Advertisement
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಸದ್ಭಾವನೆಯಿಂದ ಕೈಗೊಂಡ ಸಮಕ್ಷ ಪ್ರಾಧಿಕಾರಿ ಅಧಿಕಾರ ಚಲಾಯಿಸುವಾಗ ಯಾವುದೇ ವ್ಯಕ್ತಿ ವಿರುದ್ಧ, ದಾವೆ ಅಥವಾ ಇತರ ಕಾನೂನುಗಳು ವ್ಯವಹಾರ ಹೂಡತಕ್ಕದ್ದಲ್ಲ ಎಂದು ಸೂಚಿಸಿದರು.
ಧಿಕಾರದ 3ರ ಅಡಿಯಲ್ಲಿ ಜಾನುವಾರು ಹತ್ಯೆ ನಿಷೇಧ ಹಾಗೂ ಜಾನುವಾರು ಸಾಗಾಣಿಕೆ ಮೇಲೆ ನಿಬಂಧ, ಜಾನುವಾರು ಹತ್ಯೆಗಾಗಿ, ಜಾನುವಾರು ಮಾರಾಟ,
ಖರೀದಿ ಮಾಡತಕ್ಕದ್ದಲ್ಲ ಎಂದು ವಿವರಿಸಿದರು. ಶೋಧಿಸುವ, ಜಪ್ತಿ ಮಾಡುವಾಗ ಕಾರಣದ ಆಧಾರದ ಮೇಲೆ ಅಪರಾಧ ವಿಚಾರಣೆ ಮಾಡಲು ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಸರಕಾರದ ಈ ಕರ್ನಾಟಕ
ಆದ್ಯಾದೇಶ 1ರಡಿಯಲ್ಲಿ ವಿವಾದಗಳ ತ್ವರಿತ ವಿಲೆಯ ಉದ್ದೇಶಕ್ಕಾಗಿ ಅಧಿ ಸೂಚನೆ ಮೂಲಕ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯದ ರಚನೆ ಮಾಡಲಾಗಿದೆ
ಎಂದು ವಿವರಿಸಿದರು.
Related Articles
ಪ್ರಾಮಾಣೀಕರಿಸಬೇಕು ಎಂದರು.
Advertisement
ಜಿಲ್ಲೆಯಲ್ಲಿರುವ ಮೂರು ಗೋ ಶಾಲೆಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಂತೆ ಯಾವುದೇ ಜಾನುವಾರುಗಳನ್ನು ಸಂರಕ್ಷಿಸಲು ಗೋಶಾಲೆಗಳು ಬದ್ಧವಾಗಿವೆ. ಜಾನುವಾರುಗಳ ಸಾಗಾಣಿಕೆ ಕುರಿತಂತೆ ಜಿಲ್ಲಾ ಧಿಕಾರಿಗಳು ಈಗಿರುವ 15 ಕಿ.ಮೀ. ವ್ಯಾಪ್ತಿ ಸಮಂಜಸವಲ್ಲ. ಕೃಷಿಕರಿಗೆ ಹಾಗೂ ಜಾನುವಾರು ಸಾಕಾಣಿಕೆದಾರರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಸಂಚರಿಸುವ ಬಿಡಾಡಿದನಗಳ ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಆಯುಕ್ತರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವ ಜಾನುವಾರುಗಳನ್ನು ಪರೀಕ್ಷಿಸಿ ಖರೀದಿ ಮಾಡುವವರು ಕಡ್ಡಾಯವಾಗಿ ಕಿವಿ ಓಲೆ ಅಳವಡಿಸಿ, ಜಾನುವಾರು ಮಾತ್ರ ಸಂತೆಯಲ್ಲಿ ಮಾರುವಂತೆ ಕೃಷಿ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪಶು ವೈದ್ಯರು ಎಲ್ಲ ಜಾನುವಾರುಗಳಿಗೆ ಶೇಕಡಾ ನೂರರಷ್ಟು ಎತ್ತು ಮತ್ತು ಹೋರಿಗಳ ಮಾಲೀಕರನ್ನು ಮನವೊಲಿಸಿ ಕಿವಿ ಓಲೆ ಅಳವಡಿಸಬೇಕು. ಗೋಹತ್ಯೆ ಸಂಬಂಧಿಸಿದ ಪ್ರಸಂಗದಲ್ಲಿ ಆಹಾರ ಸುರಕ್ಷಾ ಅಧಿಕಾರಿಗಳು ಆಹಾರ ಮಾಂಸದ ಪರೀಕ್ಷೆ ಹಾಗೂ ಅದರ ಮೂಲವನ್ನು ಕಂಡು ಹಿಡಿಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್‌ಗಳಲ್ಲಿ ಇತರ ರಾಜ್ಯಗಳಿಂದ ಬರುವ ಜಾನುವಾರುಗಳ ಸಾಗಾಣಿಕೆ ವಾಹನಗಳ ಮೇಲೆ ನಿಗಾವಹಿಸಿ ಕಾನೂನು ಉಲ್ಲಂಘನೆ
ಆಗದಂತೆ ಕ್ರಮ ಕೈಗೊಳ್ಳಬೇಕು. ಪೊಲೀಸರು ಗೋಹತ್ಯೆ ತಡೆಯಲು ಕಾನೂನು ಉಲ್ಲಂಘಿಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಮುಂಬರುವ ದಿನಗಳಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ನೀಡುವ ನಿರ್ದೇಶನದನ್ವಯ ಪ್ರಾಣಿ ಕಲ್ಯಾಣ ಕಾರ್ಯಕ್ರಮದಲ್ಲಿ ತೊಡಗಿದ ಎಲ್ಲ ಸದಸ್ಯರಿಗೆ
ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಮಾಹಿತಿ ನೀಡಬೇಕು. ಗೋಶಾಲೆ ಆಡಳಿತ ಮಂಡಳಿ ಅವರನ್ನು ಮತ್ತು ಅಧಿಕಾರಿ ವರ್ಗದವರನ್ನು ಸೇರಿಸಿ ಸಭೆ ನಡೆಸಿ, ಜಿಲ್ಲಾ ಪ್ರಾಣಿ ದಯಾ ಸಂಘ ಕೈಗೊಳ್ಳಬೇಕಾದ ಚಟುವಟಿಕೆ ಕುರಿತು ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ| ಪ್ರಾಣೇಶ ಜಾಗೀರದಾರ, ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ
ಸೇರಿದಂತೆ ಜಿಲ್ಲೆಯ ಪ್ರಾಣಿ ದಯಾ ಸಂಘದ ಸದಸ್ಯರು, ಗೋ ಶಾಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.