Advertisement

ಕತ್ತಲಸಾರ್: ತೇಲಿ ಬಂದ ತ್ಯಾಜ್ಯ ರಾಶಿ; ಗ್ರಾ.ಪಂ.ನಿಂದ ದೂರು ದಾಖಲು

11:51 AM Sep 13, 2022 | Team Udayavani |

ಬಜಪೆ: ಪಡುಪೆರಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕತ್ತಲಸಾರ್‌ ಶಾಲಾ ಬಳಿ ರವಿವಾರ ಮಧ್ಯಾಹ್ನದ ವೇಳೆಗೆ ಏಕಾಏಕಿ ಎಕ್ಕಾರು ನದಿಯಲ್ಲಿ ಕಪ್ಪು ಕವರ್‌ಗಳಲ್ಲಿ ಪ್ಲಾಸ್ಟಿಕ್‌ ರಾಶಿ ತೇಲಿ ಬಂದು ಶೇಖರಣೆಯಾಗಿತ್ತು.

Advertisement

ಸೋಮವಾರದಂದು ಗ್ರಾ.ಪಂ.ಅಧ್ಯಕ್ಷೆ ಅಮಿತಾ ಮೋಹನ್‌ ಶೆಟ್ಟಿ, ಪಿಡಿಒ ಉಗ್ಗಪ್ಪ ಮೂಲ್ಯ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನಾಗೇಶ್‌ ಪೂಜಾರಿ ಅವರು ಎಕ್ಕಾರು ನದಿಯಲ್ಲಿ ಹುಡುಕಾಟ ಆರಂಭಿಸಿದರು. ಇವರ ಜತೆಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಸಹಕರಿಸಿದರು.

ಗ್ರಾ.ಪಂ. ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಕನ್ನಿಕಟ್ಟದಲ್ಲಿ ಒಂದೆಡೆ ತೇಲಾಡುತ್ತಾ ನಿಂತಿದ್ದ ಒಂದು ಗಂಟು ಮಾತ್ರ ಸಿಕ್ಕಿದೆ. ಅದರಲ್ಲಿ ಸಿರಿಂಜ್‌ಗಳು, ಕೈ ಕವಚಗಳು, ಪ್ಲಾಸ್ಟಿಕ್‌ಹಾಳೆಗಳು ಸಿಕ್ಕಿದೆ. ವಿಷ್ಣು ಮೂರ್ತಿ ದೇವಸ್ಥಾನ ಸಮೀಪದಲ್ಲಿಯೂ ತೇಲಾಡುತ್ತಾ ಬರುತ್ತಿದ್ದ ಎರಡು ಪ್ಲಾಸ್ಟಿಕ್‌ ಮೂಟೆಗಳನ್ನು ತಡೆದು ಅದರಲ್ಲಿ ನೋಡಿದಾಗ ಪ್ಲಾಸ್ಟಿಕ್‌ ತ್ಯಾಜ್ಯಗಳು ಕಂಡು ಬಂದಿವೆ.

ಇದರಲ್ಲಿ ಅವರಿಗೆ ಕಂಪೆನಿಯ ಹೆಸರು ಕಂಡು ಬಂದಿದೆ. ಇದರಿಂದ ಈ ತ್ಯಾಜ್ಯ ಕಂಪೆನಿಯಿಂದ ಬಂದ ತ್ಯಾಜ್ಯದ ಬಗ್ಗೆ ಅನುಮಾನ ಮೂಡಿಸಿದೆ. ದೇಲಂತಬೆಟ್ಟುವಿನತ್ತ ಸಾಗಿದ ತ್ಯಾಜ್ಯ ತೇಲುತ್ತಾ ಬಂದ ತ್ಯಾಜ್ಯಗಳ ಗಂಟು ಪಡುಪೆರಾರದ ಕತ್ತಲಸಾರ್‌ನಿಂದ ಎಕ್ಕಾರು, ಶಿಬರೂರು, ದೇಲಂತ ಬೆಟ್ಟುವಿನತ್ತ ಸಾಗಿದೆ. ಇಲ್ಲಿನ ಕೃಷಿಕರಿಗೆ ತೊಂದರೆ ಒಡ್ಡಲಿದೆ. ಗ್ರಾಮ ಪಂಚಾಯತ್‌ನಿಂದ ಬಜಪೆ ಪೊಲೀಸ್‌ ಠಾಣೆಗೆ ದೂರು ತ್ಯಾಜ್ಯ ಎಸೆದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾ.ಪಂ.ನಿಂದ ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next