಸ್ಯೆಯಿಂದ, ತ್ಯಾಜ್ಯ ನೀರು ಸೇರ್ಪಡೆಯಿಂದ ಹಾಳಾಗುತ್ತದೆ. ನೀರು ಬಣ್ಣಕ್ಕೆ ತಿರುಗಿ, ಎಣ್ಣೆ ಅಂಶ ಕೂಡತೊಡಗುತ್ತದೆ. ಅದು ಬಾವಿ ನೀರು ಹಾಳಾಗುತ್ತಿರು ವುದರ ಲಕ್ಷಣ. ಇಲ್ಲೆಲ್ಲಾ ಆಗುತ್ತಿರುವುದೂ ಅದೇ. ಬಾವಿ ನೀರು ಪರಿಶೀಲಿಸಿಕೊಳ್ಳಿ
ಬಾವಿ ನೀರು ಹಾಳಾಗಲು ಮುಖ್ಯ ಕಾರಣಗಳೆಂದರೆ, ಒಳಚರಂಡಿ ಬಿರುಕು ಬಿಟ್ಟು ತ್ಯಾಜ್ಯ ನೀರಿನ ಸೋರಿಕೆ ಬಾವಿ ನೀರಿಗೆ ಸೇರುವುದು. ಮತ್ತೂಂದು ವೆಟ್‌ವೆಲ್ ಸೋರಿಕೆ ಇದ್ದಲ್ಲಿ ಮಣ್ಣು ಸಡಿಲವಾಗಿ ಅಥವಾ ಮಣ್ಣು ಸಡಿಲ ಹೊಂದಿರುವ ಪ್ರದೇಶಗಳಲ್ಲಿ ಕೊಳಚೆ ನೀರು ಹರಿದು ಬಾವಿ ನೀರು ಕಲುಷಿತವಾಗುತ್ತದೆ. ಸಮೀಪದಲ್ಲೇ ಪ್ರಾಣಿ ವಧಾ ಕೇಂದ್ರ, ರಾಸಾಯನಿಕ ಕಂಪೆನಿಗಳು ಇದ್ದರೆ ಬಾವಿ ನೀರಿಗೆ ಸಮಸ್ಯೆಯಾಗುತ್ತದೆ. ಆ ಸಂದರ್ಭದಲ್ಲಿ ಬಾವಿ ನೀರು ದುರ್ನಾತ ಬೀರುತ್ತದೆ. ಬಣ್ಣ ಬದಲಾವಣೆಯಾಗುತ್ತದೆ. ಎಣ್ಣೆ ಜಿಡ್ಡಿನ ಆಂಶವೂ ಕಂಡು ಬರುತ್ತದೆ. ಅಂಥ ಸಂದರ್ಭದಲ್ಲಿ ಅಗತ್ಯವಾಗಿ ಬಾವಿ ನೀರನ್ನು ಹತ್ತಿರದ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಬೇಕು.
– ಪ್ರೊ. ಶ್ರೀನಿಕೇತನ್,
– ಪ್ರೊ. ಗಣಪತಿ ಮಯ್ಯ,
ಜಲ ಪರಿಣತರು, ಎನ್‌ಐಟಿಕೆ, ಸುರತ್ಕಲ್ ನಾವು ತ್ಯಾಜ್ಯ ನೀರು ಬಿಡಬೇಡಿ ಎಂದು ಈಗಾಗಲೇ ಪ್ರತಿಭಟನೆ
ಮಾಡಿದ್ದೇವೆ. ಜಿಲ್ಲಾಧಿಕಾರಿಗೂ ಮನವಿ ಮಾಡಿದ್ದೇವೆ. ಇಂದ್ರಾಣಿ ತೀರ್ಥ ಮುಕ್ತಿ ಆಂದೋಲನ ಸಮಿತಿ ವತಿಯಿಂದಲೂ ಹೋರಾಟ ನಡೆಸಿದ್ದೇವೆ. ನಮ್ಮ ಕೆಲಸವನ್ನೇನೂ ನಾವು ನಿಲ್ಲಿಸಿಲ್ಲ. ಸ್ಥಳೀಯರು ಮತ್ತು ಸೇವಾ ಸಂಘಟನೆಗಳ ಸಹಾಯದಿಂದ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಆದರೂ ತ್ಯಾಜ್ಯ ನೀರು ಹರಿಯುವಿಕೆ ನಿಲ್ಲದಿದ್ದರೆ
ಇವೆಲ್ಲವೂ ಹೀಗೇ ಹಾಳಾಗುತ್ತಲೇ ಇರುತ್ತವೆ. ನಾವು ಕಾನೂನು
ರೀತಿಯ ಮಾರ್ಗವನ್ನು ಹುಡುಕಿಕೊಳ್ಳಬೇಕಿದೆ.
– ವಿಜಯ್ ಸೇರಿಗಾರ್, ಕೊಡವೂರು ವಾರ್ಡ್ ಸದಸ್ಯ