ಮುಂಬೈ: ರಣಜಿ ಕ್ರಿಕೆಟ್ ನ ‘ಡಾನ್ ಬ್ರಾಡ್ಮನ್’ ಖ್ಯಾತಿಯ ಆಟಗಾರ ವಾಸೀಂ ಜಾಫರ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ರಾಜೀನಾಮೆ ನೀಡಿದ್ದಾರೆ.
ಆರಂಭಿಕ ಆಟಗಾರನಾಗಿದ್ದ ವಾಸೀಂ ಜಾಫರ್ 2008ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ 31 ಟೆಸ್ಟ್ ಪಂದ್ಯಗಳನ್ನಾಡಿ 1944 ರನ್ ಗಳಸಿದ್ದರು.
1996-97ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ವಾಸೀಂ ಜಾಫರ್, 260 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. 50.67ರ ಸರಾಸರಿಯಲ್ಲಿ ಜಾಫರ್ ಬರೋಬ್ಬರಿ 19,410 ರನ್ ಗಳಿಸಿದ್ಧಾರೆ. 57 ಶತಕಗಳು ಮತ್ತು 91 ಅರ್ಧಶತಕ ಬಾರಿಸಿರುವ ವಾಸೀಂ ಜಾಫರ್ ರ ಹೈಯೆಸ್ಟ್ ಸ್ಕೋರ್ 314 ರನ್.
ಮುಂಬೈ ಪರವಾಗಿ ಆಡುತ್ತಿದ್ದ ಜಾಫರ್ ಇತ್ತೀಚಿನ ವರ್ಷಗಳಲ್ಲಿ ವಿದರ್ಭ ಪರವಾಗಿ ಆಡುತ್ತಿದ್ದರು.
ಶಾಲಾ ದಿನಗಳಿಂದ ನನ್ನ ಆಟದ ಉತ್ತಮಿಕೆಯಲ್ಲಿ ಶ್ರಮಿಸಿದ ಎಲ್ಲಾ ಕೋಚ್ ಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಬಿಸಿಸಿಐ, ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಮತ್ತು ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಗೆ ನನ್ನ ಧನ್ಯವಾದ ತಿಳಿಸುತ್ತೇನೆ ಎಂದು ಜಾಫರ್ ಹೇಳಿದ್ದಾರೆ.