Advertisement
ಕೋವಿಡ್ ಸೋಂಕು ಹರಡುವ ಮುನ್ನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ರಿಪೇರಿ ಕಾಮಗಾರಿಗಳು, ಟರ್ಮಿನಲ್ ವಿಸ್ತರಣೆ, ಅನುಕೂಲಕರ ಒಳಾಂಗಣ ವಿಸ್ತರಣೆ ಇತ್ಯಾದಿಗಳಿಗೆ ಯೋಜಿಸಿದ್ದವು. ಆದರೆ ಕೋವಿಡ್‌ನಿಂದಾಗಿ ಪ್ರಯಾಣಿಕರ ಸಂಚಾರ ಸ್ಥಗಿತಗೊಂಡಿದ್ದರಿಂದ ವಿಮಾನ ನಿಲ್ದಾಣಗಳ ಪುನಶ್ಚೇತನಕ್ಕೆ ಗರಬಡಿದಿದೆ. ಅಲ್ಲದೇ ಸದ್ಯಕ್ಕೆ ಪರಿಸ್ಥಿತಿ ಸುಧಾರಣೆಯಾಗದಿದ್ದರೆ ದೊಡ್ಡ ಪ್ರಮಾಣದಲ್ಲಿ ಹಣ ವಿನಿಯೋಗಿಸುವುದು ಮತ್ತಷ್ಟು ನಷ್ಟಕ್ಕೆ ದಾರಿಯಾಗಬಹುದು ಎಂದು ಆತಂಕವಾಗಿದೆ.
ಸಿಇಪಿಎ- ಸೆಂಟರ್ ಫಾರ್ ಏವಿಯೇಷನ್ ಪ್ರಕಾರ, 1.48 ಲಕ್ಷ ಕೋಟಿ ರೂ. ಗಳಿಗೆ ಮಿಕ್ಕಿ ಮೊತ್ತದ ಪುನಶ್ಚೇತನ ಕಾಮಗಾರಿಗಳು ಈ ವರ್ಷ ವಿಶ್ವದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪೂರ್ಣಗೊಳ್ಳಬೇಕಿದೆ. ಆದರೆ ಇಷ್ಟೊಂದು ವೆಚ್ಚ ಮಾಡಿದ್ದು ಮತ್ತೆ ಗಳಿಸಲು ಸಾಧ್ಯವಾಗಬಹುದೇ ಎಂಬುದರ ಬಗ್ಗೆ ಅನಿಶ್ಚಿತತೆ ಕಾಡಿದೆ. ವಿಮಾನ ನಿಲ್ದಾಣ ಪುನಶ್ಚೇತನ ಕಾಮಗಾರಿ ಸುದೀರ್ಘ ಅವಧಿಯದ್ದು. ಸೂಕ್ತ ರೀತಿಯ ಪ್ಲ್ರಾನಿಂಗ್, ಅದರ ಕೆಲಸಗಳು, ಅಂತಿಮ ಹಂತದ ಕೆಲಸಗಳಿಗೆ ಬಹಳಷ್ಟು ಸಮಯ ತಗಲುತ್ತದೆ. ಆದ್ದರಿಂದ ಕೋವಿಡ್ ಮುಗಿದು ಪರಿಸ್ಥಿತಿ ತಿಳಿಯಾಗಬಹುದು ಎಂಬ ಆಶಾವಾದವೂ ಇದೆ ಎಂದು ಏವಿಯೇಷನ್ ಅಧಿಕಾರಿಯೊಬ್ಬರು ಹೇಳಿತ್ತಾರೆ.
Related Articles
Advertisement
ಪ್ರತಿ ಪ್ರಯಾಣಿಕನ ಟಿಕೆಟ್‌ನಿಂದ ಪಡೆಯುವ ವಿಮಾನ ನಿಲ್ದಾಣ ಫೀಸು, ಪಾರ್ಕಿಂಗ್ ಚಾರ್ಜು, ಬಾಡಿಗೆ ಪಡೆಯುವುದು ವಿಮಾನ ನಿಲ್ದಾಣಗಳ ಆದಾಯದ ಮೂಲ. ಕೆಲವೇ ಕೆಲವು ಪ್ರಯಾಣಿಕರು ಬಂದರೆ ವಿಮಾನ ನಿಲ್ದಾಣಗಳಿಗೆ ಪ್ರಯೋಜನವಿಲ್ಲ. ಅಲ್ಲಿ ನಿರಂತರ ಜನರ ಓಡಾಟವಿದ್ದಾಗಲೇ ಪ್ರಯೋಜನಕಾರಿ. ಸದ್ಯ ವಿಶ್ವದ ಅತಿ ದೊಡ್ಡ ವಿಮಾನ ನಿಲ್ದಾಣಗಳಲ್ಲೇ ವಿಮಾನ ಟ್ರಾಫಿಕ್ ಶೇ.90ರಷ್ಟು ಕುಸಿತ ಕಂಡಿದೆ. ಇದರಿಂದ ವಿಮಾನ ನಿಲ್ದಾಣಗಳ ಆದಾಯಕ್ಕೆ ಇನ್ನಿಲ್ಲದಂತೆ ಪೆಟ್ಟು ಬಿದ್ದಿದೆ. ಇದನ್ನು ಸರಿಪಡಿಸಲು ಬಹಳಷ್ಟು ಸಮಯ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಲಿವೆ ಎಂದು ಹೇಳಲಾಗಿದೆ.