Advertisement

ಸ್ಮಿತ್‌, ವಾರ್ನರ್‌ ಇಲ್ಲದಿರುವುದು ಭಾರತದ ತಪ್ಪಲ್ಲ: ಗಾವಸ್ಕರ್‌

12:30 AM Jan 08, 2019 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಸರಣಿ ಗೆದ್ದ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಅಭಿನಂದನೆ ಸಲ್ಲಿಸುವುದರೊಂದಿಗೆ ಈ ಜಯ ದುರ್ಬಲ ಆಸ್ಟ್ರೇಲಿಯ ವಿರುದ್ಧ ಬಂದಿದೆ ಎಂದು ಟೀಕಿಸಿದ್ದಾರೆ.

Advertisement

ಡೇವಿಡ್‌ ವಾರ್ನರ್‌ ಹಾಗೂ ಸ್ಟೀವನ್‌ ಸ್ಮಿತ್‌ ಆಸ್ಟ್ರೇಲಿಯದ ತಂಡದಲ್ಲಿ ಇಲ್ಲದಿರುವುದು ಭಾರತದ ತಪ್ಪಲ್ಲ. ಕ್ರಿಕೆಟ್‌ ಆಸ್ಟ್ರೇಲಿಯ ಅವರ ನಿಷೇಧವನ್ನು ಕುಂಠಿತಗೊಳಿಸಬಹುದಿತ್ತು. ಆದರೆ ಕ್ರಿಕೆಟಿಗೆ ಗೌರವಕ್ಕೆ ಚ್ಯುತಿ ತರುವವರಿಗೆ ಶಿಕ್ಷೆಯ ತೀವ್ರತೆಯನ್ನು ಪರಿಚಯಿಸಲು ಇಂಥದೊಂದು ನಿಷೇಧ ಹೇರಿದ್ದು ಉತ್ತಮ ವಿಚಾರವಾಗಿದೆ. ನಾವು ಕೂಡ ಗೆಲ್ಲಬೇಕೆಂದೇ ಆಡುತ್ತಿದ್ದೆವು. ಆದರೆ ಫಿಟ್‌ನೆಸ್‌, ನಾಯಕನ ಮಾರ್ಗದರ್ಶನ ಮೊದಲಾದ ವಿಚಾರದಲ್ಲಿ ಇಂದಿನ ತಂಡ ವಿಭಿನ್ನವಾಗಿದೆ’ ಎಂದು ಸುನೀಲ್‌ ಗವಾಸ್ಕರ್‌ ಹೇಳಿದರು.

ಅಭಿನಂದನೆಗಳು ಟೀಮ್‌ ಇಂಡಿಯಾ…
“ಇಂದು ಭಾರತೀಯ ಕ್ರಿಕೆಟ್‌ ಪಾಲಿಗೆ ಸ್ಮರಣೀಯ ದಿನ. ಟೀಮ್‌ ಇಂಡಿಯಾದ ತಿರುಗಿ ಬೀಳುವ ಗುಣದಿಂದಾಗಿ ಈ ಸರಣಿ ಒಲಿದಿದೆ. ಯುವ ಹಾಗೂ ಹಿರಿಯ ಆಟಗಾರರು ಜವಾಬ್ದಾರಿಯನ್ನು ಹಂಚಿಕೊಂಡು ಸರಣಿಯನ್ನು ವಿಶೇಷವನ್ನಾಗಿಸಿದ್ದಾರೆ. ರಿಷಬ್‌ ಪಂತ್‌ ಹಾಗೂ ಕುಲ್‌ದೀಪ್‌ ಅವರನ್ನು ಇಲ್ಲಿ ನೆನೆಯಲೇಬೇಕು’
– ಸಚಿನ್‌ ತೆಂಡುಲ್ಕರ್‌

