Advertisement

ದಾಂಪತ್ಯಕ್ಕೆ ವಾರಂಟಿ ಉಂಟು!

07:40 AM Oct 04, 2017 | Harsha Rao |

ಮದುವೆ ಮತ್ತು ವಿಚ್ಛೇದನ ಇಂದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. “ಮದ್ವೆ ಯಾವಾಗ ಆಯ್ತು?’ ಅಂತ ಕೇಳುವುದರೊಳಗೆ, ಆ ಮದ್ವೆ ವಿಚ್ಛೇದನದ ಹಾದಿ ಹಿಡಿದಿರುತ್ತದೆ. ಕೊಡಿ ಬಾಳುವ, ಅರಿತು ನಡೆಯುವ ವ್ಯವಧಾನ ಇಂದು ಯಾರಲ್ಲಿಯೂ ಇಲ್ಲ. ಲವ್‌ ಮ್ಯಾರೇಜ್‌ ಇರಲಿ ಅಥವಾ ಅರೇಂಜ್‌x ಮ್ಯಾರೇಜ್‌ ಇರಲಿ, ಯಾವುದಕ್ಕೂ ಇಂದು ಗ್ಯಾರಂಟಿ- ವಾರಂಟಿ ಇರುವುದಿಲ್ಲ. ಸಣ್ಣ ಸಣ್ಣ ವಿಷಯಗಳಿಗೂ ಗಂಡ ಹೆಂಡತಿ ಕೋರ್ಟ್‌ ಮೆಟಿxಲೇರುತ್ತಾರೆ.
ಹಾಗಾದರೆ, ದಾಂಪತ್ಯವನ್ನು ಮಧುರವಾಗಿ ಇಟ್ಟುಕೊಳ್ಳುವುದು ಹೇಗೆ? ಚಿಕ್ಕ ಚಿಕ್ಕ ವಿಷಯಗಳಿಗೆ ಕಿತ್ತಾಡದೆ, ಸಂಸಾರದಲ್ಲಿ ಸುದೀರ್ಘ‌ ಇನ್ನಿಂಗ್ಸ್‌ ಕಟ್ಟುವುದು ಹೇಗೆ? ಇಲ್ಲಿ ಕೆಲವು ಸಲಹೆಗಳಿವೆ…

Advertisement

1. ಮದ್ವೆಯಾದ ನಂತರ ಕೆಲವರ ಸ್ವಭಾವವೇ ಬದಲಾಗುತ್ತದೆ. “ನೀನು ಏನ್‌ ಮಹಾ?’ ಎಂಬ ಅಹಂಕಾರ ಮೊಳೆಯಲೂಬಹುದು. ಈ ಅಹಂಕಾರವನ್ನು ಆದಷ್ಟು ದೂರತಳ್ಳಿ. ಪರಸ್ಪರರನ್ನು ಗೌರವಿಸುವುದನ್ನು ಕಲಿತರೆ, ಅಲ್ಲಿಯೇ ನೀವು ಗೆದ್ದಂತೆ. ಮಾತುಗಳು ಕೂಡ ವಿನಯಪೂರ್ವಕವಾಗಿರಲಿ.

2. ನಗು ಯಾವಾಗಲೂ ನಿಮ್ಮ ಮೊಗದ ಒಡವೆ ಆಗಿರಲಿ. ಹೆಣ್ಣು ಮದುವೆಯಾಗಿ ಹೊಸ ಮನೆಗೆ ಹೋದಾಗ, ಅಲ್ಲಿ ಯಾರ ವ್ಯಕ್ತಿತ್ವ ಹೇಗಿರುತ್ತದೋ ಎಂಬುದನ್ನು ಗುರುತಿಸುವುದು ಕಷ್ಟ. ಹಾಗಾಗಿ, ನೀವು ನಗು ನಗುತ್ತಾ ಇದ್ದರೆ, ಎಲ್ಲರನ್ನೂ ಆತ್ಮೀಯವಾಗುತ್ತಾ ಹೋಗಬಹುದು. 

3. ನಿಮ್ಮ ಸಂಗತಿಯಲ್ಲಿರುವ ಒಳ್ಳೆಯ ಅಂಶಗಳನ್ನು ಶ್ಲಾ ಸಿ. ಆಗ ಅವರಿಗೆ ನಿಮ್ಮ ಮೇಲೆ ಇನ್ನೂ ಹೆಚ್ಚು ಪ್ರೀತಿ ಮೂಡುತ್ತದೆ. ಅವರ ನಡವಳಿಕೆಯಲ್ಲಿ ಏನಾದರೂ ತಪ್ಪು ಕಂಡರೆ, ನಯವಾಗಿ ಅದನ್ನು ಹೇಳಿ. ಅವರು ಖಂಡಿತವಾಗಿಯೂ ತಿದ್ದಿಕೊಳ್ಳುತ್ತಾರೆ.

4. ನಿಮ್ಮ ಯಾವುದೇ ವಿಚಾರಗಳನ್ನು ಮುಚ್ಚಿಟ್ಟುಕೊಳ್ಳಬೇಡಿ. ಸಾಲ ಮಾಡಿದ್ದರೆ, ಹಿಂದೆ ಯಾರನ್ನಾದರೂ ಪ್ರೀತಿಸಿದ್ದರೆ… ಅವೆಲ್ಲವನ್ನೂ ಒಂದು ಸಂದರ್ಭದಲ್ಲಿ ಹೇಳಿ. ಮುಂದೊಂದು ದಿನ ದಿಢೀರನೆ ಅವರಿಗೆ ಗೊತ್ತಾದರೆ, ಆಗ ಬೇರೆಯದೇ ಅಭಿಪ್ರಾಯ ಮೂಡುವ ಅಪಾಯವಿರುತ್ತದೆ. 

Advertisement

5. ಗಂಡನ ಮನೆಯವರು, ಅಮ್ಮನ ಮನೆಯವರು ಎಂಬ ತಾರತಮ್ಯಗಳನ್ನು ನವವಧು ಮಾಡಲು ಹೋಗಬಾರದು. ನೀವು ಎಲ್ಲರನ್ನೂ ಒಂದೇ ರೀತಿ ಕಂಡರೆ, ಸಂಗಾತಿಯ ಮನಸ್ಸನ್ನು ಸಂಪೂರ್ಣ ಗೆದ್ದೀರೆಂದೇ ಲೆಕ್ಕ.

– ಕಾವ್ಯ ಎಚ್‌.ಎನ್‌. ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next