Advertisement

ತ್ಯಾಜ್ಯ ವೈಜ್ಞಾನಿಕ ವಿಲೇವಾರಿಯಿಂದ ಹಾನಿಯಿಲ್ಲ

02:23 PM Jun 09, 2019 | Suhan S |

ರಾಮನಗರ: ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ಗಡಿ ಭಾಗ ಕಣ್ವ ಗ್ರಾಮದ ಬಳಿಯ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮತ್ತೆ ವಿರೋಧ ವ್ಯಕ್ತವಾಗಿದೆ. ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಕಣ್ವ ಗ್ರಾಮದ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಕಣ್ವ ಗ್ರಾಮದ ಬಳಿಯ ಗೋಮಾಳ ಸ್ಥಳ ಇಳಿಜಾರಿನದ್ದಾಗಿದೆ. ಇಲ್ಲಿ ತಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದರೆ, ಕಲುಷಿತ ನೀರು ಜನವಸತಿ ಪ್ರದೇಶಗಳಿಗೆ ಹರಿದು ಬರುತ್ತದೆ. ಪಕ್ಕದಲ್ಲೇ ಇರುವ ಕಣ್ವ ನದಿ ಮಲೀನಗೊಳ್ಳುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸದಿದರು.

Advertisement

ಕಸದಿಂದ ಈಗಾಗಿರುವ ಅನಾಹುತವೇ ಸಾಕು: ರೈತ ಸಂಘದ  ಘಟಕದ ಅಧ್ಯಕ್ಷ ಕೆ.ಎಸ್‌. ಲಕ್ಷ್ಮಣ ಸ್ವಾಮಿ ಮಾತನಾಡಿ ಕೆಲವು ವರ್ಷಗಳ ಹಿಂದೆ ಕಣ್ವ ಗ್ರಾಮದ ಬಳಿಯ ಗೋಮಾಳದಲ್ಲಿ ಅವೈಜ್ಞಾನಿಕವಾಗಿ ಚನ್ನಪಟ್ಟಣ ಮತ್ತು ರಾಮನಗರ ನಗರಸಭೆಗಳು ಇಲ್ಲಿ ಟನ್‌ಗಟ್ಟಲೆ ಕಸ ಸುರಿದಿವೆ. ಮಳೆಗಾಲದಲ್ಲಿ ಈ ಕಸ ತೋಯ್ದು, ಕೊಳೆತು, ಇಳಿಜಾರಿನಲ್ಲಿ ಮಲೀನ ನೀರು ಹರಿದಿದೆ. ಕಣ್ವ ನದಿಯನ್ನು ಸೇರಿದೆ. ಸುತ್ತಮುತ್ತಲ ಸ್ಥಳವನ್ನು ಮಲೀನಗೊಳಿಸಿದೆ. ಇದು ಇಡೀ ಪರಿಸರ ವನ್ನು ಮಲೀನಗೊಳಿಸಲು ಆರಂಭಿಸಿದ್ದರಿಂದಲೇ ಪ್ರತಿಭಟನೆಗಳು ನಡೆದಿವೆ. ಕಸ ಸುರಿಯುವುದನ್ನು ತಡೆಯಲಾಗಿದೆ ಎಂದು ಗ್ರಾಮಸ್ಥರ ವಿರೋಧಕ್ಕೆ ಕಾರಣವನ್ನು ಸ್ಪಷ್ಟಪಡಿಸಿದರು.

ತಪ್ಪು ಕಲ್ಪನೆ, ಅಪನಂಬಿಕೆ ಬೇಡ: ಕನ್ನಡ ಸಾಹಿತ್ಯ ಪರಿಷತ್ತಿನ  ಘಟಕದ ಅಧ್ಯಕ್ಷ$ ಸಿಂ.ಲಿಂ. ನಾಗರಾಜ ಮಾತನಾಡಿ, ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಆ ಭಾಗದ ಜನರಲ್ಲಿ ಕೆಲ ತಪ್ಪು ಕಲ್ಪನೆ ಮತ್ತು ಅಪನಂಬಿ ಕೆಗಳಿವೆ. ಅದನ್ನು ಹೋಗಲಾಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಮೈಸೂರಿನಲ್ಲಿ ನಿರ್ಮಿಸಲಾದ ತ್ಯಾಜ್ಯ ವಿಲೇವಾರಿ ಘಟಕ ಅತ್ಯಂತ ವೈಜ್ಞಾನಿಕ ಮತ್ತು ಆಧುನಿಕವಾಗಿದೆ. ಕಡಿಮೆ ಸ್ಥಳಾವಕಾಶ ಸಾಕಾಗುತ್ತದೆ ಎಂದು ಹೇಳಿದರು.

