Advertisement

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ರಾಶಿ

11:05 PM Jun 29, 2019 | sudhir |

ಕಾರ್ಕಳ: ಸ್ವಚ್ಛತಾ ಅಭಿಯಾನ, ಜಾಗೃತಿ, ಅರಿವಿನ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕಸ ಎಲ್ಲೆಂದರಲ್ಲಿ ಸುರಿಯುವವರ ಸಂಖ್ಯೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

Advertisement

ಅಣಕಿಸುವಂತಿದೆ

ಸ್ವಚ್ಛ ಕಾರ್ಕಳ, ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಅಣಕಿಸುವಂತಿದೆ ಪುರಸಭಾ ವ್ಯಾಪ್ತಿಯಲ್ಲಿ ಕಂಡುಬರುವ ಕಸ-ತ್ಯಾಜ್ಯದ ರಾಶಿಗಳು. ಸಾಲ್ಮರ ಜಾಮೀಯಾ ಮಸೀದಿಯ ವಾಣಿಜ್ಯ ಸಂಕೀರ್ಣದ ಬಳಿ ಕಸದ ರಾಶಿ ತುಂಬಿದ್ದು ಗಬ್ಬುನಾಥ ಬೀರುತ್ತಿದೆ. ಸಾರ್ವಜನಿಕರು, ಪಾದಚಾರಿಗಳು ಮೂಗು ಮುಚ್ಚಿಕೊಂಡೇ ನಡೆದಾಡಬೇಕಾಗಿದೆ.

ಸಾಂಕ್ರಾಮಿಕ ರೋಗದ ಭೀತಿ

ಮಳೆಗಾಲ ಆರಂಭಗೊಂಡಿರುವುದರಿಂದ ತ್ಯಾಜ್ಯ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಹೀಗಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಮಸೀದಿಗೆ ಆಗಮಿಸುವವರು ಕಸದ ರಾಶಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Advertisement

ಪುರಸಭೆ ಎತ್ತೆಚ್ಚುಕೊಳ್ಳಲಿ

ಪುರಸಭಾ ವ್ಯಾಪ್ತಿಯ ಅಲ್ಲಲ್ಲಿ ಕಸದ ರಾಶಿ ಕಂಡುಬಂದಿದ್ದರೂ ಪುರಸಭೆ ಕಸ ವಿಲೇವಾರಿ ಮಾಡುವಲ್ಲಿ ಉದಾಸೀನತೆ ತೋರ್ಪಡಿಸುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಕಸ ವಿಲೇವಾರಿ ಮಾಡುವುದಕ್ಕಿಂತಲೂ ಎಲ್ಲೆಂದರಲ್ಲಿ ಕಸ ಬಿಸಾಡುವವರ ಮೇಲೆ ನಿಗಾ ವಹಿಸಬೇಕಾಗಿದೆ.

ಕೆಲವೊಂದು ಆಯಕಟ್ಟಿನ ಪ್ರದೇಶಗಳಲ್ಲಿ ಯಾರು ಕಸ ತಂದು ಸುರಿಯುತ್ತಿದ್ದಾರೆ ಎನ್ನುವುದನ್ನ ಪತ್ತೆ ಹಚ್ಚಿ ಅಂತಹವರ ವಿರುದ್ಧ ಕಠಿನ ಕ್ರಮಕೈಗೊಳ್ಳಬೇಕಾದುದು ಅತಿ ಅಗತ್ಯ. ಪುರಸಭೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next