Advertisement

ಇಂಧನವಿಲ್ಲದೇ ತ್ಯಾಜ್ಯ ಸಂಗ್ರಹ ಸ್ಥಗಿತ

04:54 PM May 17, 2020 | Suhan S |

ಗಂಗಾವತಿ: ನಗರದ ಘನತ್ಯಾಜ್ಯ ಸಾಗಿಸುವ ವಾಹನಗಳಿಗೆ ಡಿಸೇಲ್‌ ಹಾಕಿಸಲು ಹಣದ ಕೊರತೆಯಿಂದಾಗಿ ಎರಡು ದಿನಗಳಿಂದ ನಗರದ ಮನೆ ಮನೆಗೆ ತೆರಳಿ ಕಸ ಸಂಗ್ರಹಸ್ಥಗಿತಗೊಳಿಸಲಾಗಿದೆ.

Advertisement

ಜಿಲ್ಲಾ ಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಎಂದು ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ರಾಜ್ಯಾಧ್ಯಕ್ಷ ಜೆ. ಭಾರದ್ವಾಜ್‌ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತ್ಯಾಜ್ಯ ಸಾಗಿಸುವ ವಾಹನಗಳಿಗೆ ಡಿಸೇಲ್‌ ಕೊಡದೇ ಇರುವುದರಿಂದ ಕಸ ತುಂಬಿದ ಗಾಡಿಗಳು ಗಂಗಾವತಿಯ ಗುಂಡಮ್ಮಕ್ಯಾಂಪಿನ ಸಿಟಿ ಮಾರ್ಕೆಟ್‌ನಲ್ಲಿ ನಿಂತಿವೆ. ಈ ಬಗ್ಗೆ ನಗರಸಭೆಯ ಆಡಳಿತ ವರ್ಗ ಕಾಳಜಿವಹಿಸುತ್ತಿಲ್ಲ. ಟ್ರಾÂಕ್ಟರ್‌ ಗಳು ಕಳೆದ 5-6 ತಿಂಗಳಿನಿಂದ ರಿಪೇರಿ ಬಂದು ಹಾಗೆಯೇ ನಿಂತಿವೆ. ಕಸ ಸಾಗಿಸುವ ಕಂಪ್ಯಾಕ್ಟರ್‌ಗಳು ಮೂರು ವಾಹನಗಳಿದ್ದು, ಒಂದು ವಾಹನ ಎರಡು ವರ್ಷದ ಕೆಳಗೆ ದುರಸ್ತಿಗೆ ಬಂದು ನಿಂತಿದೆ.

ಇನ್ನೊಂದು ಕಂಪ್ಯಾಕ್ಟರ್‌ ಕಳೆದ ಎರಡು ತಿಂಗಳಿನಿಂದ ದುರಸ್ತಿಯಾಗದೆ ನಿಂತಿದೆ. ಒಂದು ಕಂಪ್ಯಾಕ್ಟರ್‌ ಚಾಲನೆಯಲ್ಲಿದ್ದು, ಅದಕ್ಕೂ ಡಿಸೇಲ್‌ ವ್ಯವಸ್ಥೆ ಇಲ್ಲ. ಇದರಿಂದಾಗಿ ಟಾಟಾ ಏಸ್‌ ಗಾಡಿಗಳು ಕಸ ತುಂಬಿಕೊಂಡು ಮಾರ್ಕೇಟ್‌ನಲ್ಲಿ ನಿಂತಿವೆ. ಇಷ್ಟೆಲ್ಲಾ ವಿಷಯಗಳು ಅಧಿಕಾರಿಗಳ ಗಮನಕ್ಕಿದ್ದರೂ ಯಾವುದೇ ಪರಿಹಾರ ವ್ಯವಸ್ಥೆ ಮಾಡುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತ್ಯಾಜ್ಯ ಸಾಗಿಸುವ ವಾಹನಗಳ ದುರಸ್ತಿಯ ಬಗ್ಗೆ ಹಾಗೂ ಅವುಗಳಿಗೆ ಇಂಧನ ಒದಗಿಸುವವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next