ಹೊಸದಿಲ್ಲಿ: ಶೇನ್ ವಾರ್ನ್ ಅವರು ತಮ್ಮ ಬೌಲಿಂಗ್ ನಲ್ಲಿ ಮ್ಯಾಜಿಕ್ ಎಸೆತಗಳನ್ನು ಪ್ರದರ್ಶಿಸಿದರು ಮತ್ತು ಕಷ್ಟಕರವಾದ ಕರಕುಶಲತೆಯನ್ನು ಕರಗತ ಮಾಡಿಕೊಂಡಿದ್ದರು, ಅವರನ್ನು ನಾನು ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಅನ್ನುವುದಿಲ್ಲ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯನ್ ದಂತಕಥೆ ಎಂದು ಪರಿಗಣಿಸಲ್ಪಟ್ಟ ದಿವಂಗತ ಶೇನ್ ವಾರ್ನ್ ವೃತ್ತಿಜೀವನದಲ್ಲಿ ಭಾರತದ ಎದುರು ಅವರ ಪ್ರದರ್ಶನವು ಸಾಧಾರಣ, ಸಾಮಾನ್ಯ ವಾಗಿತ್ತು ಎಂಬ ಕಾರಣಕ್ಕೆ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಆಗಿರಲಿಲ್ಲ ಎಂದರು.
ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಗವಾಸ್ಕರ್ ಅವರು ಈ ಅಭಿಪ್ರಾಯ ಹೊರ ಹಾಕಿದ್ದು, ಮುತ್ತಯ್ಯ ಮುರಳೀಧರನ್ ಅವರು ಗ್ರೇಟ್ ಅನ್ನಬಹುದು, ವಾರ್ನ್ ಗಿಂತ ಉತ್ತಮ ನಿರ್ವಹಣೆ ಅವರು ತೋರಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶೇನ್ ವಾರ್ನ್ ಸಾವು: ಶವಪರೀಕ್ಷೆಯ ಬಳಿಕ ಥಾಯ್ ಪೊಲೀಸರು ಹೇಳಿದ್ದೇನು?
ವಾರ್ನ್, 1992 ರಲ್ಲಿ ಪಾದಾರ್ಪಣೆ ಮಾಡಿದ ನಂತರ, ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳನ್ನು ಆಡಿದರು, ತಮ್ಮ ಲೆಗ್ ಸ್ಪಿನ್‌ನೊಂದಿಗೆ 708 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ 194 ಏಕದಿನ ಪ್ರದರ್ಶನಗಳಲ್ಲಿ, ಅವರು 293 ವಿಕೆಟ್ ಗಳನ್ನು ಪಡೆದಿದ್ದರು.
ಫಿಂಗರ್ ಸ್ಪಿನ್ ತುಂಬಾ ಸುಲಭ, ನೀವು ಬೌಲ್ ಮಾಡಲು ಬಯಸುವ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣವಿರುತ್ತದೆ, ಆದರೆ ಲೆಗ್ ಸ್ಪಿನ್ ಅಥವಾ ರಿಸ್ಟ್ ಸ್ಪಿನ್ ತುಂಬಾ ಕಠಿಣ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.