Advertisement

ಕೇಂದ್ರ ಸರಕಾರಕ್ಕೆ ಎಚ್ಚರಿಕೆ

06:25 AM Dec 18, 2018 | |

ಸಿಂಗಾಪುರ: ಭಾರತೀಯ ರಿಸರ್ವ್‌ ಬ್ಯಾಂಕ್‌ ಮೇಲೆ ನಿರಂತರ ಹಾಗೂ ತೀವ್ರವಾಗಿ ಸರಕಾರ ಒತ್ತಡ ಹೇರಿದರೆ ಕಳೆದ ಕೆಲವು ವರ್ಷಗಳಿಂದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಸುಧಾರಣೆಯ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಹಣಕಾಸು ವಿಶ್ಲೇಷಣೆ ಸಂಸ್ಥೆ ಸ್ಟಾಂಡರ್ಡ್‌ ಆ್ಯಂಡ್‌ ಪೂರ್‌ ಹೇಳಿದೆ. 

Advertisement

2019ರ ಜನವರಿಯಲ್ಲಿ ನಡೆಯಲಿರುವ ಆರ್‌ಬಿಐ ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಧಾರಗಳ ಮೇಲೆ ನಾವು ಗಮನ ಹರಿಸಿ ದ್ದೇವೆ. ಆದರೆ ಸದ್ಯದ ಮಟ್ಟಿಗೆ ಆರ್‌ಬಿಐ ಸ್ವಾಯತ್ತತೆ ಯಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡು  ಬಂದಿಲ್ಲ. ಇತರ ದೇಶಗಳಿಗಿಂತ ಭಾರತದ ಆರ್‌ಬಿಐ ಹೆಚ್ಚು ಸ್ವಾಯತ್ತತೆ ಅನುಭವಿಸುತ್ತಿದೆ. ಅಷ್ಟೇ ಅಲ್ಲ ಇದು ಸಾಂಸ್ಥಿಕವಾಗಿಯೂ ಉತ್ತಮ ಸಂಸ್ಕೃತಿ ಹೊಂದಿದೆ ಎಂದು ಸಂಸ್ಥೆ ಹೇಳಿದೆ.
 

Advertisement

Udayavani is now on Telegram. Click here to join our channel and stay updated with the latest news.

Next