Advertisement

ಶಾಸಕರಿಂದ ವಾರಿಯರ‍್ಸ್ ಪಾದಪೂಜೆ

05:02 AM May 17, 2020 | Lakshmi GovindaRaj |

ತುಮಕೂರು: ವಿಶ್ವವೇ ಕೊರೊನಾ ಸಂಕಷ್ಟ ಎದುರಿಸುತ್ತಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೊರೊನಾ ಮಹಾ ಮಾರಿ ಬರದ ರೀತಿಯಲ್ಲಿ ಕಾರ್ಯನಿರ್ವಹಿಸಿ ಜನರಲ್ಲಿ ಅರಿವು ಮೂಡಿಸಿದ ಕೊರೊನಾ ಸೇನಾನಿಗಳಾದ 1,500 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಯರಿಗೆ, ವೈದ್ಯರು ಮತ್ತು ನರ್ಸ್‌ಗಳಿಗೆ ಶನಿವಾರ ಕೈದಾಳ ಗ್ರಾಮದಲ್ಲಿ ಶಾಸಕ ಡಿ.ಸಿ.ಗೌರಿಶಂಕರ್‌ ಪಾದಪೂಜೆ ನೆರವೇರಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ.

Advertisement

ಮಹಾಮಾರಿ ಕೊರೊನಾ ಗ್ರಾಮಾಂತರ ಕ್ಷೇತ್ರದಲ್ಲಿ ಉತ್ತಮ ಜಾಗೃತಿ ಮೂಡಿಸುತ್ತಿರುವುದರಿಂದ ರೋಗ ವ್ಯಾಪಿಸಲು ಸಾಧ್ಯವಿಲ್ಲ ಜನರಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಕೊರೊನಾ ಸೇನಾನಿಗಳಿಗೆ ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಪಾದಪೂಜೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರಾಮಾಂತರ ಕ್ಷೇತ್ರದದಲ್ಲಿ ಕೊರೊನಾ ವಾರಿಯರ‍್ಸ್ ಗಳಾಗಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು,  ಕಾರ್ಯದರ್ಶಿ ಗಳು, ಬಿಲ್‌ ಕಲೆಕ್ಟರ್‌ಗಳು, ವಾಟರ್‌ವೆುನ್‌ಗಳು, ಕಂಪ್ಯೂಟರ್‌ ಆಪರೇಟರ್‌ಗಳು, ಸ್ವೀಪರ್ಗಳು ಸೇರಿದಂತೆ ಎಲ್ಲಾ ಇಲಾಖೆಗಳ ಕೊರೊನಾ ವಾರಿಯರ‍್ಸ್ಗಳನ್ನು ಅಭಿನಂದಿಸಿ, ಆಹಾರದ ಕಿಟ್‌ ವಿತರಿಸಿದರು.

ಅಂತಿಮ  ಹಂತದಲ್ಲಿ 1,500 ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಸಹಾಯಕಿಯರಿಗೆ ಕೈದಾಳ ಗ್ರಾಮ ದಲ್ಲಿ ಅರಿಶಿಣ, ಕುಂಕುಮ, ಬಳೆ, ಸೀರೆ, ಆಹಾರದ ಕಿಟ್‌ ವಿತರಿಸುವ ಮೂಲಕ ಸನ್ಮಾನಿಸಿ, ಪಾದಪೂಜೆ ನೆರವೇರಿ ಸುವ ಮೂಲಕ ಇಡೀ  ರಾಜ್ಯಕ್ಕೆ ಮಾದರಿ ಯಾಗಿದ್ದಾರೆ. ಶಾಸಕ ಡಿ.ಸಿ.ಗೌರಿಶಂಕರ್‌ ಮಾತನಾಡಿ, ಲಾಕ್‌ ಡೌನ್‌ ನಂತರ ಗ್ರಾಮಾಂತರ ಕ್ಷೇತ್ರದಲ್ಲಿ ಚೆನ್ನಿಗಪ್ಪ ಕುಟುಂಬ ಪಡಿತರ ಹಂಚಲು ಪ್ರೇರಣೆ ಸಿದ್ಧಗಂಗಾ ಮಠ, ಶಿವಕುಮಾರಸ್ವಾಮೀಜಿ ಆರ್ಶೀವಾದ ಕಾರಣ, ಮಠ  ಕಲಿಸಿದ್ದನ್ನು ನಮ್ಮ ತಂದೆ ಸೇರಿದಂತೆ ನಮ್ಮ ಕುಟುಂಬ ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ಮಾತನಾಡಿ, ಕೊರೊನಾದಿಂದ ರಾಜ್ಯ ತತ್ತರಿಸಿರುವ ಸಂದರ್ಭದಲ್ಲಿ ದಿನಗೂಲಿ ನೌಕರರು, ಕಾರ್ಮಿಕರ ನೆರವಿಗೆ ಶಾಸಕ ಡಿ.ಸಿ. ಗೌರಿಶಂಕರ್‌ ನಿಲ್ಲುವ ಮೂಲಕ ಅವರ ಬದುಕಿಗೆ ಆಸರೆಯಾಗಿದ್ದಾರೆ ಎಂದರು. ಗ್ರಾಮಾಂತರ ಜೆಡಿಎಸ್‌ ಅಧ್ಯಕ್ಷ ಹಾಲನೂರು  ಅನಂತ್‌ ಕುಮಾರ್‌, ಎಸ್ಸಿ ಘಟಕದ ತಾಲ್ಲೂಕು ಅಧ್ಯಕ್ಷ ಬೆಳಗುಂಬ ವೆಂಕಟೇಶ್‌, ಜೆಡಿಎಸ್‌ ಕಾರ್ಯಾಧ್ಯಕ್ಷ ವೈ.ಟಿ.ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next