Advertisement

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಚಾಲನೆ

11:24 AM Feb 22, 2020 | Suhan S |

ಹುಬ್ಬಳ್ಳಿ: ಮಹಾನಗರ ಪಾಲಿಕೆಯಿಂದ ಬೆಂಗೇರಿಯಲ್ಲಿ ನಿರ್ಮಿಸಿರುವ ದ್ವಿತೀಯ ಹಂತದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಶುಕ್ರವಾರ ಚಾಲನೆ ನೀಡಿದರು.

Advertisement

ಘಟಕದ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಘಟಕ ಈ ಭಾಗದ 10 ವಾರ್ಡ್‌ಗಳಿಂದ ಸಂಗ್ರಹಿಸುವ ತ್ಯಾಜ್ಯದ ವಿಲೇವಾರಿಯಲ್ಲಿ ದ್ವಿತೀಯ ಹಂತವಾಗಿ ಕಾರ್ಯ ನಿರ್ವಹಿಸಲಿದೆ. ಈ ಭಾಗದ ಸುಮಾರು 30 ಸಾವಿರ ಮನೆಗಳ ತ್ಯಾಜ್ಯ ಇಲ್ಲಿಗೆ ತಂದು ಕಾಂಪ್ಯಾಕ್ಟ್ ಕಂಟೇನರ್‌ಗಳಿಗೆ ಹಾಕಲಾಗುತ್ತಿದೆ. ಇದರಿಂದ ಈ ಭಾಗದ ಜನರಿಗೆ ವಾಸನೆ ಸೇರಿದಂತೆ ಇತರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು. ಘಟಕ ಆರಂಭವಾಗಿರುವುದರಿಂದ ಈ ಭಾಗದ ಆಟೋ ಟಿಪ್ಪರ್‌ ತುಂಬಿದ ತಕ್ಷಣ ಕಾರವಾರ ರಸ್ತೆಯ ಕಸಮಡ್ಡಿಗೆ ಹೋಗುವುದು ತಪ್ಪುತ್ತದೆ.

ಇದರಿಂದ ಜನರಿಗೆ ಉತ್ತಮ ಹಾಗೂ ಹೆಚ್ಚಿನ ಸೇವೆ ನೀಡಬಹುದಾಗಿದೆ. ಘಟಕದಲ್ಲಿ 10 ಟನ್‌ ಸಾಮರ್ಥ್ಯದ 5 ಕಂಟೇನರ್‌ಗಳಿದ್ದು, 50 ಟನ್‌ ಕಸ ಇಲ್ಲಿ ಸಂಗ್ರಹಿಸಿ ಸಾಗಿಸಬಹುದಾಗಿದೆ. ಒಂದು ಹುಕ್‌ ಲೋಟರ್‌ ವಾಹನ ಇದೆ ಎಂದು ಮಾಹಿತಿ ನೀಡಿದರು. ಮಹಾನಗರದಲ್ಲಿ ಏಳು ಕಾಂಪ್ಯಾಕ್ಟ್ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಈಗಾಗಲೇ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ನಂದಿನಿ ನಗರ ಹಾಗೂ ಧಾರವಾಡದ ಕಲ್ಯಾಣನಗರದ ಘಟಕಗಳನ್ನು ಮುಂದಿನ ತಿಂಗಳು ಉದ್ಘಾಟನೆ ಮಾಡಲಾಗುವುದು. ಧಾರವಾಡದ ಇನ್ನೊಂದು ಘಟಕ ನಿರ್ಮಾಣದ ಕುರಿತು ಸ್ಥಳ ನಿಗದಿಯಾಗಿಲ್ಲ ಎಂದು ಹೇಳಿದರು.

ಪಾಲಿಕೆ ಹೆಚ್ಚುವರಿ ಆಯುಕ್ತ ಅಜೀಜ್‌ ದೇಸಾಯಿ, ಅಧೀಕ್ಷಕ ಅಭಿಯಂತ ಇ. ತಿಮ್ಮಪ್ಪ, ಅಧಿಕಾರಿಗಳಾದ ಎಸ್‌.ಸಿ. ಬೇವೂರು, ಬಸವರಾಜ ಲಮಾಣಿ, ವಿಜಯ ಗಣಾಚಾರಿ, ವಿಜಯಕುಮಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next