“ಆಸ್ಟ್ರೇಲಿಯದಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಜಯಿಸಿರುವ ಟೀಮ್‌ ಇಂಡಿಯಾಗೆ ಅಭಿನಂದನೆಗಳು. ಇದು ಸಂಪೂರ್ಣವಾಗಿ ತಂಡದ ಪ್ರಯತ್ನ. ತಂಡದ ಪ್ರತಿಯೊಬ್ಬ ಸದಸ್ಯರೂ ಉತ್ತಮ ರೀತಿಯಲ್ಲಿ ಆಟವಾಡಿ ಸಂತೃಪ್ತಿ ಭಾವ ತುಂಬಿದ್ದಾರೆ’
– ವಿ.ವಿ.ಎಸ್‌. ಲಕ್ಷ್ಮಣ್‌

“ಅವಿಸ್ಮರಣೀಯ ಗೆಲುವಿಗಾಗಿ ಭಾರತದ ತಂಡಕ್ಕೆ ಅಭಿನಂದನೆಗಳು. ತಂಡದ ಪ್ರತಿಯೊಬ್ಬ ಆಟಗಾರನ ಪ್ರಯತ್ನದ ಫ‌ಲದಿಂದ ಈ ಫ‌ಲಿತಾಂಶ ಬಂದಿದೆ. ಭಾರತದಲ್ಲಿರುವ ಎಲ್ಲ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಇದು ಹೆಮ್ಮೆಯ ಕ್ಷಣ’
– ವೀರೇಂದ್ರ ಸೆಹವಾಗ್‌

Advertisement

“ವೆಲ್‌ ಡನ್‌ ಟೀಮ್‌ ಇಂಡಿಯಾ. ಆಸ್ಟ್ರೇಲಿಯದಲ್ಲಿ ಸರಣಿ ಗೆದ್ದ ತಂಡಕ್ಕೆ ಅಭಿನಂದನೆಗಳು. ಭಾರತದ ಬ್ಯಾಟಿಂಗ್‌ ಲೈನ್‌ ಆಪ್‌ನ ಬ್ಯಾಕ್‌ಬೋನ್‌ ಆಗಿ ಬದಲಾಗಿರುವ ಚೇತೇಶ್ವರ್‌ ಪೂಜಾರನಿಗೂ ಅಭಿನಂದನೆಗಳು. ಇದೇ ರೀತಿ ಆಟವನ್ನು ಮುಂದುವರಿಸಿ. ಜಸ್‌ಪ್ರೀತ್‌ ಬುಮ್ರಾ ಅವರ ಬೌಲಿಂಗ್‌ ಅದ್ಭುತ. ನಿಮ್ಮ ಬೌಲಿಂಗ್‌ ಇಷ್ಟವಾಗಿದೆ’
– ಹರ್ಭಜನ್‌ ಸಿಂಗ್‌

“ಇತಿಹಾಸ ಸೃಷ್ಟಿಸಿರುವ ಭಾರತೀಯ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳು. ಆಸ್ಟ್ರೇಲಿಯದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಸರಣಿ ಗೆದ್ದಿರುವುದು ಹೆಮ್ಮೆಯ ಸಾಧನೆ. ಚೇತೇಶ್ವರ್‌ ಪೂಜಾರ ಹಾಗೂ ಬೌಲಿಂಗ್‌ ತಂಡ  ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಬುಮ್ರಾ ಬೌಲಿಂಗ್‌ ನೋಡುವಾಗ ರೋಮಾಂಚನವಾಗುತ್ತಿತ್ತು’
– ಮಿಚೆಲ್‌ ಜಾನ್ಸನ್‌

“ಭಾರತದ ಐತಿಹಾಸಿಕ ಟೆಸ್ಟ್‌ ಸರಣಿ ಜಯ. ಒಂದು ಉತ್ತಮ ಪ್ರಯತ್ನ. ತಂಡದ ಸದಸ್ಯರೆಲ್ಲರ ಕೊಡುಗೆ ಶ್ಲಾಘನೀಯ. ಸ್ಮರಣೀಯ ಪ್ರದರ್ಶನ ನೀಡಿದ ನಾಯಕ, ಮುಖ್ಯ ಕೋಚ್‌ ಹಾಗೂ ತಂಡದ ಎಲ್ಲ ಸದಸ್ಯರಿಗೂ ಅಭಿನಂದನೆಗಳು’
– ವಿನೋದ್‌ ರಾಯ್‌, ಸಿಒಎ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next