Advertisement
ಪ್ರಥಮ ಆದ್ಯತೆಯಾಗಿ ತ್ಯಾಜ್ಯ ನಿರ್ವಹಣ ಘಟಕ ನಿರ್ಮಾಣ ಪೂರ್ವ ಯೋಜಿತವಾಗಿ ಹಸಿ-ಒಣ ಕಸ ವಿಂಗ ಡಿಸಿ ನೀಡಿದರಷ್ಟೇ ತ್ಯಾಜ್ಯ ಸಂಗ್ರಹಕ್ಕೆ ಮುಂದಾಗಿದೆ.
Related Articles
Advertisement
ಈ ಹಿಂದೆ ಹಸಿ-ಕಸ ವಿಂಗಡಿಸಿ ನೀಡುವಂತೆ ನಿಯಮ ರೂಪಿಸಿದ್ದರೂ ಸಮರ್ಪಕವಾಗಿ ಕಾರ್ಯಗತಗೊಂಡಿ ರಲಿಲ್ಲ. ಭವಿಷ್ಯದಲ್ಲಿ ತ್ಯಾಜ್ಯ ಸಮಸ್ಯೆ ತಲೆದೋರುವ ಸಾಧ್ಯತೆಯಿದ ಪ್ರತಿ ಗ್ರಾ.ಪಂ. ನಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಅದ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಹೊಟೇಲ್, ಮಳಿಗೆಗಳು, ಸರಕಾರಿ ವಸತಿ ಗೃಹಗಳು, ಸಂತೆಮಾರುಕಟ್ಟೆ, ಮನೆ ನಿವೇ ಶನಗಳಿರುವುದರಿಂದ ಹೆಚ್ಚು ತ್ಯಾಜ್ಯ ಉತ್ಪತ್ತಿ ಆಗುತ್ತದೆ.
ಪ್ಲಾಸ್ಟಕ್ ನಿಷೇಧಕ್ಕೆ ಆದ್ಯತೆ :
ಪ್ಲಾಸ್ಟಿಕ್ ನಿಷೇಧಕ್ಕೆ ಆದ್ಯತೆ ನೀಡುತ್ತಿದ್ದು, ಈ ಬಗ್ಗೆ ಮಳಿಗೆಗಳಿಗೆ ದಾಳಿ ನಡೆಸಿ ದಂಡ ವಿಧಿಸುವುದು, ಸಾರ್ವಜನಿಕ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ. ಹಸಿಕಸ, ಒಣಕಸ ವಿಂಗಡನೆಗೆ ನ.ಪಂ. ಎಲ್ಲ ಸಿಬಂದಿ ವಾರದ ಒಂದು ದಿವಸ ಸಮವಸ್ತ್ರ ಬಳಸುವ ಮೂಲಕ ಜಾಗೃತಿ ಮೂಡಿಸಿ ಮಾದರಿಯಾಗಿದ್ದಾರೆ. ಹಸುರು ಬಣ್ಣದ ಸಮವಸ್ತ್ರ ತೊಟ್ಟು ಹಸಿ ಕಸ ಸಂಗ್ರಹ, ನೀಲಿ ಬಣ್ಣದ ಸಮವಸ್ತ್ರ ಧರಿಸುವ ಮೂಲಕ ಒಣ ಕಸ ಸಂಗ್ರಹ ಎಂಬ ಜಾಗೃತಿ ಮೂಡಿಸುತ್ತಿದ್ದಾರೆ. ಸ್ವತ್ಛತಾ ವಿಲೇವಾರಿಗಾಗಿ ಪ್ರತೀ ನಿತ್ಯ ಮೂರು ವಾಹನಗಳು, 9 ಪೌರಕಾರ್ಮಿಕರನ್ನು ನೇಮಕ ಮಾಡಲಾಗಿದೆ.
ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ಸಾರ್ವಜನಿಕ ತೊಟ್ಟಿಗಳನ್ನು ಕಸ ಸಂಗ್ರಹಣೆಗಾಗಿ ಇಡಲಾಗಿತ್ತು. ಇದ ರಿಂದ ವಿಂಗಡಣೆ ಸವಾಲಾಗಿತ್ತು. ಹೊರ ಪ್ರದೇಶದಿಂದ ಕಸಗಳನ್ನು ತಂದು ಹಾಕು ವುದು, ಬೀದಿ ನಾಯಿಗಳ ಹಾವಳಿ ಸೇರಿದಂತೆ ಎಲ್ಲ ಸಮಸ್ಯೆಗಳಿಂದ ಮುಕ್ತ ಗೊಳಿಸಲು ಸಾರ್ವಜನಿಕ ತೊಟ್ಟಿಗಳನ್ನು ನಿಷೇಧಿಸಿದ್ದು ತ್ಯಾಜ್ಯ ಸಂಗ್ರಹ ವಾಹನ ಗಳಿಂದ ಮಾತ್ರ ಕಸ ಸಂಗ್ರಹ ವಾಗುತ್ತಿದೆ.–ರಜನಿ ಕುಡ್ವ , ಅಧ್ಯಕ್ಷರು, ನ.ಪಂ. ಬೆಳ್ತಂಗಡಿ
ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಇನ್ನಷ್ಟು ವೇಗ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ತ್ಯಾಜ್ಯ ಸಂಗ್ರಹಣೆಗೆ ಮೂರು ಸಂಸ್ಥೆಗಳು ಈಗಾಗಲೇ ಭೇಟಿಯಾಗಿದ್ದು, ಇದರಲ್ಲಿ ಸೂಕ್ತ ಯಾವುದು ಎಂದು ನಿರ್ಣಯಿಸಿ ಆ ಸಂಸ್ಥೆಗಳಿಗೆ ತ್ಯಾಜ್ಯ ವಿಲೇವಾರಿಗೆ ನೀಡಲಾಗುತ್ತದೆ. –ಸುಧಾಕರ್, ಮುಖ್ಯಾಧಿಕಾರಿ, ನ.ಪಂ. ಬೆಳ್ತಂಗಡಿ
– ಚೈತ್ರೇಶ್ ಇಳಂತಿಲ