Advertisement

ಹುಣಸೂರು ನಗರದ ವಾಸಿಂ ಅಕ್ರಂ ಗೂಂಡಾ ಕಾಯ್ದೆಯಡಿ ಹಿಂಡಲಗಾ ಜೈಲಿಗೆ

04:10 PM Dec 21, 2022 | Team Udayavani |

ಹುಣಸೂರು: ಗೂಂಡಾ ಕಾಯ್ದೆಯಡಿ ಹುಣಸೂರು ನಗರದ ಶಬ್ಬೀರ್ ನಗರದ ನಿವಾಸಿ, ಕ್ರಿಮಿನಲ್ ಆರೋಪಿ ವಾಸಿಂ ಅಕ್ರಂ(ವೀಲಿಂಗ್ ವಾಸಿಂ)ನನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬೆಳಗಾವಿನ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.

Advertisement

ವಾಸಿಂ ಅಕ್ರಂ ವಿರುದ್ದ ಬೈಲುಕುಪ್ಪೆ ಠಾಣೆಯಲ್ಲಿ ಒಂದು ಪ್ರಕರಣ ಸೇರಿದಂತೆ ಹುಣಸೂರು ಠಾಣೆಯಲ್ಲಿ ಕೊಲೆ, ಅಪಹರಣ, ವರದಕ್ಷಿಣೆ ಕಿರುಕುಳ, ಗಲಾಟೆ, ರಸ್ತೆಗಳಲ್ಲಿ ಯುವತಿಯರನ್ನು ಚುಡಾಯಿಸುವುದು ಸೇರಿದಂತೆ ಒಟ್ಟು ಹನ್ನೆರಡು ಪ್ರಕರಣಗಳಿವೆ ಎಂದು ನಗರಠಾಣಾ ಇನ್ಸ್ಪೆಕ್ಟರ್ ಶ್ರೀನಿವಾಸ್ ತಿಳಿಸಿದ್ದಾರೆ.

ಹುಣಸೂರು ಡಿವೈಎಸ್‌ಪಿಯಾಗಿ ಎಂ.ಕೆ.ಮಹೇಶ್ ಅಧಿಕಾರ ಸ್ವೀಕಾರ

ಹುಣಸೂರು ಉಪ ವಿಭಾಗದ ಡಿವೈಎಸ್‌ಪಿಯಾಗಿ ಎಂ.ಕೆ.ಮಹೇಶ್‌ರವರು ನಿರ್ಗಮಿತ ಡಿವೈಎಸ್‌ಪಿ ರವಿಪ್ರಸಾದ್‌ರಿಂದ ಅಧಿಕಾರ ಸ್ವೀಕರಿಸಿದರು.

Advertisement

ಹುಣಸೂರಿನ ಡಿವೈಎಸ್‌ಪಿ ಕಚೇರಿಯಲ್ಲಿ ನೂತನ ಡಿವೈಎಸ್‌ಪಿ ಎಂ.ಕೆ.ಮಹೇಶ್‌ರವರು ರವಿಪ್ರಸಾದ್‌ರಿಂದ ಅಧಿಕಾರ ಸ್ವೀಕರಿಸಿದರು. ಮಹೇಶ್‌ರವರು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದವರನ್ನು ಹುಣಸೂರಿಗೂ ಇಲ್ಲಿದ್ದ ಡಿವೈಎಸ್‌ಪಿ ರವಿಪ್ರಸಾದ್‌ರನ್ನು ಬೆಂಗಳೂರಿನ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ವರ್ಗಾಯಿಸಿ ಸರಕಾರ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next