ಹೂವಿನಹಡಗಲಿ: ರೈತ ಮತ್ತು ಯೋಧ ನಮ್ಮ ದೇಶದ ಎರಡು ಕಣ್ಣುಗಳು. ನಮ್ಮೆಲ್ಲರ ಸುಭದ್ರ ಜೀವನಕ್ಕೆ ಈರ್ವರ ಕೊಡುಗೆ ಅನನ್ಯ ಎಂದು ಕುರುಬ ಸಮಾಜದ ಮುಖಂಡ ಹಾಗೂ ಹಿರಿಯ ವಕೀಲ ಎಂ.ಪರಮೇಶ್ವರಪ್ಪ ಹೇಳಿದರು.
ಸಂಗೊಳ್ಳಿ ರಾಯಣ್ಣ ಜಾಗೃತ ಬಳಗ ತಾಲೂಕು ಘಟಕ ಸರಕಾರಿ ನೌಕರರ ಸಂಘದ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣನ 188ನೇ ಹುತಾತ್ಮ ದಿನಾಚರಣೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲ ಜಾತಿ ಜನಾಂಗದ ಕಟ್ಟಲೆ ಮೀರಿ ಬೆಳೆದ ಸ್ವತಂತ್ರ ಹೋರಾಟಗಾರರ ಬದುಕು ನಮ್ಮ ಇಂದಿನ ಯುವಕರಿಗೆ ದಾರಿ ದೀಪವಾಗಬೇಕು. ಯುವಕರು ರಾಷ್ಟ್ರ ನಾಯಕರ ಅದರ್ಶ ಮೈಗೂಡಿಸಿಕೊಳ್ಳಬೇಕು. ದೇಶಾಭಿಮಾನ, ಸ್ವಾಭಿಮಾನದ ಬದುಕನ್ನು ನಮ್ಮ ಪೂರ್ವಿಕರನ್ನು ನೋಡಿ ಕಲಿಯಬೇಕಾಗಿದೆ ಎಂದರು.
ಮುಖ್ಯಶಿಕ್ಷಕ ಡಿ. ವಿರೂಪಣ್ಣ ಮಾತನಾಡಿ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸ್ವಾತಂತ್ರ್ಯ ಪ್ರೇಮಿ ರಾಯಣ್ಣ ಬ್ರಿಟಿಷರನ್ನು ತೊಲಗಿಸಿ ಕಿತ್ತೂರನ್ನು ಸ್ವತಂತ್ರಗೊಳಿಸಲು ಅವಿರತವಾಗಿ ಶ್ರಮಿಸುತ್ತಿದ್ದರು. ಆದರೆ, ಕುತಂತ್ರಿಗಳ ಮೋಸದ ಜಾಲಕ್ಕೆ ಸಿಲುಕಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ. ಇಂತಹ ವೀರಪುತ್ರ ಎಲ್ಲರ ಮನೆಯಲ್ಲಿ ಜನಿಸಬೇಕೆಂದು ಹೆಣ್ಣುಮಕ್ಕಳು ಈಗಲೂ ರಾಯಣ್ಣನ ಸಮಾಧಿ ಮೇಲೆ ನೆಟ್ಟ ಆಲದ ಮರಕ್ಕೆ ತೊಟ್ಟಿಲು ಕಟ್ಟುತ್ತಿದ್ದಾರೆ ಎಂದರು.
ಪ್ರೌಢಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷ ಪಿ.ಪ್ರಕಾಶ್ ಅಧ್ಯಕ್ಷತೆವಹಿಸಿ ಮಾತನಾಡಿದರು. ನಿವೃತ್ತ ಯೋಧರಾದ ಮೈನಳ್ಳಿ ಮಹೇಶ್ವರ್, ಎಚ್.ಆರ್. ಮಹಮ್ಮದ್ ರಫಿ, ಕೋಗಳಿ ಕೊಟ್ರಪ್ಪ, ಯು.ಬಿ. ಫಕೃದ್ದೀನ್ ಅವರನ್ನು ಸನ್ಮಾನಿಸಲಾಯಿಇತು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಎಚ್. ಬೀರಪ್ಪ, ತಾಪಂ ಮಾಜಿ ಅಧ್ಯಕ್ಷ ಬಿ. ಹುಲುಗಪ್ಪ, ಕನಕ ಪತ್ತಿನ ಮಾಜಿ ಅಧ್ಯಕ್ಷ ಗುರುವಿನ ರವೀಂದ್ರ, ಬ್ಯಾಂಕಿನ ಸಹಕಾರ್ಯದರ್ಶಿ ಆರ್. ಕೃಷ್ಣ, ಆರ್.ಎಸ್.ಎಸ್.ಎನ್ ಸೊಸೈಟಿ ಮಾಜಿ ಅಧ್ಯಕ್ಷ ಕೆ. ಲಕ್ಷ ್ಮಣ, ವಕೀಲರಾದ ಕೆ.ಎಚ್. ಮಲ್ಲಪ್ಪ, ಎಚ್. ಅಂಜಿನಪ್ಪ, ಈಟಿ ವೀರಣ್ಣ, ಬಂದ್ರಕಳ್ಳಿ ಕೋಟೆಪ್ಪ, ಟೆಂಗೂರಿ ಮಲ್ಲಪ್ಪ, ಕೆ. ದ್ಯಾಮಜ್ಜ, ಮೇಟಿ ಪರಮೇಶ್, ಎಂ. ಮೈಲಾರಪ್ಪ, ಪ್ರಾಚಾರ್ಯರಾದ ದ್ಯಾಮಜ್ಜ, ಷಣ್ಮುಖಪ್ಪ ಬಾಗೇವಾಡಿ, ವೈದ್ಯಾಧಿಕಾರಿ ಕೆ. ಬಸವರಾಜ್ ಶಿಕ್ಷಣ ಸಂಯೋಜಕ ನಿಂಗಪ್ಪ, ಮುಖ್ಯಗುರು ಸಣ್ಣಲಕ್ಕಪ್ಪ ಇದ್ದರು.