Advertisement

ವಾರ್ಡ್‌ನ್‌ಗಳು ಪ್ರಾಮಾಣಿಕವಾಗಿ ಕಾರ್ಯ ಶ್ರಮಿವಹಿಸಲಿ

02:49 PM Dec 13, 2017 | |

ಕಡೂರು: ಹಾಸ್ಟೆಲ್‌ಗ‌ಳಲ್ಲಿ ಜವಾಬ್ದಾರಿಯುತ ಸ್ಥಾನ ಪಡೆದಿರುವ ವಾರ್ಡ್‌ನ್‌ಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ
ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಲು ಪ್ರೇರಪಣೆಯಾಗುತ್ತದೆ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ
ರವೀಂದ್ರ ಬೆಳವಾಡಿ ಹೇಳಿದರು.

Advertisement

ಕಡೂರಿನ ಪಿಸಿಎಲ್‌ಡಿ ಬ್ಯಾಂಕ್‌ ಆವರಣದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಹಾಸ್ಟೆಲ್‌ ವಾರ್ಡ್‌ನ್‌ 
ಮತ್ತು ಅಡುಗೆ ಸಹಾಯಕರ ಒಂದು ದಿನದ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಾಸ್ಟೆಲ್‌ಗ‌ಳಲ್ಲಿ ವಾರ್ಡನ್‌ಗಳು ತಂದೆ ತಾಯಿಗಳ ಸ್ಥಾನಕ್ಕೆ ಪರ್ಯಾಯವಾಗಿರುತ್ತಾರೆ. ಸಹಜವಾಗಿ ವಿದ್ಯಾರ್ಥಿಗಳು ಕೆಲವು
ತಪ್ಪುಗಳನ್ನು ಮಾಡಿದರೂ ಅದನ್ನು ತಿದ್ದಿ ಸರಿದಾರಿಯಲ್ಲಿ ಅವರನ್ನು ತರುವ ನಿಟ್ಟಿನಲ್ಲಿ ವಾರ್ಡನ್‌ಗಳ ಜವಾಬ್ದಾರಿ ಅತಿ ಮಹತ್ವದ್ದಾಗಿದೆ. ಅವರ ಜೊತೆಯಲ್ಲಿ ಅಡುಗೆ ಸಹಾಯಕರು ಕೇವಲ ಅಡುಗೆ ಮಾಡುವುದನ್ನು ಮಾತ್ರವೇ ತಮ್ಮ ಕೆಲಸ ಎಂದು ಭಾವಿಸದೆ ಕರ್ತವ್ಯ ನಿರ್ವಹಿಸಿದ್ದಲ್ಲಿ ಸರ್ಕಾರದ ಸವಲತ್ತುಗಳು ಸದುಪಯೋಗವಾಗುತ್ತವೆ ಎಂದರು. 

ಜಿಪಂ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌ ಮಾತನಾಡಿ, ಈ ರೀತಿಯ ಕಾರ್ಯಾಗಾರಗಳಲ್ಲಿ ವಾರ್ಡನ್‌ ಮತ್ತು ಅಡುಗೆ ಸಹಾಯಕರು ತಮ್ಮ ಸಮಸ್ಯೆಗಳನ್ನು ತಿಳಿಸಿದರೆ ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬಹುದು, ಇದಲ್ಲದೆ ಇಂತಹ 
ಕಾರ್ಯಕ್ರಮಗಳಲ್ಲಿ ಹಿಂದುಳಿದ ವರ್ಗಗಳನ್ನು ಸಬಲೀಕರಣಗೊಳಿಸಲು ಶ್ರಮಿಸಿದ ಮಹಾನ್‌ ಚೇತನಗಳಾದ ಅಂಬೇಡ್ಕರ್‌, ದೇವರಾಜ ಅರಸು ಅವರು ಭಾವಚಿತ್ರಕ್ಕೆ ನಮಿಸುವ ಪರಿಪಾಠವನ್ನು ಆರಂಭಿಸಿ ಎಂದರು.  ಯಗಟಿ ಜಿ.ಪಂ.ಸದಸ್ಯ ಶರತ್‌ ಕೃಷ್ಣಮೂರ್ತಿ ಮಾತನಾಡಿದರು.

ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಡಿಎಸ್‌ಜಿ ಕಾಲೇಜಿನ ಗ್ರಂಥಪಾಲಕ ನರೇಂದ್ರ
ಮತ್ತು ಕುಮಾರಸ್ವಾಮಿ ಅವರು ಉಪನ್ಯಾಸ ನೀಡಿದರು. ಜಿಪಂ ಸದಸ್ಯರಾದ ಕಾವೇರಿ ಲಕ್ಕಪ್ಪ, ಲೋಲಾಕ್ಷಿಬಾಯಿ, ವನಮಾಲಾ ದೇವರಾಜ್‌, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್‌, ಐಡಿಡಿಪಿ ಹಟ್ಟಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ, ಬಿಸಿಎಂ ವಿಸ್ತರಣಾಧಿಕಾರಿ ನಾಗವಲ್ಲಿ, ಸಿ.ಆರ್‌. ಅಹ್ಮದ್‌ ಇದ್ದರು. ಪತ್ರಕರ್ತ ಸುಬ್ರಹ್ಮಣ್ಯ ಅಧಿಕಾರಿಗಳಿಗೆ ಹಾಸ್ಟೆಲ್‌ಗಳ ನಿರ್ವಹಣೆಯ ಮತ್ತು ಸಮಸ್ಯೆಯ ಬಗ್ಗೆ ಸೂಕ್ತ ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next