ಕೈಗೊಳ್ಳಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು. 22ನೇ ವಾರ್ಡ್‌ನ ಸಾಮೆತ್ತಡ್ಕ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಇಂಟರ್ ಲಾಕ್ ಅಳವಡಿಸಿದ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
Advertisement
ಹಿರಿಯ ಸದಸ್ಯ ಎಚ್. ಮಹಮ್ಮದ್ ಆಲಿ ಮಾತನಾಡಿ, ಈ ವಾರ್ಡ್‌ನ ನಗರಸಭಾ ಸದಸ್ಯೆ ಉಷಾ ಧನಂಜಯ ಆಚಾರ್ಯ ಅವರ ಕೋರಿಕೆಯಂತೆ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ನಗರಸಭೆ ಕೈಗೆತ್ತಿಕೊಂಡಿದೆ. ನಗರಸಭೆಯ ಪ್ರಸ್ತುತ ಆಡಳಿತ ಅವಧಿ ಮುಗಿಯುವ ಮೊದಲು ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಾಮೆತ್ತಡ್ಕ ಜಂಕ್ಷನ್‌ನಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುವುದು. ಪಾರ್ಕ್ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನಾರ್ದನ, ಪವಿತ್ರಾ, ವಸಂತ, ಅಶ್ವಿನಿ, ಮೀನಾಕ್ಷಿ, ಅನಿತಾ, ಶಿವಪ್ಪ, ಸೌಮ್ಯಾ, ಮಂಜುಳಾ, ಶ್ರೀಧರ್ ಆಚಾರ್ಯ
ಇದ್ದರು. ನಗರಸಭೆ ಸದಸ್ಯರಾದ ಮುಖೇಶ್ ಕೆಮ್ಮಿಂಜೆ ಸ್ವಾಗತಿಸಿ, ವಂದಿಸಿದರು.