Advertisement

ತ್ಯಾಜ್ಯ ವಿಲೇವಾರಿಗೆ ಒಟ್ಟಾದ ಗ್ರಾ.ಪಂ.ಗಳು

04:33 PM Mar 14, 2017 | Team Udayavani |

ನಾಲ್ಕು ಅಧ್ಯಕ್ಷೆಯರಿಂದ ಹೊಸ ಉಪಕ್ರಮ
ಬಜಪೆ: ತ್ಯಾಜ್ಯ ವಿಲೇವಾ ರಿಯ ಬಿಸಿ ಎಲ್ಲ ಗ್ರಾಮ ಪಂಚಾಯತ್‌ಗಳಿಗೂ ಇದ್ದದ್ದೇ. ಅದಕ್ಕೇ ಒಗ್ಗೂಡಿ ಪರಿಹಾರ ಕಂಡುಕೊಳ್ಳಲು ಹೊರಟಿವೆ ಈ ನಾಲ್ಕು ಪಂಚಾಯತ್‌ಗಳು. ದೊಡ್ಡ ಸಮಸ್ಯೆಯ ನಿವಾರಣೆಯತ್ತ ಇದೊಂದು ಹೊಸ ಮಾದರಿ. ಅಷ್ಟೇ ಅಲ್ಲ ; ಈ ಎಲ್ಲ ಗ್ರಾ.ಪಂ. ಅಧ್ಯಕ್ಷರು ಮಹಿಳೆಯರು. 

Advertisement

ಗಂಜಿಮಠ, ಕಂದಾವರ, ಗುರುಪುರ ಮತ್ತು ಪಡುಪೆರಾರ ಗ್ರಾ.ಪಂ.ಗಳು ತಮ್ಮ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಒಟ್ಟಾಗಿವೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕೂ ಗ್ರಾಮಗಳನ್ನೊಳಗೊಂಡ ಸಭೆ ನಡೆಸಿ ತ್ಯಾಜ್ಯ ನಿರ್ವಹಣ ಸಮಿತಿ ಯನ್ನೂ ರಚಿಸಲಾಗಿದೆ. ಕಂದಾವರ ಗ್ರಾ.ಪಂ. ಅಧ್ಯಕ್ಷರು ಇದರ ಅಧ್ಯಕ್ಷ ರಾಗಿದ್ದರೆ, ಗಂಜಿಮಠ ಗ್ರಾ.ಪಂ ಪಿಡಿಒ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿ ಸುವರು. ಉಳಿದ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರು ಈ ಸಮಿತಿಯಲ್ಲಿದ್ದಾರೆ.

ಕೈಕಂಬ ಪೇಟೆಯಲ್ಲಿ ಈ ನಾಲ್ಕೂ ಗ್ರಾ.ಪಂ. ಗಳ ವ್ಯಾಪ್ತಿ ಬರುತ್ತದೆ. ಇದರಲ್ಲಿ ಗಂಜಿಮಠ ಗ್ರಾ.ಪಂ ವ್ಯಾಪ್ತಿ ಹೆಚ್ಚು. ಕೈಕಂಬ ಪೇಟೆ ಸ್ವತ್ಛವಾಗಬೇಕಾದರೆ ಈ ಗ್ರಾ.ಪಂ. ಗಳು ಒಟ್ಟಾಗಲೇಬೇಕು.

ಸವಾಲಿನ ಸಂಗತಿ: ಈ ಗ್ರಾ.ಪಂ.ಗಳ ಅಧ್ಯಕ್ಷರ ಮಹಿಳೆಯರು. ಗಂಜಿಮಠ  ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಕಂದಾವರ ಗ್ರಾ.ಪಂ. ಅಧ್ಯಕ್ಷೆ ವಿಜಯಾಗೋಪಾಲ ಸುವರ್ಣ, ಗುರುಪುರ ಗ್ರಾ.ಪಂ. ಅಧ್ಯಕ್ಷೆ ರುಕಿಯಾ ಮತ್ತು ಪಡುಪೆರಾರ ಗ್ರಾ.ಪಂ. ಅಧ್ಯಕ್ಷೆ ಶಾಂತಾ ಎಂ. ಸಾಮಾಜಿಕ ಕಾರಣಕ್ಕಾಗಿ ಒಗ್ಗಟ್ಟಾದವರು.

ಸಮಿತಿಯ ಉಪವಿಧಿ ಅನುಮೋದನೆಗೆ ಸಮಿತಿ ರಚನೆ ಗೊಂಡು ಉಪವಿಧಿ ಅನುಮೋದನೆಗೆ ಈಗಾಗಲೇ ಜಿ.ಪಂ.ಗೆ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕ ಕೂಡಲೇ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗು ವುದು. ಪ್ರತಿ ಗ್ರಾ.ಪಂ.ನಲ್ಲಿ ತ್ಯಾಜ್ಯ ಘಟಕಕ್ಕೆ ಜಾಗ ಸಿಕ್ಕಿದಲ್ಲಿ ತ್ಯಾಜ್ಯ ಘಟಕ ನಿರ್ಮಿ ಸಲಾಗುವುದು.
-ವಿಜಯಾ ಗೋಪಾಲ ಸುವರ್ಣ, ಅಧ್ಯಕ್ಷೆ, ಸಮನ್ವಯ ಸಮಿತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next