Advertisement

ಭಡ್ತಿಗಾಗಿ ಯೋಧರ ರೋವಿಂಗ್‌ ಸಾಹಸ

03:19 PM Aug 26, 2018 | Team Udayavani |

ಜಕಾರ್ತಾ: ಶುಕ್ರವಾರ ನಡೆದ ಪುರುಷರ ರೋವಿಂಗ್‌ನ ಕ್ವಾಡ್ರಪಲ್‌ ಸ್ಕಲ್ಸ್‌  ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ಸೇನೆಯ ಸವಣ್‌ì ಸಿಂಗ್‌, ಧತ್ತು ಭೊಕಾನಲ್‌, ಓಂಪ್ರಕಾಶ್‌ ಮತ್ತು ಸುಖ್‌ಮೀತ್‌ ಸಿಂಗ್‌ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಳ್ಳೆಯ ಜೀವನ ಸಾಗಿಸಲು ಅವರೆಲ್ಲ ಸೇನೆಗೆ ಸೇರಿದ್ದರು. ಇದೀಗ ಸೇನೆಯಲ್ಲಿ ಭಡ್ತಿ ಪಡೆಯುವ ಉದ್ದೇಶದಿಂದಲೇ ಅವರೆಲ್ಲ ರೋವಿಂಗ್‌ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದರು. 

Advertisement

ಈ ನಾಲ್ಕು ಆಟಗಾರರು ಮಧ್ಯಮ ಕುಟುಂಬದವರಾಗಿದ್ದು,  ಉತ್ತಮ ಜೀವನ ಸಾಗಿಸಲು ಸೇನೆ ಸೇರಿದ್ದರು. ದೇಶದ ವಿವಿಧ ಭಾಗದವರು ಆಗಿರುವ ಇವರು ಪುಣೆಯಲ್ಲಿರುವ ಸೇನಾ ಕ್ರೀಡಾ ಸಂಸ್ಥೆಯಲ್ಲಿ ಒಟ್ಟಾಗಿ ರೋವಿಂಗ್‌ ಅಭ್ಯಾಸ ನಡೆಸಿದ್ದಾರೆ.  ಕ್ರೀಡೆಯಲ್ಲಿ ರಾಷ್ಟ್ರೀಯ ಪದಕ ಗೆಲ್ಲುವುದರಿಂದ ಹುದ್ದೆಯಲ್ಲಿ ಭಡ್ತಿ ಸಾಧ್ಯ ಎಂದು ತಿಳಿದ ಈ ಯೋಧರು ರೋವಿಂಗ್‌ ಕ್ರೀಡೆಯನ್ನು  ಆಯ್ಕೆ ಮಾಡಿ ಈ ಬಾರಿ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ. ಈ ಹಿಂದೆ 2010ರಲ್ಲಿ ಪುರುಷರ ಸಿಂಗಲ್ಸ್‌ ಸ್ಕಲ್‌ನಲ್ಲಿ ಭಜರಂಗ್‌ ಲಾಲ್‌ ಟಕ್ಕಾರ್‌ ಚಿನ್ನದ ಪದಕ ಗೆದ್ದಿದ್ದರು. 

ಸವಣ್‌ì ಸಿಂಗ್‌ ರೋವಿಂಗ್‌ನಲ್ಲಿ  2014 ಏಶ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕದೊಂದಿಗೆ ಸಾಕಷ್ಟು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದರು. ಅವರ ಸ್ನೇಹಿತರಾದ ಸುಖ್‌ಮೀತ್‌ ಸಿಂಗ್‌ ಮೂರು ವರ್ಷಗಳ ಹಿಂದೆ ರೋವಿಂಗ್‌ ಕ್ರೀಡೆಗೆ ಒಲವು ತೋರಿಸಿದ್ದರು. 

“ನಮಗೆ ಸಣ್ಣ ಮಟ್ಟದ ಕೃಷಿ ಭೂಮಿ ಇತ್ತು. ಆದರೂ ಜೀವನ ನಿರ್ವಹಣೆಗೆ ಉದ್ಯೋಗ ಅನಿವಾರ್ಯವಾಗಿತ್ತು. 2007ರಲ್ಲಿ ನಾನು ಪಂಜಾಬ್‌ ಪೊಲೀಸ್‌ಗೆ ಸೇರ್ಪಡೆಯಾದೆ. ಸವಣ್‌ì ಭಾರತೀಯ ಸೇನೆ ಸೇರಿದ. ಕಳೆದ ವರ್ಷ 
ಸವಣ್‌ìನ ಕ್ರೀಡೆಯಲ್ಲಿನ ಯಶಸ್ಸು, ಪದಕ ಮತ್ತು ದೊರತ ಗೌರವ ಸುತ್ತಮುತ್ತಲಿನ ಹಳ್ಳಿಯ ಅನೇಕ ಯುವಕರಿಗೆ ಸೇನೆ ಸೇರುವಂತೆ ಪ್ರೇರೆಪಿಸಿತು. 2011ರ ರಾಂಚಿ ರಾಷ್ಟ್ರೀಯ ಕ್ರೀಡೆಯಲ್ಲಿ ಸವಣ್‌ì ಚಿನ್ನ ಗೆದ್ದ ಬಳಿಕ ಆತನನ್ನು ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ ಮಾಡಲಾಯಿತು. ಅಲ್ಲಿ ಆತ ಭಜರಂಗ್‌ ಲಾಲ್‌ ಅವರನ್ನು ಭೇಟಿಯಾಗಿ ರೋವಿಂಗ್‌ನಲ್ಲಿ ಒಲವು ಹೆಚ್ಚಿಸಿಕೊಂಡ. ಏಶ್ಯಾಡ್‌ ಮತ್ತು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ಅವನ ಕನಸು’ ಎಂದು ಸಹೋದರ ಲಕ್ವಿಂದರ್‌ ಸಿಂಗ್‌ ತಿಳಿಸಿದ್ದಾರೆ.

“ನಮ್ಮಲ್ಲಿ ನಾಲ್ಕು ಎಕರೆ ಜಾಗವಿತ್ತು. ನನ್ನ ಇಬ್ಬರು ಮಕ್ಕಳು ಸೇನೆ ಸೇರಿದರು. ಸುಖ್‌ಮೀತ್‌ಗೆ ರೋವಿಂಗ್‌ನಲ್ಲಿ ಅವಕಾಶ ದೊರಕಿತು. ಇಂದು ಅವನು ಎಲ್ಲರಿಗೆ ಹೆಮ್ಮೆ ತಂದಿದ್ದಾನೆ’ ಎಂದು ಸುಖ್‌ಮೀತ್‌ ತಂದೆ ಅರ್ಮಿಕ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next