Advertisement
ಪ್ಲಾಸ್ಟಿಕ್ ಸಹಿತ ಹಸಿ, ಒಣಕಸಗಳನ್ನು ತೊಡೆಗೆ ಎಸೆದಿದ್ದಾರೆ. ತೋಡಿಗೆ ಎಸೆಯವ ಸಮಯದಲ್ಲಿ ಈ ತ್ಯಾಜ್ಯ ಬಿದ್ದು ಪರಿಸರ ದುರ್ನಾತ ಬೀರುತ್ತಿದೆ. ಬಜಪೆ ಪಟ್ಟಣ ಪಂಚಾಯತ್ ತ್ಯಾಜ್ಯ ವಿಲೇವಾರಿಯನ್ನು ಮಾಡುತ್ತಿದ್ದರೂ ಇಲ್ಲಿ ತ್ಯಾಜ್ಯ ಎಸೆಯುವವರು ಯಾರೂ ಎಂದು ಪರಿಸರದ ಸಿಸಿ ಕೆಮರಾಗಳಲ್ಲಿ ಪತ್ತೆ ಹಚ್ಚಿ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಣ್ಣ ಸೇತುವೆಗೆ ಅಡ್ಡದಾಗಿ ನೆಟ್ (ಬಲೆ) ಹಾಕಬೇಕು. ಇದರಿಂದ ತ್ಯಾಜ್ಯ ಎಸೆತ ಕಡಿಮೆಯಾಗಲಿದೆ ಎಂದು ಉದಯವಾಣಿ ಈ ಬಗ್ಗೆ ಬಜಪೆ ಪಟ್ಟಣ ಪಂಚಾಯತ್‌ನ ಗಮನ ಸೆಳೆದಿತ್ತು. ಈ ತನಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಶೀಘ್ರ ನೆಟ್ ಬಳಕೆಯಾದರೆ ತೋಡಿನಲ್ಲಿ ತ್ಯಾಜ್ಯ ಬಿಸಾಡುವುದು ಹಾಗೂ ರಾಶಿಯೂ ಕಡಿಮೆಯಾಗಲಿದೆ.