Advertisement
ಸಾಮಾಜಿಕ ಜವಾಬ್ದಾರಿ ಅರಿಯದ ಕೆಲವರು ತಮ್ಮ ಮನೆಯ ಸಮಾರಂಭಗಳ ಬಳಿಕ ರಾಶಿ, ರಾಶಿ ಊಟದ ಎಲೆಯನ್ನು ಮತ್ತೆ ಕೆಲವರು ಉಪಯುಕ್ತವಲ್ಲದ ಬಟ್ಟೆ ಬರೆ ಸೇರಿ ತಮ್ಮ ಮನೆಯ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿ ಬದಿ ಸುರಿದು ಕೈತೊಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕ ಬೇಕಾದವರು ಯಾರು ಎಂಬುದು ಸದ್ಯದ ಪ್ರಶ್ನೆಯಾಗಿದೆ.
Related Articles
Advertisement
ಈ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಿರುಗಿ ನೋಡದೆ ಇರುವುದು ದುರಾದೃಷ್ಟಕರ ಸಂಗತಿ. ಹೆದ್ದಾರಿ ಇಲಾಖೆ ಹಾಗೂ ನಗರಸಭೆ ಪರಸ್ಪರ ಬೆಟ್ಟು ತೋರುತ್ತಾ ನೈರ್ಮಲ್ಯಕ್ಕೆ ಆಸ್ಪದ ನೀಡಿಲ್ಲ. ಈಗಾಗಲೇ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದಷ್ಟೇ ಅಲ್ಲದೆ ಮುಂದೆ ಈ ರೀತಿ ಯಾರು ತ್ಯಾಜ್ಯವನ್ನು ತಂದು ಹಾಕದಂತೆ ನೋಡಿಕೊಳ್ಳುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
“ ಪರಿಸರವನ್ನು ಸ್ವತ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ನಮ್ಮ ಮನೆ ಅಂಗಳದಂತೆ ಸ್ವತ್ಛವಾಗಿಟ್ಟುಕೊಳ್ಳಬೇಕು. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಪರಿಸರಕ್ಕೆ ಹಾನಿ ಮಾಡುವವರಿಗೆ ತಕ್ಕ ದಂಡನೆ ನೀಡದೆ ಇರುವುದರಿಂದ ಅಶುಚಿತ್ವ ತಾಂಡವವಾಡಲು ಕಾರಣ”
– ದರ್ಶನ್, ರೋಟರಿ ಸಂಸ್ಥೆ ಅಧ್ಯಕ.
“ಕಂತೇನಹಳ್ಳಿ ಕೆರೆ ಏರಿ ಮೇಲಿನ ನಿರ್ವಹಣೆ ನಗರಸಭೆಯದ್ದಲ್ಲ. ಆದರೂ, ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಈಗಾಗಲೇ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.” – ಸಿ.ಗಿರೀಶ್, ನಗರಸಭೆ ಅಧ್ಯಕ್ಷರು
ನಗರಸಭೆಗೆ ಸೂಕ್ತ ನಿರ್ದೇಶನ
ಪರಿಸರ ಸ್ವತ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಹೆದ್ದಾರಿ ಬದಿಯ ತ್ಯಾಜ್ಯ ವಿಲೇವಾರಿ ಮಾಡಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಗರಸಭೆ ಹೆದ್ದಾರಿ ಹಾಗೂ ಸಣ್ಣ ನೀರಾವರಿ ಇಲಾಖೆಗೆ ನಿರ್ದೇಶನ ನೀಡುತ್ತೇನೆ. ಅಲ್ಲದೇ, ಕೂಡಲೇ ಕ್ರಮ ಕೈಗೊಳ್ಳುತ್ತೇನೆಂದು ತಹಶೀಲ್ದಾರ್ ಸಂತೋಷ್ ಕುಮಾರ್ ತಿಳಿಸಿದರು.