Advertisement
ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮ 2016ರ ಮತ್ತು ಮಂಗಳೂರು ಮಹಾನಗರ ಪಾಲಿಕೆ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಬೈಲಾ ಪ್ರಕಾರ ಪಾಲಿಕೆಯು 30ಕ್ಕಿಂತ ಹೆಚ್ಚು ಮನೆ, ಫ್ಲ್ಯಾಟ್ ಹೊಂದಿರುವ ಸಮುತ್ಛಯಗಳಲ್ಲಿ ಮತ್ತು ಇತರ ಅತಿ ಹೆಚ್ಚು ತ್ಯಾಜ್ಯ ಉತ್ಪತ್ತಿ ಆಗುವ ಹೊಟೇಲ್, ಆಸ್ಪತ್ರೆ, ಲಾಡ್ಜ್, ಕಲ್ಯಾಣ ಮಂಟಪ, ಕ್ಯಾಟರಿಂಗ್ ಮುಂತಾದವುಗಳಲ್ಲಿ ಸ್ವಂತ ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್ ಘಟಕವನ್ನು ಕಡ್ಡಾಯವಾಗಿ ನಿರ್ಮಿಸಿ ಅಲ್ಲೇ ಸಂಸ್ಕರಣೆ ಮಾಡುವಂತೆಮಂಗಳೂರು ಪಾಲಿಕೆ ಹಲವು ಬಾರಿ ಸೂಚನೆ ನೀಡಿದೆ. ಆದರೆ, ಅದರ ಅನುಷ್ಠಾನ ಮಾತ್ರ ಪೂರ್ಣವಾಗಿ ಜಾರಿಯಾಗಿರಲಿಲ್ಲ.
ಕಾರಣವಾಗಿತ್ತು. ಹೀಗಾಗಿ ಪಚ್ಚನಾಡಿಗೆ ತ್ಯಾಜ್ಯ ಕೊಂಡೊಯ್ಯುವ ಪರಿಪಾಠಕ್ಕೆ ಮುಕ್ತಿ ನೀಡುವ ನೆಲೆಯಿಂದ ಅಪಾರ್ಟ್ ಮೆಂಟ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆಗೆ ಆದ್ಯತೆ ನೀಡುವ ಉದ್ದೇ ಶದಿಂದ ಕಡ್ಡಾಯ ಸೂತ್ರ ಜಾರಿಗೆ ಪಾಲಿಕೆ ಮುಂದಾಗಿದೆ.
Related Articles
ಮಂಗಳೂರು ನಗರದಲ್ಲಿ ದಿನಂಪ್ರತಿ ಸರಾಸರಿ 330 ಟನ್ ಕಸ ಸಂಗ್ರಹವಾಗುತ್ತದೆ. ಇದರಲ್ಲಿ 300 ಟನ್‌ನಷ್ಟು ಹಸಿಕಸ. ಹೊಟೇಲ್, ಮನೆ ಸೇರಿದಂತೆ ಒಟ್ಟಾರೆ ಸುಮಾರು 99,000 ಕಟ್ಟಡಗಳಿವೆ. 1,180 ಕಿ.ಮೀ. ರಸ್ತೆಗಳಿವೆ. 800ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದಾರೆ. ಮನೆಮನೆಗಳಿಂದ ಸಂಗ್ರಹಿಸಿದ ಕಸವನ್ನು ಪಚ್ಚನಾಡಿಗೆ ಸಾಗಿಸಲಾಗುತ್ತದೆ. ಪಚ್ಚನಾಡಿಯಲ್ಲಿ ಹಸಿಕಸದಿಂದ ಕಾಂಪೋಸ್ಟ್ ತಯಾರಿಸುವ ಘಟಕವಿದೆ.
Advertisement
ಉರ್ವದಲ್ಲಿ ಹಸಿಕಸದಿಂದ ಬಯೋಗ್ಯಾಸ್ ತಯಾರಿಸುವ ಘಟಕವಿದೆ. ಆದರೆ ಇವುಗಳಿಂದ ಹೇಳಿಕೊಳ್ಳುವ ಯಶಸ್ಸು ಸಾಧ್ಯವಾಗಿಲ್ಲ. ಮಂಗಳೂರು ನಗರ ಬೆಳೆಯುತ್ತಿದೆ. ಜತೆಗೆ ತ್ಯಾಜ್ಯ ನಿರ್ವಹಣೆ ಕೂಡ ಸವಾಲಾಗಿ ಪರಿಣಮಿಸುತ್ತಿದೆ. ಬೆಂಗಳೂರು ನಗರ ಈಗಾಗಲೇ ಈ ಸಮಸ್ಯೆಗೆ ಸಿಲುಕಿ ನಲುಗುತ್ತಿದೆ. ಮಂಗಳೂರು ನಗರದಲ್ಲಿ ಪ್ರಸ್ತುತ ಹಾಗೂ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತ್ಯಾಜ್ಯ ನಿರ್ವಹಣೆಗೆ ವಿಭಿನ್ನ ಯೋಜನೆಗಳನ್ನು ರೂಪಿಸುವುದುಅತೀ ಅವಶ್ಯ. ಅನುಷ್ಠಾನಕ್ಕೆ ಕ್ರಮ
ಅಪಾರ್ಟ್‌ಮೆಂಟ್, ಮನೆ ಹಾಗೂ ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಪ್ರದೇಶಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆಗೆ ಈಗಾಗಲೇ ಪಾಲಿಕೆಯಿಂದ ಸೂಚನೆ ನೀಡಲಾಗಿತ್ತು. ಆದರೆ ಕೆಲವರು ಕಾಲಾವಕಾಶ ಕೇಳಿದ್ದರು ಹಾಗೂ ಕೊರೊನಾ ಕಾರಣದಿಂದ ಅನುಷ್ಠಾನ ಕೊಂಚ ವಿಳಂಬವಾಗಿತ್ತು. ಶೀಘ್ರದಲ್ಲಿ ಇದರ ಅನುಷ್ಠಾನಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅನುಷ್ಠಾನಗೊಳಿಸದವರ ಮೇಲೆ ದಂಡ ವಿಧಿಸಲಾಗುವುದು.
-ಅಕ್ಷಯ್ ಶ್ರೀಧರ್,
ಆಯುಕ್ತರು, ಮಂಗಳೂರು ಪಾಲಿಕೆ ತ್ಯಾಜ್ಯ ಸಂಸ್ಕರಣೆನಡೆಸುವವರ ಸಂಖ್ಯೆ
ಅಪಾರ್ಟ್‌ಮೆಂಟ್‌ಗಳು 71
ಪ್ರತ್ಯೇಕ ಮನೆಗಳು 32
ಮಾಲ್, ಮಳಿಗೆಗಳು 8
ಒಟ್ಟು 111 *ದಿನೇಶ್ ಇರಾ