Advertisement
41 ಹೊಸ ಪ್ರಕರಣ: ಇದೇ ವೇಳೆ, ಗುರುವಾರ ಮತ್ತೆ 41 ಯೋಧರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸುಮಾರು 200ರಷ್ಟು ಯೋಧರಿಗೆ ಸೋಂಕು ತಗಲಿ ದಂತಾ ಗಿದೆ. ಇಬ್ಬರು ಮಾತ್ರ ಗುಣಮುಖರಾಗಿದ್ದಾರೆ. ದಿಲ್ಲಿ, ಕೋಲ್ಕತಾ ಮತ್ತು ತ್ರಿಪುರದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ, ಕೇಂದ್ರ ಅರೆಸೇನಾ ಪಡೆಯಲ್ಲಿ ದೇಶಾದ್ಯಂತ 400 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಹ್ಮದಾ ಬಾದ್ ಹಾಗೂ ಸೂರತ್ ನಗರಗಳನ್ನು ಶಟ್ ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ. ಅಹ್ಮದಾಬಾದ್‌ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಕಂಡುಬಂದ ಕಾರಣ ನಗರವನ್ನು ಒಂದು ವಾರ ಕಾಲ ಶಟ್‌ಡೌನ್ ಮಾಡಿ ಬುಧವಾರ ರಾತ್ರಿ ಸ್ಥಳೀಯಾ ಡಳಿತ ಆದೇಶ ಹೊರಡಿಸಿದೆ. ಹೀಗಾಗಿ, ಮೇ 15ರ ರಾತ್ರಿಯವರೆಗೂ ನಗರವು ಸಂಪೂರ್ಣ ಸ್ತಬ್ಧವಾಗಿರಲಿದೆ. ಇದರ ಬೆನ್ನಲ್ಲೇ, ಸೂರತ್ ನಲ್ಲೂ ಮೇ 9ರ ಮಧ್ಯರಾತ್ರಿಯಿಂದ 14ರ ಮಧ್ಯ ರಾತ್ರಿ ಯವರೆಗೆ ಎಲ್ಲ ತರಕಾರಿ ಹಾಗೂ ಹಣ್ಣಿನ ಅಂಗಡಿಗಳನ್ನು ಮುಚ್ಚಬೇಕು ಎಂದು ಸೂಚಿಸಲಾಗಿದ್ದು, ಅಹಮದಾಬಾದ್ ಮಾದರಿಯಲ್ಲೇ ಈ ನಗರವೂ ಸಂಪೂರ್ಣ ಶಟ್ ಡೌನ್ ಆಗಲಿದೆ. ಗುರುವಾರ ಅಧಿಕಾರಿಗಳ ಹೊಸ ತಂಡ ರಚಿಸಿ, ಅಹಮದಾಬಾದ್‌ನ ಉಸ್ತುವಾರಿಯನ್ನು ಆ ತಂಡಕ್ಕೆ ವಹಿಸಲಾಗಿದೆ. ಅರೆಸೇನಾ ಪಡೆಯ 5 ಹೆಚ್ಚುವರಿ ತಂಡವು ನಗರಕ್ಕೆ ಆಗಮಿಸಿದೆ. ತರಕಾರಿ, ದಿನಸಿಯೂ ಇಲ್ಲ: ಅಹ್ಮದಾಬಾದ್‌ನಲ್ಲಿ ಕೇವಲ ಹಾಲು, ಔಷಧ ಮಾರಾಟ ಮಾಡುವ ಅಂಗಡಿಗಳು, ಆಸ್ಪತ್ರೆಗಳು ಹಾಗೂ ಎಟಿಎಂ ಸೇವೆ ಮಾತ್ರವೇ ಲಭ್ಯವಿರಲಿದ್ದು, ತರಕಾರಿ, ದಿನಸಿ ವಸ್ತುಗಳು ಕೂಡ ಒಂದು ವಾರ ಕಾಲ ಸಿಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಣ್ಣು, ಬೇಕರಿ, ಸೂಪರ್ ಮಾರ್ಕೆಟ್, ಐಸ್‌ಕ್ರೀಂ ಪಾರ್ಲರ್‌ಗಳನ್ನು ಮುಚ್ಚಲಾಗಿದೆ. ಆಹಾರ ವಸ್ತುಗಳು ಸೇರಿದಂತೆ ಯಾವುದೇ ವಸ್ತುಗಳ ಆನ್‌ಲೈನ್ ಡೆಲಿವರಿ ಕೂಡ ನಿಷೇಧಿಸಲಾಗಿದೆ.
Related Articles
Advertisement