Advertisement

20 ವರ್ಷದಲ್ಲಿ ಇಂತಹ ಅನೇಕ ಅವಮಾನ ಅನುಭವಿಸಿದ್ದೇನೆ… ಉಪ ರಾಷ್ಟ್ರಪತಿಗೆ ಪ್ರಧಾನಿ ಸಾಂತ್ವನ

12:20 PM Dec 20, 2023 | Team Udayavani |

ನವದೆಹಲಿ: ಸಂಸದರ ಅಮಾನತು ವಿರುದ್ಧ ಮಂಗಳವಾರ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರು ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ಅವರನ್ನು ಅಣಕಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಉಪರಾಷ್ಟ್ರಪತಿಗಳಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉಪರಾಷ್ಟ್ರಪತಿ ಜಗದೀಪ್ ಧನಖರ್ ಅವರಿಗೆ ಕರೆ ಮಾಡಿ ಸಂಸತ್ತಿನ ಸಂಕೀರ್ಣದಲ್ಲಿ ಕೆಲವು ಸಂಸದರ ವರ್ತನೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು.

ಅಮಾನತ್ತುಗೊಂಡ ಸಂಸದರು ಮಂಗಳವಾರ ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಧಂಖರ್ ಅವರನ್ನು ಲೇವಡಿ ಮಾಡಿದ ವಿಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂತ್ವನ ಹೇಳಿದ ಕುರಿತು ಟ್ವೀಟ್ ಮಾಡಿದ ಉಪರಾಷ್ಟ್ರಪತಿಗಳು ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಕರೆ ಮಾಡಿ, ಮಂಗಳವಾರ ಪವಿತ್ರ ಸಂಸತ್ ಭವನದಲ್ಲಿ ಕೆಲ ಸಂಸದರು ಅಣುಕಿಸಿದ ಕೆಲಸಗಳಿಂದ ಬಹಳ ನೋವಾಗಿದೆ ಎಂದು ಸಮಾಧಾನ ಹೇಳಿದ್ದಾರೆ’ ಎಂದು ಜಗದೀಪ್ ಧನಖರ್ ಬರೆದಿದ್ದಾರೆ.

ಇಪತ್ತು ವರ್ಷಗಳಿಂದ ತಾನು ಇಂಥ ಅವಮಾನಗಳನ್ನು ಎದುರಿಸುತ್ತಾ ಬಂದಿದ್ದೇನೆ. ಆದರೆ, ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಹುದ್ದೆಗೆ ಇಂಥ ಅಪಮಾನ ಆಗುವುದು, ಅದರಲ್ಲೂ ಸಂಸತ್ತಿನಲ್ಲೇ ಆ ಘಟನೆ ಆಗುವುದು ನಿಜಕ್ಕೂ ದುರದೃಷ್ಟಕರ…’ ಎಂದು ಉಪರಾಷ್ಟ್ರಪತಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.


ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಉಪರಾಷ್ಟ್ರಪತಿ ಅವರು, ಕೆಲವರ ಚೇಷ್ಟೆಗಳು ನನ್ನ ಕರ್ತವ್ಯವನ್ನು ನಿರ್ವಹಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ವಗಳನ್ನು ಎತ್ತಿಹಿಡಿಯಲು ಅಡ್ಡಿಯಾಗುವುದಿಲ್ಲ. ನನ್ನ ಹೃದಯದ ಒಳಗಿನಿಂದ ನನ್ನ ಕೆಲಸಕ್ಕೆ ನಾನು ಬದ್ಧನಾಗಿದ್ದೇನೆ ಹಾಗಾಗಿ ನನಗೆ ಯಾವುದೇ ಅವಮಾನಗಳಿಲ್ಲ ಬದಲಾಗಿ ಇಂತಹ ಘಟನೆಗಳು ನನ್ನ ಕೆಲಸಕ್ಕೆ ಹೆಚ್ಚಿನ ಧೈರ್ಯ ತುಂಬುತ್ತದೆ ಹೊರತು ಕುಗ್ಗುವುದಿಲ್ಲ ಎಂದಿದ್ದಾರೆ.

Advertisement

ಘಟನೆಗೆ ಸಂಬಂಧಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಬೇಸರ ವ್ಯಕ್ತಪಡಿಸಿದ್ದು ಈ ಕುರಿತು ಟ್ವೀಟ್ ಮಾಡಿದ ಅವರು “ನಮ್ಮ ಗೌರವಾನ್ವಿತ ಉಪರಾಷ್ಟ್ರಪತಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ಅವಮಾನಿಸಿದ ರೀತಿಯನ್ನು ನೋಡಿ ದಿಗ್ಭ್ರಮೆಗೊಂಡಿದ್ದೇನೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next