ದ್ವಿತೀಯ ಸುತ್ತಿನ “ಆಲ್ ಬ್ರಿಟಿಷ್’ ಪಂದ್ಯದಲ್ಲಿ ಆ್ಯಂಡಿ ಮರ್ರೆ 7-6 (7-4), 1-6, 6-4 ಅಂತರದಿಂದ ಕೈಲ್ ಎಡ್ಮಂಡ್‌ಅವರಿಗೆ ಸೋಲುಣಿಸಿದರು. “ಇದು ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ ಬಳಿಕ ನಾನು ಸಾಧಿಸಿದ ಅತ್ಯುತ್ತಮ ಗೆಲುವು. ಟೆನಿಸ್‌ನಲ್ಲಿ ಮುಂದುವರಿಯಲು ಇದು ನನ್ನಲ್ಲಿ ಬಹಳಷ್ಟು ಆತ್ಮವಿಶ್ವಾಸ ತುಂಬಿದೆ’ ಎಂಬುದಾಗಿ ಮರ್ರೆ ಹೇಳಿದ್ದಾರೆ.
Advertisement
ಸಹೋದರ ಸವಾಲ್!ವಿಶ್ವದ ನಂ.3 ಆಟಗಾರ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ 2ನೇ ಸುತ್ತಿನಲ್ಲಿ ಟ್ಯುನೀಶಿಯಾದ ಮಾಲೆಕ್ ಜಝಿರಿ ವಿರುದ್ಧ 6-2, 6-1 ಅಂತರದಿಂದ ಗೆದ್ದು ಬಂದರು. 21ರ ಹರೆಯದ ಅಲೆಕ್ಸಾಂಡರ್ ಜ್ವೆರೇವ್ ಅವರಿನ್ನು ಹಿರಿಯ ಸಹೋದರ ಮಿಶಾ ಜ್ವೆರೇವ್ ವಿರುದ್ಧ ಸೆಣಸಲಿದ್ದಾರೆ. 30ರ ಹರೆಯದ ಮಿಶಾ 6-2, 7-6 (9-7) ಅಂತರದಿಂದ ಅಮೆರಿಕದ ಟಿಮ್ ಸ್ಮಿಜೆಕ್‌ಗೆ ಸೋಲುಣಿಸಿದರು. ಎಟಿಪಿ ಕೂಟವೊಂದರಲ್ಲಿ ಜ್ವೆರೇವ್ ಸಹೋದರರು ಪರಸ್ಪರ ಎದುರಾಗುವುದು ಇದೇ ಮೊದಲು. ಇದನ್ನು ವೀಕ್ಷಿಸಲು ಜರ್ಮನಿಯ ಟೆನಿಸ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.