ಈ “ಒಮಿಕ್ರಾನ್ ವೇರಿಯೆಂಟ್’ 1963ರಲ್ಲೇ ಬಿಡುಗಡೆಯಾಗಿತ್ತು! ಹೌದು. “ದಿ ಒಮಿಕ್ರಾನ್ ವೇರಿಯೆಂಟ್’ ಹೆಸರಿನ ಸಿನೆಮಾವೊಂದು 1963ರಲ್ಲಿ ಬಿಡುಗಡೆಯಾಗಿತ್ತಂತೆ.
ಹೊಸ ರೂಪಾಂತರಿಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ಈ ವೈರಸ್ ಬಗೆಗಿನ ಅಧ್ಯಯನ ಮತ್ತಷ್ಟು ಜಟಿಲವಾಗುತ್ತಿದೆ. ಸದ್ಯ ಎಲ್ಲೆಲ್ಲೂ ಒಮಿಕ್ರಾನ್ ರೂಪಾಂತರಿಯದ್ದೇ ಸುದ್ದಿ. ಈ ಕೋವಿಡ್ ರೂಪಾಂತರಿ ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ.
1963ರಲ್ಲಿ ಈ ಹೆಸರಿನಲ್ಲಿ ಸಿನಿಮಾ ಕೂಡ ಬಂದಿತ್ತು. ಅದರ ಪೋಸ್ಟರ್‌ನ ಫೋಟೋವನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಮೊನ್ನೆಯಷ್ಟೇ ಉದ್ಯಮಿ ಆನಂದ್ ಮಹೇಂದ್ರ ಅವರೂ 1963ರಲ್ಲಿ ತೆರೆಕಂಡಿದ್ದ “ಒಮಿಕ್ರಾನ್’ ಎಂಬ ಇಟಾಲಿಯನ್ ಚಲನಚಿತ್ರದ ಪೋಸ್ಟರ್ ಹಂಚಿಕೊಂಡಿದ್ದರು.
Related Articles