ಗ್ರಾಮಸ್ಥರ ಮನವೊಲಿಸುವ ಪ್ರಯತ್ನ: ಜಿಲ್ಲಾ ಪಂಚಾಯ್ತಿ ಸಿಇಒ ಎಂ.ಪಿ. ಮುಲ್ಲೆ ಮುಹಿಲನ್‌ ಮಾತನಾಡಿ, ಕಣ್ವ ಗ್ರಾಮದ ಬಳಿಯ ಗೋಮಾಳದಲ್ಲಿ ಉದ್ದೇಶಿಸಲಾಗಿರುವ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸಂಬಂಧ ಆ ಭಾಗದ ಜನಪ್ರತಿನಿಧಿಗಳು ಮತ್ತು ಪ್ರಮುಖರ ಮನವೊಲಿಸುವ ಪ್ರಯತ್ನ ಮುಂದುವರಿಯಲಿದೆ ಎಂದರು.

ಘಟಕ ಸ್ಥಾಪನೆ ಅನಿವಾರ್ಯ: ಎರಡೂ ನಗರಗಳಲ್ಲಿ ಉತ್ಪಾದನೆಯಾಗುತ್ತಿರುವ ಕಸದ ನಿರ್ವಹಣೆಗೆ ವಿಲೇವಾರಿ ಘಟಕ ಸ್ಥಾಪನೆ ಅನಿವಾರ್ಯ. ಆದರೆ ಸ್ಥಳೀಯರ ವಿರೋಧದಿಂದಾ ಗಿಯೇ ವೈಜ್ಞಾನಿಕ ವಿಲೇವಾರಿ ಯೋಜನೆ ನನೆಗುದಿಗೆ ಬಿದ್ದಿದೆ. ಆ ಭಾಗದ ರೈತ ಮುಖಂಡರು, ಹೋರಾಟ ಗಾರರು, ಎರಡು ನಗರಸಭೆ ಆಯುಕ್ತರು ಸೂಕವಾಗಿ ಚರ್ಚಿಸಿ ನಿರ್ಣಯಕ್ಕೆ ಬರಬೇಕಾಗಿದೆ. ಕಣ್ವ ಬಳಿ ಕಸ ವಿಲೇವಾರಿ ಘಟಕ ಸ್ಥಾಪನೆಯಿಂದ ಪರಿಸರಕ್ಕೆ ಹಾನಿಯಾಗದಂತೆ ಮತ್ತು ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡುವ ಭರವಸೆ ನೀಡಿದರು.

Advertisement

ಗಮನ ಸೆಳೆದ ಕಕಜವೇ ಪದಾಧಿಕಾರಿಗಳು: ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ ಗೌಡ, ಜಿಲ್ಲಾ  ಘಟಕದ ಯೋಗೇಶ್‌ ಗೌಡ ತಮ್ಮ ಕುತ್ತಿಗೆಗೆ ಪ್ಲಾಸ್ಟಿಕ್‌ ಬಾಟಲಿ ಮುಂತಾದ ವಸ್ತುಗಳ ಹಾರವನ್ನು ಧರಿಸಿದ್ದು ಗಮನ ಸೆಳೆಯಿತು.ಪ್ಲಾಸ್ಟಿಕ್‌ ಬಳಕೆಯನ್ನು ನಿಯಂತ್ರಿಸಿ ಪರಿಸರ ಉಳಿಸಿ ಎಂಬ ಸಂದೇಶವನ್ನು ಜಿಲ್ಲಾಡಳಿತಕ್ಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next