Advertisement

ಇ-ಕಾರ್ಟ್ ನಿಂದ ವೇರ್ ಹೌಸ್ ಸೌಲಭ್ಯ ಆರಂಭ

11:55 PM Feb 23, 2023 | Team Udayavani |

ಬೆಂಗಳೂರು: ಭಾರತದ ಅತಿದೊಡ್ಡ ಸರಬರಾಜು ಜಾಲವನ್ನು ಹೊಂದಿರುವ ಇ-ಕಾರ್ಟ್ ದೇಶಾದ್ಯಂತ ಗೋದಾಮುಗಳನ್ನು (ವೇರ್ ಹೌಸ್) ಆರಂಭಿಸಿದೆ. ಬ್ರ್ಯಾಂಡ್ ಗಳು, ಉತ್ಪಾದಕರು, ರೀಟೇಲರ್ ಗಳು ಮತ್ತು ಎಸ್ಎಂಇಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಗೋದಾಮುಗಳನ್ನು ಆರಂಭಿಸಲಾಗಿದೆ. ದೇಶದ ಪ್ರಮುಖ ಲಾಜಿಸ್ಟಿಕ್ ಸಂಸ್ಥೆಯಾಗುವ ತನ್ನ ಗುರಿಯ ಭಾಗವಾಗಿ ಈ ಗೋದಾಮುಗಳನ್ನು ಆರಂಭಿಸಲಾಗಿದೆ. ಈ ಗೋದಾಮುಗಳು ಇ-ಕಾರ್ಟ್ ತಂತ್ರಜ್ಞಾನವನ್ನು ಬಳಸುತ್ತಿರುವ ಎಲ್ಲಾ ಬಗೆಯ ಬ್ರ್ಯಾಂಡ್ ಗಳು, ಗಾತ್ರಗಳು, ಉತ್ಪಾದಕರು ಮತ್ತು ರೀಟೇಲರ್ ಗಳಿಗೆ ಲಭ್ಯವಿವೆ. ಇವುಗಳ ಮೂಲಕ ಸರಳವಾಗಿ, ಕೈಗೆಟುಕುವ ದರದಲ್ಲಿ ಸ್ಟೋರೇಜ್ ಪರಿಹಾರಗಳನ್ನು ಪಡೆದುಕೊಳ್ಳಬಹುದಾಗಿದೆ.

Advertisement

ವ್ಯಾಪಾರಸ್ಥರ ಅಗತ್ಯತೆಗೆ ಅನುಗುಣವಾಗಿ ಇ-ಕಾರ್ಟ್ ತನ್ನ ಗೋದಾಮುಗಳಲ್ಲಿ ತಾಪಮಾನ ನಿಯಂತ್ರಣ ಸ್ಟೋರೇಜ್ ಮತ್ತು ಅಧಿಕ ಮೌಲ್ಯದ ಉತ್ಪನ್ನಗಳನ್ನು ಸಂಗ್ರಹ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸುತ್ತಿದೆ.

ಇಕಾರ್ಟ್ ಸಮಗ್ರ ಭಾರತ ಸರಬರಾಜು ಸರಣಿ ಜಾಲವನ್ನು ಹೊಂದಿದ್ದು, 20 ಮಿಲಿಯನ್ ಚದರಡಿಗೂ ಅಧಿಕ ವಿಸ್ತೀರ್ಣವನ್ನು ಹೊಂದಿದೆ. ಈ ಗೋದಾಮುಗಳ ವ್ಯವಸ್ಥೆಯನ್ನು ಆರಂಭಿಕವಾಗಿ ಹರ್ಯಾಣದ ಬಿಲಾಸ್ಪುರ, ಕರ್ನಾಟಕದ ಮಾಲೂರು, ಮುಂಬೈನ ಸಾಯಿಧಾಮ ಮತ್ತು ಪಶ್ಚಿಮ ಬಂಗಾಳದ ಉಲುಬೇರಿಯಾದಲ್ಲಿ ನಾಲ್ಕು ಗೋದಾಮುಗಳನ್ನು ಆರಂಭಿಸಿದೆ. ಇವುಗಳಲ್ಲದೇ, ಎಲ್ಲಾ ಗಾತ್ರದ ಉತ್ಪನ್ನಗಳ ಶೇಖರಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 17 ಸಹಭಾಗಿತ್ವದ ಗೋದಾಮುಗಳನ್ನು ಆರಂಭಿಸಿದೆ. ವಿಸ್ತಾರವಾದ ಗೋದಾಮುಗಳು ಸಾಗಣೆ ಸಮಯ ಮತ್ತು ಉತ್ತಮ ವಿತರಣಾ ವೇಗವನ್ನು ಕಡಿಮೆ ಮಾಡಲು ನೆರವಾಗುವ ಮೂಲಕ ಗ್ರಾಹಕರಿಗೆ ಆರ್ಡರ್ ಗಳ ಬೇಡಿಕೆಯನ್ನು ಈಡೇರಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅತ್ಯಾಧುನಿಕ, ಅತ್ಯುತ್ತಮ ದರ್ಜೆಯ ಪೂರೈಕೆ ಕೇಂದ್ರಗಳು ಆರ್ಡರ್ ಗಳ ಸುರಕ್ಷಿತ ಮತ್ತು ತ್ವರಿತ ವಿತರಣೆಯನ್ನು ಸುಲಭಗೊಳಿಸಲು ಸಜ್ಜುಗೊಂಡಿವೆ. ಇಕಾರ್ಟ್ 80+ ಉತ್ಪನ್ನಗಳ ವಿಭಾಗಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲಾ ಬಗೆಯ ಬ್ರ್ಯಾಂಡ್ ಗಳಿಗೆ ತನ್ನ ಸೇವೆಯನ್ನು ನೀಡುತ್ತಿದೆ.

ಈ ಬಗ್ಗೆ ಮಾತನಾಡಿದ ಇಕಾರ್ಟ್ ಚೀಫ್ ಬ್ಯುಸಿನೆಸ್ ಆಫೀಸರ್ ಮಣಿ ಭೂಷಣ್ “ಇಕಾರ್ಟ್ ಇಂದು ದೇಶದಲ್ಲಿ ಅತಿ ದೊಡ್ಡ ಸಪ್ಲೈ ಚೇನ್ ಕಂಪನಿಗಳಲ್ಲಿ ಒಂದಾಗಿದೆ. ವ್ಯವಹಾರಗಳ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೆರವಾಗಲು ನಾವು ಬದ್ಧರಾಗಿದ್ದೇವೆ’’ ಎಂದರು.

ಇಕಾರ್ಟ್ ಪೂರೈಸುವಿಕೆ ಮತ್ತು ವಿಂಗಡಣೆ ಕೇಂದ್ರಗಳ ವಿಶಾಲವಾದ ಜಾಲವನ್ನು ಹೊಂದಿದೆ ಮತ್ತು ಸಾವಿರಾರು ವಿತರಣಾ ಕೇಂದ್ರಗಳನ್ನು ಹೊಂದಿದೆ. ಇದು ಎಲ್ಲಾ ಸೇವೆಯ ಪಿನ್ ಕೋಡ್ ಗಳಲ್ಲಿ ಪ್ರತಿ ತಿಂಗಳೂ 120 ಮಿಲಿಯನ್ ಗೂ ಅಧಿಕ ಪ್ಯಾಕೇಜ್ ಗಳನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next