Advertisement

ತ್ಯಾಜ್ಯ ಸಂಸ್ಕರಣಾ ಘಟಕ ಅಸಮರ್ಪಕ ನಿರ್ವಹಣೆ

02:33 PM Aug 03, 2019 | Suhan S |

ಕುಣಿಗಲ್: ಗವಿಮಠ ಬಳಿಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆ ಯಂತ್ರ ಇಲ್ಲದಿರುವುದರಿಂದ ಕಸದ ರಾಶಿ ಹೆಚ್ಚಾಗಿದ್ದು, ಆವರಣದ ಸುತ್ತಲೂ ಕಸ ಹಾಕುವುದರಿಂದ ಸುತ್ತಮುತ್ತಲ ಗ್ರಾಮಸ್ಥರ ಅನಾರೋಗ್ಯಕ್ಕೆ ಕಾರಣವಾಗಿದೆ.

Advertisement

ಕಸದ ರಾಶಿ: ಕಳೆದ 9 ವರ್ಷದಿಂದ ಪಟ್ಟಣದಲ್ಲಿ ಸ್ವಚ್ಛ ಗೊಳಿಸಿದ ಕಸ ಸಂಸ್ಕರಣೆ ಮಾಡದೇ ಪುರಸಭೆ ಘನ ತ್ಯಾಜ್ಯದ ಘಟಕದಲ್ಲಿ ರಾಶಿ ಹಾಕಲಾಗುತ್ತಿದೆ. 2009 ರಲ್ಲಿ ತಾಲೂಕಿನ ಗವಿಮಠ ಸಮೀಪ ಸುಮಾರು 18 ಎಕರೆ ಜಾಗ ಗುರುತಿಸಿ ಪುರಸಭೆ ಘನತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ ಮಾಡಲು ಪುರಸಭೆ ವಶಕ್ಕೆ ನೀಡ ಲಾಯಿತು. ಘಟಕದ ಸುತ್ತ ಗೋಡೆ ನಿರ್ಮಿಸಿ ಪಟ್ಟಣ ದಲ್ಲಿ ಉತ್ಪಾದನೆಯಾಗುವ ಕಸ ಇಲ್ಲಿಗೆ ತಂದು ಹಾಕ ಲಾಗುತ್ತಿದೆ. ಘಟಕದಲ್ಲಿ ಕಸ ಸಂಸ್ಕರಿಸುವ ಯಂತ್ರೋ ಪಕರಣ ಇಲ್ಲ, 9 ವರ್ಷ ಕಳೆದರೂ ಸಂಸ್ಕರಣಾಯಂತ್ರ ಅಳವಡಿಸುವ ಗೋಜಿಗೆ ಹೋಗಿಲ್ಲ. ಅಲ್ಲದೆ ದುರ್ವಾ ಸನೆ ಬಾರದಂತೆ ಸಿಂಪಡಿಸ ಬೇಕಾದ ಕೆಮಿಕಲ್ ಇಲ್ಲಿವರೆಗೆ ಪುರಸಭೆ ಖರೀದಿಸಿಲ್ಲ. ಇದರಿಂದ ಘಟಕ ದಲ್ಲಿ ಕಳೆದ 9 ವರ್ಷದ ಕಸದ ರಾಶಿ ಶೇಖರಣೆಯಾಗಿ ತಲೆನೋವಾಗಿ ಪರಿಣಮಿಸಿದೆ.

ಕಿಡಿಗೇಡಿಗಳಿಂದ ಬೆಂಕಿ: ಕುಣಿಗಲ್ ಪಟ್ಟಣದಲ್ಲಿ ಪ್ರತಿದಿನ ಆರು ಟ್ರ್ಯಾಕ್ಟರ್‌ ಲೋಡ್‌ ಕಸ ಉತ್ಪಾದನೆ ಯಾಗುತ್ತಿದೆ. ಹೀಗೇ 9 ವರ್ಷದಿಂದ ಕಸ ಸುರಿದಿರು ವುದರಿಂದ ಸುಮಾರು 50 ಸಾವಿರ ಟನ್‌ ಕಸ ಸಂಗ್ರಹ ವಾಗಿರುವ ಸಾಧ್ಯತೆ ಇದೆ. ಕಸದ ರಾಶಿಯಿಂದ ದುರ್ವಾಸನೆ ಬರುತ್ತಿದ್ದು, ಕೆಲ ಕಿಡಿಗೇಡಿಗಳು ಕಸದ ರಾಶಿಗೆ ಬೆಂಕಿ ಹಾಕುವುದರಿಂದ ದಟ್ಟವಾದ ಹೊಗೆ ಎದ್ದು ಸುತ್ತಮುತ್ತಲ ಗ್ರಾಮಗಳಾದ ಗವಿಮಠ, ಅರಕೆರೆ, ಗಿರಿಗೌಡನಪಾಳ್ಯ, ಕಾಡಮತ್ತಿಕೆರೆ ಸೇರಿದಂತೆ ಮೊದಲಾದ ಹಲವು ಗ್ರಾಮಗಳನ್ನು ಅವರಿಸಿಕೊಂಡು ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಆಡಳಿತ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದೆ.

ಹೊಗೆಮಯ: ಕಸರಾಶಿ ಸಂಗ್ರಹವಾಗಿರುವ ಘಟಕದಲ್ಲಿ ಪದೆಪದೇ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಪುರಸಭೆ ನೌಕರರೇ ಬೆಂಕಿ ಹಾಕುತ್ತಿದ್ದಾರೋ, ಚಿಂದಿ ಹಾಯುವವರು ಬೆಂಕಿ ಹಾಕುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಪುರಸಭೆ ಮಾತ್ರ ಯಾರೋ ಕಿಡಿಗೇಡಿಗಳು ಬೆಂಕಿ ಹಾಕುತ್ತಿದ್ದಾ ರೆಂದು ಹೇಳುತ್ತಿದೆ. ಕಸದ ರಾಶಿ ಹೊತ್ತಿ ಉರಿಯುವು ದರಿಂದ ದಟ್ಟ ಹೊಗೆ ಆವರಿಸಿಕೊಂಡು ಸುತ್ತಲಿನ ಪ್ರದೇಶ ಹೊಗೆಮಯ ವಾಗಿರುತ್ತದೆ. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಘನತ್ಯಾಜ್ಯ ಘಟಕದ ನಿರ್ವಹಣೆಗೆ 2009ನೇ ಸಾಲಿನಿಂದಲೂ ಇಲ್ಲಿವರೆಗೂ ಎಸ್‌ಎಫ್‌ಸಿ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ ಮೀಸಲಿಟ್ಟಿದ್ದ ಹಣ ಖರ್ಚು ಮಾಡದೇ ಇದ್ದ ಕಾರಣ ಜಿಲ್ಲಾಧಿಕಾರಿ ಆದೇಶ ಮೇರೆಗೆ ಬೇರೆ ಕಾಮಗಾರಿಗಳಿಗೆ ಹಣ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ರಾಜ ಕಾರಣಿಗಳ ಆಡಳಿತ ಇದ್ದಾಗ ಪರಸ್ಪರ ಆರೋಪದಲ್ಲಿ ಕಾಲಹರಣ ಮಾಡುತ್ತಾರೆ. ಆದರೆ ಎಸಿ ಅವರೇ ಪುರಸಭೆ ಆಡಳಿತಾಧಿಕಾರಿಗಳಾಗಿದ್ದು, ಮಹತ್ತರ ನಿರ್ಧಾರ ಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

● ಕೆ.ಎನ್‌.ಲೋಕೇಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next