Advertisement

Today ಆರ್ಟ್‌ ಆಫ್ ಲಿವಿಂಗ್‌ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

09:43 PM Sep 28, 2023 | Team Udayavani |

ನವದೆಹಲಿ: 4.5 ಲಕ್ಷ ಮಂದಿಯ ಉಪಸ್ಥಿತಿ, 17,000 ಕಲಾವಿದರು, 100ಕ್ಕೂ ಅಧಿಕ ದೇಶಗಳ ನಾಯಕರು, ಚಿಂತಕರು, 50 ಸಾವಿರ ಪ್ರದರ್ಶನಗಳು! ಇದು ಜಗತ್ತಿನ ದೊಡ್ಡಣ್ಣ ಅಮೆರಿಕವೇ ಆಥಿತ್ಯ ವಹಿಸಿರುವ ಭಾರತದ ಖ್ಯಾತನಾಮರಾದ ಆರ್ಟ್‌ ಆಫ್ ಲಿವಿಂಗ್‌ನ ಮುಖ್ಯಸ್ಥರು ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ಸಾರಥ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ವೈಭೋಗ.

Advertisement

ದೇಶ, ಭಾಷೆ, ಧರ್ಮ, ಗಡಿಗಳನ್ನು ದಾಟಿ ಕಲಾವಿದರ ಮೂಲಕ ಸಂಸ್ಕೃತಿ ಬೆಸೆಯಲು, ವಸುದೈವ ಕುಟುಂಬಕಂ ಎಂಬ ಧ್ಯೇಯದೊಂದಿಗೆ ಆರ್ಟ್‌ ಆಫ್ ಲಿವಿಂಗ್‌ನ “ಸಂಸ್ಕೃತಿ ಉತ್ಸವ’ ಸೆ.29ರಿಂದ ಅಕ್ಟೋಬರ್‌ 1ರವರೆಗೆ ಜರುಗಲಿದೆ. ವಾಷಿಂಗ್ಟನ್‌ನ ನ್ಯಾಷನಲ್‌ ಮಾಲ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ವಿವಿಧ ದೇಶಗಳಿಂದ ಜನರು ಆಗಮಿಸುತ್ತಿದ್ದು, ಸರ್ವರ ಕಲಾ ಪ್ರತಿಭೆ ಪ್ರದರ್ಶನಕ್ಕೆ ಗುರೂಜಿ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.

ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿಗಳಾದ ಎಚ್‌.ಇ.ಬನ್‌ ಕೀ ಮೂನ್‌, ಭಾರತದ ವಿದೇಶಾಂಗ ಸಚಿವರಾದ ಎಸ್‌. ಜೈಶಂಕರ್‌, ಭಾರತೀಯ ಮೂಲದವರಾದ ಅಮೆರಿಕದ ಪ್ರಸಿದ್ಧ ಸರ್ಜನ್‌ ಜನರಲ್‌ ಡಾ. ಹಲ್ಲೆಗೆರೆ ವಿವೇಕ ಮೂರ್ತಿ, ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸೇರಿದಂತೆ ವಿವಿಧ ದೇಶಗಳು ಹಾಲಿ ಹಾಗೂ ಮಾಜಿ ನಾಯಕರು, ಸಂಸದರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಪ್ರಮುಖ ಕಾರ್ಯಕ್ರಮಗಳಿವು
– 7,000 ಮಂದಿ ನೃತ್ಯ ಕಲಾವಿದರನ್ನೊಳಗೊಂಡ ಗರ್ಭನೃತ್ಯ
– 700 ಮಂದಿ ಭಾರತೀಯ ಶಾಸ್ತ್ರೀಯ ನೃತ್ಯಗಾರರ ಕಲಾ ಪ್ರದರ್ಶನ
– ಕಿಂಗ್‌ಚಾರ್ಲ್ಸ್‌, ಕೆಲ್ಲಿ ಫಾರ್ಮನ್‌ ಅವರಿಂದ ಸಂಯೋಜಿಸಲ್ಪಟ್ಟ ಹಿಪಾಆಪ್‌ ನೃತ್ಯ
– ಉಕ್ರೇನ್‌ನ ಪಾರಂಪರಿಕ ನೃತ್ಯ ಹೊಪಾಕ್‌ನ ಪ್ರದರ್ಶನ
-ಗಾಮಿ ವಿಜೇತರಾದ ಮಿಕ್ಕಿ ನೇತೃತ್ವದಲ್ಲಿ 1000 ಗಿಟಾರ್‌ಗಳ ವಾದ್ಯ
– ಬಾಬ್‌ಮ್ಯಾರ್ಲೆ ಅವರ ” ಒನ್‌ ಲವ್‌’ ಮರುಸೃಷ್ಟಿ

Advertisement

Udayavani is now on Telegram. Click here to join our channel and stay updated with the latest news.

Next