Advertisement
ನನ್ನ ಕೊಠಡಿಯಲ್ಲಿ 3 ಬೆಡ್‌ಗಳು. 3ನೇ ವ್ಯಕ್ತಿ ಯಾವಾಗಲೂ ತೆಲುಗಿನವರು ಆಗಿರುತ್ತಿದ್ದರು. ಒಬ್ಬರು ಬಿಟ್ಟು ಹೋದರು ಹೊಸದಾಗಿ ಬರುವ ವ್ಯಕ್ತಿ ಕೂಡ ಆಂಧ್ರದವರೇ ಆಗಿರುತ್ತಿದ್ದರು. ಬಹುಶಃ ಇದು ಬೆಂಗಳೂರಿನ 1/3ರಷ್ಟು ಜನಸಂಖ್ಯೆ ತೆಲುಗಿನವರೇ ಎನ್ನುವುದರ ಸೂಚಕವೋ? ಗೊತ್ತಿಲ್ಲ. ಅದರಲ್ಲಿ ಒಬ್ಬ ಗೆಳೆಯ ವಾರಂಗಲ್ ಕಡೆಯವನು. ಯಾವಾಗಲೂ ಹೂಡಿಕೆ, ವ್ಯವಹಾರ, ಸ್ಟಾರ್ಟ್ ಅಪ್, ಬಿಸಿನೆಸ್ ಮೀಟ್ ಮುಂತಾದ ವಿಷಯಗಳನ್ನೇ ಮಾತನಾಡುವವನು. ಹಾಗಾಗಿ ಅವನಿಗೆ “ವಾರಂಗಲ್ ಬಫೆಟ್’ ಎಂದು ನಾನು ನಾಮಕರಣ ಮಾಡಿದ್ದೇ. ಇನ್ನೊಬ್ಬರು ಸಂಗೀತದಲ್ಲಿ ಆಸಕ್ತಿ ಉಳ್ಳವರು. ಮಧ್ಯರಾತ್ರಿಯವರೆಗೂ ನಡೆಯುವ ನಮ್ಮ ಮಾತುಕತೆಗಳ ಪ್ರಮುಖ ಆರೋಪಿಗಳು “ಐಟಿ ಮ್ಯಾನೇಜರ್‌ಗಳೇ.’ ಬಹುಶಃ ಈ ಐಟಿ ಮ್ಯಾನೇಜರ್‌ಗಳು ಸಮಾನತೆಯ ಹರಿಕಾರರು, ಅಸಮಾನತೆಯ ವಿಷಯದಲ್ಲಿ. ಕಚೇರಿಯಲ್ಲಿ ಗೆಳೆಯನಿಗೆ ನೀಡಿದ ಹಣ ಬರದೇ ಬೇಜಾರಿನಲ್ಲಿದ್ದಾಗ, ಕೇಳಲು ಮುಜುಗರ ಎಂದಾಗ ಗೆಳೆಯ ಸೂಚಿಸಿದ ಪರಿಹಾರ ಭಗವದ್ಗೀತೆ ಓದು ಎನ್ನುವುದು. ನಾನು ಇವನು ಭಗವದ್ಗೀತೆಗಿಂತಲೂ ದೊಡ್ಡ ಜ್ಞಾನೋದಯ ನೀಡಿದ ಎಂದು ಮಧ್ಯರಾತ್ರಿ 2ಕ್ಕೆ ನಕ್ಕಿದ್ದು ಇನ್ನೂ ನೆನಪು.
Related Articles
Advertisement
ಕೆಂಚನೂರು