Advertisement

ತ್ಯಾಜ್ಯ ಮುಕ್ತ ರೇಟಿಂಗ್‌; ಮಂಗಳೂರು ಸ್ಪರ್ಧಿಸಿಯೇ ಇರಲಿಲ್ಲ!

12:49 AM May 21, 2020 | Sriram |

ಮಂಗಳೂರು: ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ತ್ಯಾಜ್ಯಮುಕ್ತ ನಗರಗಳ ರೇಟಿಂಗ್‌ಗಳನ್ನು ಮಂಗಳವಾರ ಪ್ರಕಟಿ ಸಿದ್ದು, ಈ ಪ್ರಕ್ರಿಯೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸ್ಪರ್ಧೆಯನ್ನೇ ಮಾಡಿರಲಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

Advertisement

ಕಳೆದ ವರ್ಷದಿಂದ ಕೇಂದ್ರ ಸರಕಾರವು ಈ ಸ್ಪರ್ಧೆಯನ್ನು ಜಾರಿಗೊಳಿಸಿದೆ. ತ್ಯಾಜ್ಯಮುಕ್ತವಾಗಿರುವ ನಗರಗಳು ಮಾತ್ರ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯುತ್ತವೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪಚ್ಚನಾಡಿ ತ್ಯಾಜ್ಯರಾಶಿಯ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿಲ್ಲ.

ನಗರದಲ್ಲಿ ಇರುವ ತ್ಯಾಜ್ಯಗಳನ್ನೆಲ್ಲ ಸಂಪೂರ್ಣ ಖಾಲಿ ಮಾಡಿದ ಅನಂತರ ವಷ್ಟೇ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಹುದು ಎಂಬ ನಿಯಮ ಜಾರಿಯಲ್ಲಿರುವುದರಿಂದ ಮಂಗಳೂರಿಗೆ ಇದು ಸಮಸ್ಯೆಯಾಗಿದೆ. ಪಚ್ಚನಾಡಿ ತ್ಯಾಜ್ಯ ದುರಂತ ಹಾಗೂ ಅಲ್ಲಿನ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿದ ಕಾರಣದಿಂದ ಈ ಸ್ಪರ್ಧೆ ಮಂಗಳೂರಿಗೆ ಸಮಸ್ಯೆ ಸೃಷ್ಟಿಸಿತ್ತು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ದಕ್ಷಿಣ ಭಾರತದಲ್ಲಿ ಮೈಸೂರು ನಗರ ಮಾತ್ರ ಭಾರತದ 5 ಸ್ಟಾರ್‌ ತ್ಯಾಜ್ಯಮುಕ್ತ ನಗರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಸ್ವಚ್ಛ ಭಾರತ್‌ನಲ್ಲಿ 2018ರಲ್ಲಿ ಮನಪಾವು ಘನತ್ಯಾಜ್ಯ ವಿಲೇವಾರಿಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆ ದಿತ್ತು. ಅದಕ್ಕೂ ಮೊದಲು “ಸ್ವತ್ಛ ಸರ್ವೇಕ್ಷಣ’ಯಲ್ಲಿಯೂ ಮಂಗಳೂರು ಮೂರನೇ ಸ್ಥಾನ ಪಡೆದಿತ್ತು. ಬಳಿಕ 10ರ ನಂತರದ ಸ್ಥಾನವನ್ನು ಮಂಗಳೂರು ಪಡೆಯುತ್ತಾ ಬಂದಿದ್ದು, ಮೊದಲ ಸ್ಥಾನದ ನಿರೀಕ್ಷೆಯಲ್ಲಿದೆ.

ಸ್ಪರ್ಧಿಸಿರಲಿಲ್ಲ
ತ್ಯಾಜ್ಯಮುಕ್ತ ನಗರಗಳ ರೇಟಿಂಗ್‌ಗಳನ್ನು ನಿಗದಿಪಡಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆ ನಗರವು ತ್ಯಾಜ್ಯ ಮುಕ್ತವಾಗಿರಬೇಕು ಎಂಬ ನಿಯಮವಿದೆ. ಆದರೆ ಪಚ್ಚನಾಡಿಯಲ್ಲಿ ತ್ಯಾಜ್ಯರಾಶಿ ಇರುವ ಕಾರಣದಿಂದ ಮಂಗಳೂರು ನಗರ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿಲ್ಲ. ಉಳಿದಂತೆ ಸ್ವತ್ಛಭಾರತ್‌, ಸರ್ವೇಕ್ಷಣ ಸಮೀಕ್ಷೆ, ಸಿಟಿಜನ್‌ ಸರ್ವೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮಂಗಳೂರು ಭಾಗವಹಿಸಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ.
– ಮಧು ಎಸ್‌. ಮನೋಹರ್‌,
ಪರಿಸರ ಅಭಿಯಂತರರು, ಮನಪಾ

Advertisement
Advertisement

Udayavani is now on Telegram. Click here to join our channel and stay updated with the latest news.

Next