Advertisement
ವಿಲೇವಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿದ್ದರೂ, ಡಂಪಿಂಗ್ ಯಾರ್ಡ್‌ಗಳಲ್ಲಿ ಕಸದ ರಾಶಿ ದ್ವಿಗುಣಗೊಳ್ಳುತ್ತಲೇ ಇದೆ. ತ್ಯಾಜ್ಯ ನಿರ್ವಹಣೆಯ ಸಮರ್ಪಕ ಕಲ್ಪನೆಯನ್ನು ಯುವಜನರಿಗೆ ನೀಡುವ ಉದ್ದೇಶದಿಂದ ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗವು 2019-20ನೇ ಸಾಲಿನಿಂದ ಸ್ಥಳೀಯ ಸಂಸ್ಥೆಗಳ ಘನತ್ಯಾಜ್ಯ ನಿರ್ವಹಣೆಯ ಕುರಿತಾದ ಹೊಸ ಕೋರ್ಸ್ ಆರಂಭಿಸುತ್ತಿದೆ.
Related Articles
Advertisement
ನಂತರ ಸೆಮಿಸ್ಟರ್‌ಗಳಲ್ಲಿ ತ್ಯಾಜ್ಯದ ಸಮಸ್ಯೆಗೆ ಕಾರಣವೇನು, ದಿನೇದಿನೇ ಉತ್ಪತ್ತಿಯಾಗುತ್ತಿರುವ ಟನ್‌ಗಳಷ್ಟು ತ್ಯಾಜ್ಯದ ಸಮರ್ಪಕ ವಿಲೇವಾರಿಗೆ ಏನು ಮಾಡಬೇಕು, ವೈಜ್ಞಾನಿಕ ಕ್ರಮಗಳು ಯಾವುದು, ಸಂಸ್ಕರಣ ಘಟಕಗಳು ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಆಧುನಿಕ ಜಗತ್ತಿನಲ್ಲಿ ಇ-ತ್ಯಾಜ್ಯ ಹೆಚ್ಚುತ್ತಿದ್ದು, ಅದರ ವಿಲೇವಾರಿ ಹೇಗೆ ಎಂಬುದನ್ನು ಪ್ರಾಯೋಗಿಕ ತರಗತಿಗ ಮೂಲಕ ಕಲಿಸಿಕೊಡಲಾಗುತ್ತದೆ.
ದಿನೇದಿನೇ ಹೆಚ್ಚುತ್ತಿರುವ ತ್ಯಾಜ್ಯದಿಂದ ಅಂತರ್ಜಲದ ಮೇಲಾಗುವ ದುಷ್ಪರಿಣಾಮ, ಕೆರೆ, ಬಾವಿ, ನದಿ ನೀರುಗಳು ಕಲುಷಿತವಾಗುವುದನ್ನು ತಡೆಗಟ್ಟುವ ವಿಧಾನ, ತ್ಯಾಜ್ಯಗಳಿಂದಾಗಿ ಪ್ರಾಕೃತಿ ಸಂಪತ್ತಿನ ರಕ್ಷಣೆ ಹೇಗೆ ಎಂಬಿತ್ಯಾದಿ ಹಲವು ಅಂಶಗಳನ್ನು ಕೂಲಂಕಷವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ಕಸ ವಿಲೇವಾರಿ ಘಟಕ, ಸಂಸ್ಕರಣ ಘಟಕಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪ್ರಾಯೋಗಿಕವಾಗಿ ಬೋಧಿಸುವ ಕ್ರಮವೂ ಇದೆ ಎಂದು ವಿವರಿಸಿದರು.
ಉದ್ಯೋಗಾವಕಾಶ ಹೆಚ್ಚಿದೆ: ತ್ಯಾಜ್ಯವಿಲೇವಾರಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ಜತೆಗೆ ಹೊಸ ಆವಿಷ್ಕಾರಗಳ ಅಗತ್ಯವಿದೆ. ಅತ್ಯಂತ ಸರಳ ವಿಧಾನದಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆ ಮತ್ತು ಅದರ ಮರುಬಳಕೆಯನ್ನು ಜನ ಸಾಮಾನ್ಯರಿಗೆ ಸಮರ್ಪಕವಾಗಿ ತಿಳಿಸುವ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಿದೆ. ಅದರೆ, ಕೌಶಲತೆಯ ಕೊರತೆ ಇದೆ.
ತ್ಯಾಜ್ಯ ಸಂಸ್ಕರಣೆಯ ಕೋರ್ಸ್ ಮೂಲಕ ಯುವ ಜನರಿಗೆ ಕೌಶಲ್ಯತೆ ತುಂಬುವುದರೊಂದಿಗೆ ಉದ್ಯೋಗಕ್ಕೂ ದಾರಿ ಮಾಡಿಕೊಡಲಿದ್ದೇವೆ. ವಿಶ್ವವಿದ್ಯಾಲಯದ ಅನುದಾನ ಆಯೋಗದಿಂದ ಕೋರ್ಸ್‌ಗೆ ಬೇಕಾದ ಎಲ್ಲ ರೀತಿಯ ಪರವಾನಿಗೆ ತೆಗೆದುಕೊಂಡಿದ್ದೇವೆ. ಹಾಗೆಯೇ ಪಠ್ಯಕ್ರಮವೂ ಸಿದ್ಧವಾಗಿದೆ ಎಂದು ಬೆಂವಿವಿ ಉನ್ನತ ಮೂಲ ಖಚಿತಪಡಿಸಿದೆ.
ಪರಿಸರ ಇಂದಿನ ಅಗತ್ಯವಾಗಿದೆ. ಪರಿಸರ ಉಳಿಸದೇ ಇದ್ದರೆ ನಾವ್ಯಾರೂ ಬದುಕಿರಲು ಸಾಧ್ಯವಿಲ್ಲ. ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು ಮತ್ತು ಕಸದಿಂದ ರಸ ಮಾಡುವ ಕೌಶಲತೆ ಬೆಳೆಸಬೇಕು ಎಂಬ ಉದ್ದೇಶದಿಂದ ಈ ಕೋರ್ಸ್ ಆರಂಭಿಸುತ್ತಿದ್ದೇವೆ. ಇದರ ಸಂಪೂರ್ಣ ಮಾಹಿತಿಯನ್ನು ಬೆಂವಿವಿ ವೆಬ್‌ಸೈಟ್‌ನಲ್ಲಿ ಹಾಕಿದ್ದೇವೆ.-ಪ್ರೊ.ಎನ್.ನಂದಿನಿ, ಮುಖ್ಯಸ್ಥೆ, ಪರಿಸರ ವಿಜ್ಞಾನ ವಿಭಾಗ, ಬೆಂವಿವಿ