Advertisement

ಕುಡಿಯುವ ನೀರು ಪೋಲು: ದುರಸ್ತಿ ಕಾಮಗಾರಿ ಆರಂಭ

12:39 AM Mar 25, 2021 | Team Udayavani |

ಮಹಾನಗರ: ನಗರದ ಸದಾ ಜನನಿಬಿಡ ಕುದು¾ಲ್‌ ರಂಗರಾವ್‌ ರಸ್ತೆಯ ಅಲೋಶಿಯಸ್‌ ಹಿರಿಯ ಪ್ರಾ. ಶಾಲೆ ಗೇಟ್‌ ಮುಂಭಾಗ ಹಲವು ತಿಂಗಳುಗಳಿಂದ ಕುಡಿಯುವ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಇದೀಗ ಎಚ್ಚೆತ್ತುಕೊಂಡ ಮನಪಾ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾಮಗಾರಿಯಲ್ಲಿ ತೊಡಗಿದೆ.

Advertisement

ಈ ಪ್ರದೇಶದಲ್ಲಿ ಕೆಲವು ತಿಂಗಳ ಹಿಂದೆ ರಸ್ತೆ ಅಗೆದು ಕಾಮಗಾರಿ ನಡೆಸಲಾಗಿತ್ತು. ಕಾಂಕ್ರೀಟ್‌ ರಸ್ತೆಯಡಿಯಲ್ಲಿ ಪೈಪ್‌ ಒಡೆದು ಅಲ್ಲೇ ಇರುವ ವಿದ್ಯುತ್‌ ಕಂಬದ ಬುಡದಿಂದ ನೀರು ಹೊರಕ್ಕೆ ಬರುತ್ತಿತ್ತು. ಹೀಗೆ ಹೊರ ಬಂದ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲೇ ಸಂಗ್ರಹಗೊಂಡಿತ್ತು.

ಇದರಿಂದಾಗಿ ಸೊಳ್ಳೆ ಉತ್ಪತ್ತಿಯ ತಾಣವಾಗಿ ಮಾರ್ಪಾಡಾಗಿತ್ತು. ಈ ಕುರಿತಂತೆ ಕೆಲವು ದಿನಗಳ ಹಿಂದೆ “ಉದಯವಾಣಿ ಸುದಿನ’ ವರದಿ ಪ್ರಕಟಿಸಿದ್ದು, ಪಾಲಿಕೆ ಅಧಿಕಾರಿಗಳು ಎಚ್ಚೆತ್ತು, ಕಾಮಗಾರಿ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next